• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೈತ ವಿರೋಧಿ ಕಾಯ್ದೆ, ಯಡಿಯೂರಪ್ಪ ಮುಂದೆ 7 ಪ್ರಶ್ನೆಗಳು

|

ಬೆಂಗಳೂರು, ಸೆ. 28: ರೈತ ವಿರೋಧಿ ಕಾಯ್ದೆಗಳ ತಿದ್ದುಪಡಿಯನ್ನು ಜಾರಿಗೆ ತರಲು ಹೊರಟಿರುವ ಯಡಿಯೂರಪ್ಪ ಅವರಿಗೆ ಆಮ್ ಆದ್ಮಿ ಪಕ್ಷದ ಏಳು ಪ್ರಶ್ನೆಗಳನ್ನು ಮುಂದಿಟ್ಟಿದೆ ಎಂದು ಆಮ್ ಆದ್ಮಿ ಪಕ್ಷ, ಕರ್ನಾಟಕ ರಾಜ್ಯ ಮಾಧ್ಯಮ ಸಂಚಾಲಕರು ಜಗದೀಶ್ ವಿ ಸದಂ ಹೇಳಿದ್ದಾರೆ.

ರೈತನೇ ನನ್ನ ಉಸಿರು, ರೈತ ನನ್ನ ಜೀವ ಎಂದು ರೈತ ಹೋರಾಟಗಳ ಮೂಲಕ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿ ಅನೇಕ ರೈತ ಪರ ಹೋರಾಟಗಳಲ್ಲಿ ವೀರಾವೇಶದಿಂದ ಘರ್ಜಿಸಿದ್ದ ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರೇ ರೈತರಿಗೆ ಮರಣ ಶಾಸನವನ್ನು ಮಾಡಲು ಹೊರಟಿರುವ ನಿಮಗೆ ಕುರ್ಚಿಯ ಉಳಿಸಿಕೊಳ್ಳುವ ಆಸೆಯೇ ದೊಡ್ಡದಾಯಿತೇ ?

ಕರ್ನಾಟಕ ಬಂದ್; ಯಡಿಯೂರಪ್ಪ ಭಾಷಣದ 5 ಪ್ರಮುಖ ಅಂಶಗಳು ಕರ್ನಾಟಕ ಬಂದ್; ಯಡಿಯೂರಪ್ಪ ಭಾಷಣದ 5 ಪ್ರಮುಖ ಅಂಶಗಳು

1) ಭೂ ಸುಧಾರಣೆ ಕಾಯ್ದೆಯ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದ್ದ ಭವ್ಯ ಇತಿಹಾಸವಿರುವ ಕರ್ನಾಟಕದ ಮುಖ್ಯಮಂತ್ರಿಗಳಾದ ನಿಮಗೆ ಹುಟ್ಟಿದ ಮಣ್ಣಿನ ಸ್ವಾಭಿಮಾನವನ್ನು ಈ ಮರಣ ಶಾಸನಗಳನ್ನು ಜಾರಿಗೊಳಿಸುವ ಮೂಲಕ ಕಳೆಯುವಿರಾ- ಉಳಿಸುವಿರಾ ಅಥವಾ ಕೇಂದ್ರ ಸರ್ಕಾರದ ಮುಂದೆ ಅಡವಿಡುವಿರಾ ಎಂಬುದು ಆಮ್ ಆದ್ಮಿ ಪಕ್ಷದ ಪ್ರಶ್ನೆ. ಈ ಪ್ರಶ್ನೆಗಳಿಗೆ ರಾಜ್ಯದ ಜನತೆಗೆ ನೀವು ಬಹಿರಂಗವಾಗಿ ಉತ್ತರ ನೀಡುವಿರಾ?

