• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊನೆಗೂ ಕರ್ನಾಟಕ ಆಧಾರ್‌ ಕಾಯ್ದೆ ಜಾರಿ, ಯಾವ ಯೋಜನೆಗಳಿಗೆ ಕಡ್ಡಾಯ

By Nayana
|

ಬೆಂಗಳೂರು, ಆಗಸ್ಟ್ 1: ಕರ್ನಾಟಕ ಆಧಾರ್‌ ಕಾಯ್ದೆ ಆ.1ರಿಂದ ಜಾರಿಗೆ ಬರಲಿದೆ. ಕರ್ನಾಟಕ ಆಧಾರ್‌ ಹಣಕಾಸು ಮತ್ತು ಇತರೆ ಸಬ್ಸಿಡಿಗಳು, ಪ್ರಯೋಜನಗಳು ಮತ್ತು ಸೇವೆಗಳ ಉದ್ದೇಶಿತ ವಿತರಣೆ ಕಾಯ್ದೆ ಇದಾಗಿದ್ದು ರಾಜ್ಯಪಾಲರು ಸಮ್ಮತಿ ಸೂಚಿಸಿದ್ದಾರೆ.

ಆಗಸ್ಟ್‌ 1ರಿಂದ ಆರಂಭಗೊಂಡು 3 ತಿಂಗಳೊಳಗೆ ರಾಜ್ಯ ಸರ್ಕಾರ ಈ ಬಗ್ಗೆ ಅಧಿಸೂಚನೆ ಹೊರಡಿಸಲಿದೆ. ಸರ್ಕಾರದ ಅನೇಕ ಇಲಾಖೆಗಳ ಆಯ್ದ ಯೋಜನೆಗಳನ್ನು ಸೇರಿಸಲಾಗುತ್ತದೆ. ಆಧಾರ್‌ ಬಳಸುವ ಮತ್ತು ಗೌಪ್ಯತೆ ಕಾಪಾಡಿಕೊಳ್ಳುವ ವಿಧಾನವನ್ನೂ ಇದು ತಿಳಿಸುತ್ತದೆ.

ಕೇಂದ್ರ ಸರ್ಕಾರದ ಆಧಾರ್‌ ಕಾಯ್ದೆಗೆ ಅನುಗುಣವಾಗಿ ರೂಪಿಸಲಾಗಿರುವ ಕಾಯ್ದೆಯ ಆಧಾರದಲ್ಲಿ ರಾಜ್ಯ ಸರ್ಕಾರ ಅಧಿಸೂಚನೆಯೊಂದನ್ನು ಶೀಘ್ರವೇ ಹೊರಡಿಸಲಿದೆ. ಯಾವ ಯೋಜನೆಗಳಲ್ಲಿ ಆಧಾರ್‌ ನೀಡಬೇಕು ಎಂದು ತಿಳಿಸಲಿದೆ. ಒಂದೆಡೆ ಆಧಾರ್‌ನ್ನು ಕಡ್ಡಾಯ ಮಾಡಬಾರದು ಎಂದು ಸುಪ್ರೀಂಕೋರ್ಟ್‌ ಆದೇಶಿಸಿದೆ ಈ ಹಿನ್ನೆಲೆಯಲ್ಲಿ ಕೆಲವು ವಿನಾಯ್ತಿಯನ್ನೂ ಕಾಯ್ದೆಯಲ್ಲಿ ನೀಡಲಾಗಿದೆ.

ಆಧಾರ್‌ ಕಾರ್ಡ್‌ ಸಮಸ್ಯೆಗೆ ಕೊನೆ: ಪ್ರತಿ ವಾರ್ಡ್‌ನಲ್ಲೂ ಅಪ್‌ಡೇಟ್‌ ಸೆಂಟರ್‌

ಹೆಚ್ಚಿನ ಫಲಾನುಭವಿಗಳನ್ನು ಸೇರಿಸಲು ಮತ್ತು ಪಾರದರ್ಶಕತೆ ತರಲು ಆಧಾರ್‌ ನೋಂದಣಿ ಮಾಡಿಸಲಾಗುತ್ತದೆ. ಸದ್ಯಕ್ಕೆ ಆಧಾರ್ ಕಡ್ಡಾಯವಾಗಿರುವುದಿಲ್ಲ, ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

 ಆಧಾರ್‌ನಿಂದ 90 ಸಾವಿರ ಕೋಟಿ ಉಳಿತಾಯ

ಆಧಾರ್‌ನಿಂದ 90 ಸಾವಿರ ಕೋಟಿ ಉಳಿತಾಯ

ಕೇಂದ್ರ ಸರ್ಕಾರ 2016ರಲ್ಲಿ ಆಧಾರ್‌ ಕಾಯ್ದೆ ಜಾರಿಗೆ ತಂದಿತು, ಬಳಿಕ ತನ್ನ ಕೆಳಗಿರುವ 56 ಸಚಿವಾಲಯಗಳ 435 ಯೋಜನೆಯಲ್ಲಿ ಆಧಾರ್‌ ಅಳವಡಿಸಿ ನೇರ ನಿಗಮ ವರ್ಗಾವಣೆ ಮಾಡುತ್ತಿದೆ. ಹೀಗಾಗಿ ಸೋರಿಕೆ ಆಗುತ್ತಿದ್ದ 90 ಸಾವಿರ ಕೋಟಿ ರೂ. ಕೇಂದ್ರ ಸರ್ಕಾರಕ್ಕೆ ಉಳಿತಾಯವಾಗಲಿದೆ.

