ಲಂಚ ಪಡೆಯುವಾಗ ಎಸಿಬಿ ಕೈಗೆ ಸಿಕ್ಕಿಬಿದ್ದ ಮಾಜಿ ಸಚಿವರ ಪಿಎ
ಯಾದಗಿರಿ, ಆಗಸ್ಟ್ 30 : ಮಾಜಿ ಸಚಿವ ಬಾಬೂರಾವ್ ಚಿಂಚನಸೂರ್ ಅವರ ಆಪ್ತ ಸಹಾಯಕ ಎಸಿಬಿ ಬಲೆಗೆ ಬಿದ್ದಿದ್ದಾನೆ. ಮನೆಗಳನ್ನು ಮಂಜೂರು ಮಾಡಲು 1 ಲಕ್ಷ ರೂ. ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಯಾದಗಿರಿ ನಗರದ ಹೊಸಳ್ಳಿ ಕ್ರಾಸ್ ಮನೆಯಲ್ಲಿ ಮಾಜಿ ಸಚಿವರ ಆಪ್ತ ಸಹಾಯಕ ಆಶಪ್ಪ ಸುಂಕಾರ ಅವರನ್ನು ಬಂಧಿಸಲಾಗಿದೆ. ಬಸವ ವಸತಿ ಯೋಜನೆ ಯಡಿ ಮಂಜೂರಾದ ಮನೆಗಳ ಹಂಚಿಕೆಗೆ ಲಂಚ ಸ್ವೀಕಾರ ಮಾಡುವಾಗ ದಾಳಿ ನಡೆಸಲಾಗಿದೆ.[ಜಾಧವ್ ವಿರುದ್ಧದ ಭೂ ಹಗರಣ, ಎಸಿಬಿ ತನಿಖೆ ಆರಂಭ]

ಬಸವ ವಸತಿ ಯೋಜನೆ ಯಡಿ 73 ಮನೆಗಳನ್ನು ಹಂಚಿಕೆ ಮಾಡಬೇಕಾಗಿತ್ತು. ಪ್ರತಿ ಮನೆಗೆ 6,500 ರೂ. ಲೆಕ್ಕದಲ್ಲಿ ಲಂಚ ಕೇಳಲಾಗಿತ್ತು ಎಂದು ಆರೋಪಿಸಲಾಗಿದೆ. ಅರಮೇಶ್ ಎಂಬುವವರು ಈ ಬಗ್ಗೆ ಎಸಿಬಿಗೆ ದೂರು ಕೊಟ್ಟಿದ್ದರು. 1 ಲಕ್ಷ ರೂ. ಲಂಚ ಸ್ವೀಕಾರ ಮಾಡುವಾಗ ದಾಳಿ ನಡೆಸಿ, ಬಂಧಿಸಲಾಗಿದೆ.[ಕೂಡ್ಲಿಗಿ ತಾಲ್ಲೂಕು ಪಂಚಾಯಿತಿ ಸಿಇಒ ಎಸಿಬಿ ಬಲೆಗೆ]












Click it and Unblock the Notifications