ಐಎಸ್‌ಐಎಸ್ ಉಗ್ರರು ಬೆಂಗಳೂರು, ತುಮಕೂರಲ್ಲಿ ಸಭೆ ನಡೆಸಿದ್ದರು

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಜನವರಿ 28 : ರಾಷ್ಟ್ರೀಯ ತನಿಖಾ ದಳ ಕಳೆದ ವಾರ ದೇಶದ ವಿವಿಧ ನಗರಗಳಲ್ಲಿ ಬಂಧಿಸಿದ ಐಎಸ್‌ಐಎಸ್ ಶಂಕಿತ ಉಗ್ರರು ವಿದೇಶಿಯರ ಮೇಲೆ ದಾಳಿ ಮಾಡಲು ಸಂಚು ರೂಪಿಸಿದ್ದರು. ತುಮಕೂರು ಮತ್ತು ಬೆಂಗಳೂರಿನಲ್ಲಿಯೂ ಉಗ್ರರು ಸಭೆ ನಡೆಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ದೇಶದ ವಿವಿಧ ನಗರಗಳಲ್ಲಿ ವಿದೇಶಿ ಪ್ರವಾಸಿಗರ ಮೇಲೆ ದಾಳಿ ನಡೆಸಲು ಇಸ್ಲಾಮಿಕ್ ಸ್ಟೇಟ್ ಆಪ್ ಇರಾಕ್ ಆಂಡ್ ಸಿರಿಯಾ (ಐಎಸ್‌ಐಎಸ್) ಉಗ್ರರು ಸಂಚು ರೂಪಿಸಿದ್ದರು. ಇದಕ್ಕಾಗಿ ತುಮಕೂರು, ಬೆಂಗಳೂರು, ತೆಲಂಗಾಣ ಮತ್ತು ಪುಣೆಯಲ್ಲಿ ಸರಣಿ ಸಭೆಗಳನ್ನು ನಡೆಸಿದ್ದರು. ['ನಮಗೆ ಭಾರತದ ಸಂವಿಧಾನದ ಮೇಲೆ ಗೌರವವಿಲ್ಲ']

isis

ಫ್ರಾನ್ಸ್ ಮತ್ತು ಬ್ರಿಟನ್ ದೇಶದ ಪ್ರವಾಸಿಗರ ಮೇಲೆ ದಾಳಿ ನಡೆಸಲು ಉಗ್ರರು ನಿರ್ಧರಿಸಿದ್ದರು. ಪ್ರವಾಸಿಗರ ಮೇಲೆ ದಾಳಿ ನಡೆಸಿ, ಐಎಸ್‌ಐಎಸ್ ಉಗ್ರರ ಮೇಲೆ ದಾಳಿ ನಡೆಸುತ್ತಿರುವ ಫ್ರಾನ್ಸ್ ಮತ್ತು ಬ್ರಿಟನ್‌ ದೇಶಗಳಿಗೆ ಸಂದೇಶ ಕಳಿಸಲು ಉಗ್ರರು ಸಂಚು ರೂಪಿಸಿದ್ದರು. [ಉಗ್ರರಿಗೆ ಮುಂಬೈನಿಂದ ಸೂಚನೆ ಸಿಗುತ್ತಿತ್ತು]

ಮುಂಬೈ, ಹೈದಾರಾಬಾದ್, ಬೆಂಗಳೂರು ಮತ್ತು ಜೈಪುರದಲ್ಲಿ ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಲು ಮೂವರು ಉಗ್ರರು ನಿರ್ಧರಿಸಿದ್ದರು. ಐಎಸ್‌ಐಎಸ್ ಪರವಾಗಿ ಪ್ರಚಾರ ನಡೆಸುತ್ತಿದ್ದ ಕಲಬುರಗಿ ಮೂಲದ ಸಿರಾಜುದ್ದೀನ್‌ನನ್ನು ಜೈಪುರದಲ್ಲಿ ಬಂಧಿಸಲಾಗಿತ್ತು. ಆದ್ದರಿಂದ, ಅಲ್ಲಿನ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಲು ಉಗ್ರರು ಸಿದ್ಧತೆ ನಡೆಸಿದ್ದರು. [ತುಮಕೂರಲ್ಲಿ ಶಂಕಿತ ಉಗ್ರನ ಬಂಧನ]

15 ಜನರ ಮೇಲೆ ಕಣ್ಣಿಟ್ಟಿದೆ ಎನ್‌ಐಎ : ಐಎಸ್‌ಐಎಸ್ ಬೆಂಬಲಿಸುತ್ತಿದ್ದ 14 ಶಂಕಿತ ಉಗ್ರರನ್ನು ಇದುವರೆಗೂ ಎನ್‌ಐಎ ಬಂಧಿಸಿದೆ. ಇನ್ನೂ 15 ಯುವಕರ ಮೇಲೆ ಎನ್‌ಐಎ ಕಣ್ಣಿಟ್ಟಿದೆ. ಈ ಯುವಕರು ಉಗ್ರ ಸಂಘಟನೆ ಬೆಂಬಲಿಸುವ ಬಗ್ಗೆ ಖಚಿತ ಸುಳಿವು ಸಿಕ್ಕರೆ ಅವರನ್ನು ಬಂಧಿಸುವುದಾಗಿ ಎನ್‌ಐಎ ಅಧಿಕಾರಿಗಳು ಹೇಳಿದ್ದಾರೆ.

ಎನ್‌ಐಎ ತನಿಖೆ ವೇಳೆ ಭಾರತದ ಕೆಲವು ಯುವಕರು ಐಎಸ್ಐಎಸ್ ಸೇರಿದ್ದಾರೆ ಎಂಬುದು ತಿಳಿದುಬಂದಿದೆ. ಮಹಾರಾಷ್ಟ್ರದ ಕೆಲವು ಯುವಕರು ಇದ್ದಕ್ಕಿದಂತೆ ನಾಪತ್ತೆಯಾಗಿದ್ದು, ಅವರು ಐಎಸ್‌ಐಎಸ್ ಸೇರಿದ್ದಾರೆ ಎಂದು ಶಂಕಿಸಲಾಗಿದೆ. ಭಾರತದ 23 ಯುವಕರು ಉಗ್ರ ಸಂಘಟನೆಯಲ್ಲಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಎನ್‌ಐಎ ರಿಜ್ವಾನ್ ಎಂಬ ಯವಕನ ವಿಚಾರಣೆ ನಡೆಸುತ್ತಿದ್ದು, ಹಲವು ಯುವಕರು ಸಂಘಟನೆ ಸೇರಲು ತಾನು ಸಹಕಾರ ನೀಡಿದ್ದೇನೆ ಎಂದು ಅವರು ಒಪ್ಪಿಕೊಂಡಿದ್ದಾನೆ. ರಿಜ್ವಾನ್ ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿಯೂ ಕೆಲವು ಯುವಕರೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಎನ್‌ಐಎ ಹೇಳಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The National Investigating Agency which recently busted a module of the ISIS in India has learnt that the primary target were foreign nationals in India. These operatives who have been arrested in the past week had met several times in Tumkur, Bengaluru, Telangana and Pune to plan attacks on foreign nationals in India.
Please Wait while comments are loading...