ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಅನುಭವಿ' ರಾಜಕಾರಣಿಗಳಿಗೆ ಎಎಪಿ ಕರ್ನಾಟಕ ಗಾಳ

By Mahesh
|
Google Oneindia Kannada News

ಬೆಂಗಳೂರು, ಫೆ.4: 'ಮುಂಬರುವ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ಅನುಭವಿಗಳು, ಉತ್ಸಾಹಿಗಳು, ಭ್ರಷ್ಟಾಚಾರ ರಹಿತ ಸಮರ್ಥ ಅಭ್ಯರ್ಥಿಗಳನ್ನು ಮಾತ್ರ ಕಣಕ್ಕಿಳಿಸುತ್ತೇವೆ' ಎಂಬ ಮಾತುಗಳು ಕ್ಲೀಷೆಯೆನಿಸಿದರೂ ಎಲ್ಲಾ ಪಕ್ಷಗಳು ಈ ಮಾತಿಗೆ ಬದ್ಧರಾಗಿರುತ್ತಾರೆ ಎನ್ನುವಂತಿಲ್ಲ. ಆದರೆ, ಆಮ್ ಆದ್ಮಿ ಪಕ್ಷದವರು ಈ ಮಾತಿಗೆ ತಕ್ಕಂತೆ ನಡೆಯುತ್ತೇವೆ ಎನ್ನುತ್ತಿದ್ದಾರೆ.

ಆಮ್ ಆದ್ಮಿ ಪಕ್ಷ ಅಥವಾ ಕರ್ನಾಟಕದ ಜನ ಸಾಮಾನ್ಯರ ಪಕ್ಷದವರು ಅನುಭವಿ ಉತ್ಸಾಹಿ ಅಭ್ಯರ್ಥಿಗಳನ್ನು ಮಾತ್ರ ಕಣಕ್ಕಿಳಿಸಲು ಸಿದ್ಧತೆ ನಡೆಸಿದ್ದಾರೆ. ಸಾಫ್ಟ್ ವೇರ್ ಇಂಜಿನಿಯರ್, ಬ್ಲಾಗರ್ ರವಿ ಕೃಷ್ಣಾರೆಡ್ಡಿ ಅವರು ಲೋಕಸತ್ತ ಪಕ್ಷ ಬಿಟ್ಟು ಆಮ್ ಆದ್ಮಿ ಆಗಲು ಹೊರಟ ನಂತರ ಅದೇ ಹಾದಿಯಲ್ಲಿ ಐಟಿ ಮ್ಯಾನೇಜರ್ ಶಾಂತಲಾ ದಾಮ್ಲೆ ಅವರು ನಡೆಯುತ್ತಿದ್ದಾರೆ.

2013ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಲೋಕಸತ್ತಾ ಟಿಕೆಟ್ ಪಡೆದು ಈ ಇಬ್ಬರು ಸ್ಪರ್ಧಿಸಿದ್ದರು. ಈಗ ಎಎಪಿಯಲ್ಲಿ ತಮ್ಮ ರಾಜಕೀಯ ಭವಿಷ್ಯ ಅರಸುತ್ತಿದ್ದಾರೆ. 2009ರ ಲೋಕಸಭೆ ಚುನಾವಣೆ ಕಣದಲ್ಲಿ ಕಾಣಿಸಿಕೊಂಡಿದ್ದ ಕ್ಯಾಪ್ಟರ್ ಗೋಪಿನಾಥ್ ಅವರು ಕೂಡಾ ಜನ ಸಾಮಾನ್ಯರ ಪಕ್ಷದತ್ತ ಒಲವು ತೋರಿದ್ದಾರೆ. [ಶಾಂತಲಾ ದಾಮ್ಲೆ ಅವರು ಎಎಪಿ ಸೇರಿದ್ದೇಕೆ?]

ಎಎಪಿ ಕರ್ನಾಟಕಕ್ಕೆ ಬೆಂಬಲ: ಸಾಮಾಜಿಕ ಕಾರ್ಯಕರ್ತ ಎಸ್ ಆರ್ ಹಿರೇಮಠ್, ನಿಕಟಪೂರ್ವ ಲೋಕಾಯುಕ್ತ ಸಂತೋಷ್ ಎನ್ ಹೆಗ್ಡೆ, ಜಸ್ಟೀಸ್ ಎನ್ ವೆಂಕಟಾಚಲಯ್ಯ, ಪದ್ಮಶ್ರೀ ಪ್ರಶಸ್ತಿ ವಿಜೇತ ಸಾಮಾಜಿಕ ಕಾರ್ಯಕರ್ತೆ ಅನಿತಾ ರೆಡ್ಡಿ ಮುಂತಾದ ಗಣ್ಯಾತಿಗಣ್ಯರು ಆಮ್ ಆದ್ಮಿ ಪಕ್ಷಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ.

