ಚುನಾವಣಾ ಪ್ರಚಾರಕ್ಕಾಗಿ ಸೈಕಲ್ ಏರಿದ ಆಮ್‌ ಆದ್ಮಿಗಳು

ಬೆಂಗಳೂರು, ಮಾರ್ಚ್‌ 26: ಆಮ್ ಆದ್ಮಿ ಪಕ್ಷವು ಚುನಾವಣಾ ಪ್ರಚಾರವನ್ನು ಆರಂಭಿಸಿದೆ. ಶಾಂತಿನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ, ನಿವೃತ್ತ ಐಎಎಸ್ ಅಧಿಕಾರಿ ರೇಣುಕಾ ವಿಶ್ವನಾಥನ್ ಪ್ರಚಾರಾರ್ಥವಾಗಿ ಎಎಪಿ ವತಿಯಿಂದ ಸೈಕಲ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಸುಮಾರು 158ರಷ್ಟು ಸೈಕಲ್ ಸವಾರರಿದ್ದ ರ್ಯಾಲಿಯು ಶಾಂತಿನಗರದ ನಂಜಪ್ಪ ಸರ್ಕಲ್‌ನಿಂದ ಹೊರಟು ಎಂಜಿ ರಸ್ತೆ, ಕಾಡುಗೋಡಿ, ಹಳೇ ಮದ್ರಾಸು ರಸ್ತೆ, ದೊಮ್ಮಲೂರು, ಇಂದಿರಾನಗರ ಮಾರ್ಗವಾಗಿ ಸಂಚರಿಸಿ ಶಾಂತಿನಗರದಲ್ಲಿ ಸಮಾಪ್ತಿಗೊಂಡಿತು.

ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಅವರು 'ರಾಜ್ಯದ ಪ್ರಮುಖ ಮೂರು ಪಕ್ಷಗಳ ದುರಾಡಳಿತ, ಅವಕಾಶವಾದಿತನ ನೋಡಿ ಬೇಸತ್ತಿರುವ ರಾಜ್ಯದ ಜನರು ಈ ಬಾರಿ ನಿಜವಾದ ಬದಲಾವಣೆ ಬಯಸುತ್ತಿದ್ದು, ರಾಜ್ಯದ ಎಲ್ಲೆಡೆ ಸಮಾಜದ ವಿವಿಧ ವಯೋಮಾನದ, ವಿವಿಧ ಕ್ಷೇತ್ರಗಳ ವಿಶೇಷವಾಗಿ ಯುವಜನತೆ ಮತ್ತು ಮಹಿಳೆಯರು ಆಮ್ ಆದ್ಮಿ ಪಕ್ಷ ಸೇರುತ್ತಿರುವುದೇ ಇದಕ್ಕೆ ಸಾಕ್ಷಿ, ರಾಜ್ಯದ ಜನರ ಧ್ವನಿಯಾಗಿ ಪ್ರಾಮಾಣಿಕ ಹಾಗೂ ಪರ್ಯಾಯ ರಾಜಕಾರಣ ನೀಡಲು ಆಮ್ ಆದ್ಮಿ ಪಕ್ಷ ಬದ್ಧವಾಗಿದೆ ಎಂದರು.

AAP party started its election campaign in Bengaluru

ಸೈಕಲ್ ರ್ಯಾಲಿಯಲ್ಲಿ ಶಾಂತಿನಗರದ ಆಪ್ ಕಾರ್ಯಕರ್ತರೊಂದಿಗೆ, ಅಮೆರಿಕಾ ಹಾಗೂ ನ್ಯೂಜಿಲ್ಯಾಂಡ್‌ನಿಂದ ಬಂದಿದ್ದ ಅನಿವಾಸಿ ಭಾರತೀಯರು, ವಿಶೇಷವಾಗಿ ಭಾರತೀಯ ಸಂಜಾತೆ, ಅಮೆರಿಕಾದ ಯುವ ಮಹಿಳಾ ವಿಜ್ಞಾನಿ ಕೂಡ ಪಾಲ್ಗೊಂಡಿದ್ದು ವಿಶೇಷ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+