 ರೈತರ ಹೆಸರಿನಲ್ಲಿ ಪ್ರಮಾಣ ವಚನ

ರೈತರ ಹೆಸರಿನಲ್ಲಿ ಪ್ರಮಾಣ ವಚನ

2) ಹಸಿರು ಶಾಲು ಹಾಕಿಕೊಂಡು ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರೇ ನಿಮ್ಮ ರೈತ ಪರ ಕೇವಲ ಬೋಗಸ್ ಆಗಿದೆ ಎಂಬುದು ನಿಮಗೆ ಅನ್ನಿಸುತ್ತಿಲ್ಲವೇ ? ರೈತ ಪರ ಕಾಳಜಿ ಇದೆಯೇ ?

3) ರೈತ, ನಾಗರಿಕ ವಿರೋಧಿಯಾದ ಇಂತಹ ತಿದ್ದುಪಡಿಗಳನ್ನು ಜಾರಿಗೆ ತರಲು ಹೊರಟಿರುವ ಕೇಂದ್ರ ಸರ್ಕಾರದ ವಿರುದ್ಧ ಸೆಟೆದೆದ್ದು ನಿಲ್ಲಲು ನಿಮಗೆ ಸಾಧ್ಯವೇ?

 ನಿಮ್ಮ ಆತ್ಮ ಸಾಕ್ಷಿಗೆ ಇದು ಒಪ್ಪುತ್ತಿದೆಯೇ

ನಿಮ್ಮ ಆತ್ಮ ಸಾಕ್ಷಿಗೆ ಇದು ಒಪ್ಪುತ್ತಿದೆಯೇ

4) ನಾನು ರೈತನ ಮಗ ಎಂದು ಹೇಳುವ ನಿಮ್ಮ ಆತ್ಮ ಸಾಕ್ಷಿಗೆ ಇದು ಒಪ್ಪುತ್ತಿದೆಯೇ ದಯವಿಟ್ಟು ತಿಳಿಸಿ?

5) ಇಡೀ ದೇಶದಾದ್ಯಂತ ಬುಗಿಲೆದ್ದಿರುವ ಈ ಆಕ್ರೋಶಕ್ಕೆ ಯಾವ ರೀತಿಯ ತ್ಯಾಗಕ್ಕೆ ಸಿದ್ದರಾಗಿದ್ದೀರಿ?

6) ಕೇವಲ ವಿಧಾನ ಸೌಧದಲ್ಲಿ ನಾನು ರೈತ ಪರ ಎಂದು ಮಾತನಾಡುವ ನೀವು ಬಹಿರಂಗವಾಗಿ ರೈತಾಪಿ ವರ್ಗಗಳಿಗೆ ಯಾವ ಸಂದೇಶವನ್ನು ನೀಡುತ್ತೀರಿ?

ಕರ್ನಾಟಕ ಬಂದ್: ಕೃಷಿ ವಿರೋಧಿ ನೀತಿಗೆ ರೈತರ ಆಕ್ರೋಶಕರ್ನಾಟಕ ಬಂದ್: ಕೃಷಿ ವಿರೋಧಿ ನೀತಿಗೆ ರೈತರ ಆಕ್ರೋಶ

 ಬಹಿರಂಗವಾಗಿ ಮಾತನಾಡಲು ಭಯವೇಕೆ?

ಬಹಿರಂಗವಾಗಿ ಮಾತನಾಡಲು ಭಯವೇಕೆ?

7)A ನೀವು ತರಲು ಹೊರಟಿರುವ ತಿದ್ದುಪಡಿಗಳು ರೈತ ವಿರೋಧಿಯಲ್ಲ ಎಂದಾದರೇ ಬಹಿರಂಗವಾಗಿ ಮಾತನಾಡಲು, ಚರ್ಚೆ ಮಾಡಲು ನಿಮಗೆ ಹೆದರಿಕೆಯೇ? ನಿಮ್ಮ ರಾಜಕೀಯ ಅಸ್ತಿತ್ವಕ್ಕೆ ಕೆಜೆಪಿ ಪಕ್ಷ ಕಟ್ಟಿ ನಿಮ್ಮ ಅಸ್ತಿತ್ವಕ್ಕಾಗಿ ಹೋರಾಡಿದ್ದೀರಿ. ಅದೇ ರೀತಿ ರೈತರು ಕೂಡ ತಮ್ಮ ಅಸ್ತಿತ್ವಕ್ಕೆ ಹೋರಾಟ ಮಾಡ ಬಾರದೆ ?