AAP finds few experienced hands to fight LS polls in Karnataka

ಈ ನಡುವೆ ಕರ್ನಾಟಕದಲ್ಲಿ ಲೋಕ ಸತ್ತಾ ಪಕ್ಷವನ್ನು ಕಟ್ಟಿ ಬೆಳೆಸುವ ಕನಸು ಹೊತ್ತಿರುವ ಅಶ್ವಿನಿ ಮಹೇಶ್ ಅವರಿಗೂ ಎ ಎಪಿ ಆಫರ್ ನೀಡಿದ ಸುದ್ದಿ ಬಂದಿದೆ. ಆಮ್ ಆದ್ಮಿ ಪಕ್ಷದ ಜತೆ ಲೋಕಸತ್ತಾ ವಿಲೀನವಾಗಲಿದೆ ಎಂಬ ಸುದ್ದಿಯೂ ಬಂದಿತ್ತು. ಆದರೆ, ಅಶ್ವಿನ್ ಮಹೇಶ್ ಅವರು ಈ ಸುದ್ದಿಯನ್ನು ಅಲ್ಲಗೆಳೆದಿದ್ದಾರೆ.
ಎಎಪಿ ಪರ ನಿಂತಿರುವ ಇನ್ಫೋಸಿಸ್ ಬೋರ್ಡ್ ಡೈರೆಕ್ಟರ್ ಆಗಿದ್ದ ವಿ ಬಾಲಕೃಷ್ಣನ್ ಅವರು ಸ್ಪರ್ಧೆಗಿಳಿಯುವುದು ಅನುಮಾನ ಎಂದು ಎಎಪಿ ರಾಜ್ಯ ಖಜಾಂಚಿ ಕೆಎನ್ ಚಂದ್ರಕಾಂತ್ ಹೇಳಿದ್ದಾರೆ.

ಸುಮಾರು 400 ಲೋಕಸಭಾ ಸ್ಥಾನಗಳಿಗೆ ಸ್ಪರ್ಧಿಸಲು ಎಎಪಿ ಯೋಜನೆ ಹಾಕಿಕೊಂಡಿದ್ದು ಇದಕ್ಕಾಗಿ ಸುಮಾರು 6000ಕ್ಕೂ ಅಧಿಕ ಅರ್ಜಿಗಳು ಬಂದಿದೆಯಂತೆ. 'ಮನೆ ಮನೆಯಲ್ಲಿ ಎಎಪಿ', 'ಮನೆ ಮನೆಗೆ ಆಮ್ ಆದ್ಮಿ' ಹೆಸರಿನಲ್ಲಿ ಮನೆ ಮನೆಗೆ ತೆರಳಿ ಅಭಿಯಾನ ನಡೆಸಲು ಜನ ಸಾಮಾನ್ಯರ ಪಕ್ಷ ಯೋಜಿಸಿದೆ. ಬೆಂಗಳೂರು ಹಾಗೂ ರಾಯಚೂರಿನಲ್ಲಿ ಈ ವಾರದಿಂದಲೇ ಅಭಿಯಾನ ಶುರುವಾಗಲಿದೆ. [ರವಿ ರೆಡ್ಡಿ ಲೋಕಸತ್ತಾ ಬಿಟ್ಟಿದ್ದೇಕೆ?]

ಬೆಂಗಳೂರಿನಲ್ಲಿ ಅಭಿಯಾನ ಜಸ್ಟೀಸ್ ವೆಂಕಟಾಚಲಯ್ಯ ಅವರ ನಿವಾಸದಿಂದ ಆರಂಭಿಸಲಾಗುತ್ತದೆ. ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ನಿವೃತ್ತ ರಾಯಭಾರಿ ಪ್ಯಾಸ್ಕಲ್ ಅಲಾನ್ ನಜರೇತ್ ನಿವಾಸದಿಂದ ಅಭಿಯಾನ ಹೊರಡಲಿದೆ. ಫೆ.9ರಿಂದ ಅಖಿಲ ಕರ್ನಾಟಕ ಅಭಿಯಾನ ರಾಯಚೂರಿನಿಂದ ಆರಂಭಿಸಲಾಗುತ್ತದೆ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪೃಥ್ವಿ ರೆಡ್ಡಿ ಹೇಳಿದ್ದಾರೆ.

English summary
Among the handful of 'experienced' faces are former IT manager Shanthala Damle and software engineer-cum-writer Ravi Krishna Reddy, who both contested the 2013 assembly elections on Lok Satta tickets and joined AAP recently. Then there's Capt G Gopinath, an Independent candidate from Bangalore South in the 2009 Lok Sabha elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X