149 ಯೋಜನೆಗಳ ಜಾರಿ

149 ಯೋಜನೆಗಳ ಜಾರಿ

ರಾಜ್ಯದಲ್ಲಿ ಕೇಂದ್ರದ ಅನುದಾನದಲ್ಲಿ 62 ನೇರವಾಗಿ ರಾಜ್ಯ ಸರ್ಕಾರದ 87 ಸೇರಿ ಒಟ್ಟು 149 ಯೋಜನೆಗಳು ಜಾರಿಯಲ್ಲಿದೆ. ಕೇಂದ್ರದ ಯೋಜನೆಗಳಲ್ಲಿ ಪ್ರಮುಖವಾಗಿ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ, ಅಂಗವಿಕಲ ವೇತನ, ವಿಧವಾ ವೇತನ, ಹಿರಿಯ ನಾಗರಿಕರ ಪಿಂಚಣಿ, ಮಧ್ಯಾಹ್ನ ಬಿಸಿಯೂಟ, ಕ್ಷೀರ ಸಂಜೀವಿನಿ, ನರೇಗ, ಪ್ರಧಾನಮಂತ್ರಿ ಆವಾಜ್‌ ಯೋಜನಾ, ಉಜ್ವಲ, ಅನಿಲಭಾಗ್ಯ, ಆರೋಗ್ಯ ಕಾರ್ಡ್‌, ವಿದ್ಯಾಸಿರಿ, ಸಂಧ್ಯಾ ಸುರಕ್ಷಾ ಯೋಜನಾ, ಬಸವವಸತಿ, ಕ್ಷೀರಧಾರೆ ಯೋಜನೆಗಳನ್ನು ಜಾರಿ ಮಾಡುತ್ತಿದೆ.

ಸದ್ಯಕ್ಕೆ ಈ ಆಧಾರ್‌ ಕಡ್ಡಾಯವಲ್ಲ

ಸದ್ಯಕ್ಕೆ ಈ ಆಧಾರ್‌ ಕಡ್ಡಾಯವಲ್ಲ

ಆಧಾರ್‌ ಸಂಖ್ಯೆ ಇಲ್ಲದವರು ಆಧಾರ್‌ ನೋಂದಣಿ ಕೇಂದ್ರಕ್ಕೆ ತೆರಳಿ ನೋಂದಣಿ ಮಾಡಿಸಬೇಕು. ಆಧಾರ್‌ ಸಂಖ್ಯೆ ದೊರಕುವವರೆಗೂ ನೋಂದಣಿ ಸಂಖ್ಯೆ ಇ ಡಿ ನೀಡಿ ಯೋಜನೆಯ ಲಾಭ ಪಡೆಯಬಹುದು. ಇಷ್ಟರ ಬಳಿಕವೂ ಆಧಾರ್‌ ಇಲ್ಲದಿದ್ದರೆ ಸರ್ಕಾರ ಸೂಚಿಸುವ ಇತರೆ ಯಾವುದೇ ದಾಖಲೆ ಪಡೆಯುವ ಮೂಲಕ ಯೋಜನೆಯ ಲಾಭ ಪಡೆಯಬಹುದು.

2 ವರ್ಷದವರೆಗೆ ಅಗತ್ಯವಿರುವ ಬದಲಾವಣೆ

2 ವರ್ಷದವರೆಗೆ ಅಗತ್ಯವಿರುವ ಬದಲಾವಣೆ

ಕಾಯ್ದೆ ಜಾರಿಗೆ ಎದುರಾಗುವ ತೊಂದರೆಗಳ ನಿವಾರಣೆಗೆ 2 ವರ್ಷ ಅವಕಾಶ ನೀಡಲಾಗಿದೆ. ಮುಖ್ಯ ಕಾಯ್ದೆಗೆ ವಿರೋಧವಾಗದಂತೆ ಆದೇಶ ಹೊರಡಿಸಿ, ರಾಜ್ಯಪತ್ರದಲ್ಲಿ ಪ್ರಕಟಿಸಿ ಉಪಬಂಧಗಳನ್ನು ಸೇರಿಸಬಹುದು. ಆದರೆ 2 ವರ್ಷದೊಳಗೆ ಏನೇ ಬದಲಾವಣೆಗಳಿದ್ದರೂ ಮಾಡಿಕೊಳ್ಳಬಹುದಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The state government is imposing Karnataka Aaadhaar Act from August 1, which mandates Unique Identification Number for the benefit of any schemes under state as well as centel government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more