7) B ಜನಪರ ಹೋರಾಟಗಳ ಮೂಲಕ ಅನ್ಯಾಯವನ್ನು ಪ್ರಶ್ನಿಸುತ್ತಿದ್ದ ನಿಮಗೆ ರೈತರ ವಿಚಾರದಲ್ಲಿ ಆಗುತ್ತಿರುವ ಅನ್ಯಾಯ ನಿಮಗೆ ಹೊಳೆಯುತ್ತಿಲ್ಲವೇ? 78 ವರ್ಷದ ಇಳಿವಯಸ್ಸಿನಲ್ಲಿರುವ ನಿಮಗೆ ಈ ತಿದ್ದುಪಡಿ ಕಪ್ಪು ಚುಕ್ಕೆ ಹಾಗೂ ಜೀವನದ ಮನ್ನಿಸಲಾಗದ ಪಾಪ ಎನಿಸುವುದಿಲ್ಲವೇ?

ಖಾಸಗಿ ಅವರಿಗೆ ದೊಡ್ಡ ಖಜಾನೆಯ ಕೀಲಿ ಕೈ ನೀಡಿದಂತೆ

ಖಾಸಗಿ ಅವರಿಗೆ ದೊಡ್ಡ ಖಜಾನೆಯ ಕೀಲಿ ಕೈ ನೀಡಿದಂತೆ

ನೂತನ ಎಪಿಎಂಸಿ ಕಾಯ್ದೆಯಿಂದ ಖಾಸಗಿ ಅವರಿಗೆ ದೊಡ್ಡ ಖಜಾನೆಯ ಕೀಲಿ ಕೈ ನೀಡಿದಂತೆ ಆಗುತ್ತದೆ. ಮೊದಲಿಗೆ ಸ್ಪರ್ಧಾತ್ಮಕ ಬೆಲೆಯಲ್ಲಿ ರೈತರಿಂದ ಕೊಂಡುಕೊಂಡು ಬರುಬರುತ್ತಾ ರೈತರನ್ನು ಅಡಿಯಾಳಾಗಿಸಿಕೊಳ್ಳುವ ಹುನ್ನಾರ. ಇನ್ನೂ ಅಸಂಘಟಿತರಾಗೇ ಇರುವ ಶೇ 80ರಷ್ಟು ಸಣ್ಣ ಮತ್ತು ಮಧ್ಯಮ ರೈತರ ವ್ಯಾಪಾರದ ಮೂಲವಾದ ಎಪಿಎಂಸಿಯನ್ನು ನಾಶಮಾಡಿ ಕೃಷಿಕ್ಷೇತ್ರವನ್ನು ಉಳ್ಳವರ ಪಾಲು ಮಾಡುವ ತಂತ್ರ. ನಮ್ಮ ರೈತರು ಸ್ವತಂತ್ರವಾಗಿ ವ್ಯಾಪಾರ ಮಾಡುವಷ್ಟು ಸಂಘಟಿತರಾಗಿಲ್ಲ, ಈ ಕೆಲಸ ಮಾಡುತ್ತಿದ್ದ ಎಪಿಎಂಸಿ ಹಾಳು ಮಾಡಿ, ಖಾಸಗಿಯವರಿಗೆ ಗುಲಾಮರನ್ನಾಗಿ ಮಾಡುವುದು. ಜೊತೆಗೆ ರೈತರ ಜತೆ ಅಮಾಲಿಗಳು, ಸಣ್ಣ ಪುಟ್ಟ ಕೆಲಸ ಮಾಡುವವರು, ಕೃಷಿ ಕಾರ್ಮಿಕರು ಬೀದಿ ಪಾಲಾಗುವುದಂತು ಖಚಿತ.

   ಕರ್ನಾಟಕ ಬಂದ್ ಕಾವು ಜೋರಾಗಿದೆ | Oneindia Kannada
   English summary
   AAP Karnataka has put forward 7 questions to CM BS Yediyurappa on Farm bill and Agriculuture reforms by government.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X