ಅಯ್ಯೋ : ಗಂಡ ಹೆಂಡತಿ ಜಗಳ, ಇಬ್ಬರೂ ಆತ್ಮಹತ್ಯೆ

Couple commits suicide, Kadur, Chikkamagaluru
ಕಡೂರು, ನ.10: ಇಲ್ಲಿನ ಹಳೆಪೇಟೆ ಬಡಾವಣೆಯಲ್ಲಿ ವಾಸವಾಗಿದ್ದ ದಂಪತಿಗಳು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಂಪತಿಗಳ ಆತುರದ ನಿರ್ಧಾರದಿಂದ 15 ತಿಂಗಳ ಹಸುಳೆ ಅನಾಥವಾಗಿದೆ.

ಚಿಕ್ಕಮಗಳೂರು ಜಿಲ್ಲೆ ಕಡೂರು ನಗರಾ ಹಳೇಪೇಟೆ ಬಡಾವಣೆಯ ಖ್ಯಾತ ವಕೀಲರಾದ ಶಿವಶಂಕರಪ್ಪ ಅವರ ಪುತ್ರಿ ಸೌಮ್ಯ ಕಳೆದ ಮೂರು ವರ್ಷಗಳ ಹಿಂದೆ ಲೋಕೇಶ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದರು.

ನಿನ್ನೆ ತನಕ ಸಂಸಾರ ಸಾಗಿಸಿಕೊಂಡು ಚೆನ್ನಾಗಿದ್ದ ಸೌಮ್ಯ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ಉಳಿಸಲು ಯತ್ನಿಸಿ ವಿಫಲನಾದ ಪತಿ ತಾನು ಸಾವನ್ನಪ್ಪಿದ್ದಾನೆ. ದಂಪತಿ ಆತ್ಮಹತ್ಯೆ ವಿಷಯ ತಿಳಿದು ತಾಲೂಕಿನ ಎಲ್ಲೆಡೆಯಿಂದ ನೂರಾರು ಮಂದಿ ಹಳೇಪೇಟೆಯ ಸೂತಕದ ಮನೆಯ ನೋವಿನಲ್ಲಿ ಭಾಗಿಯಾಗಿದ್ದಾರೆ.

ಮುದ್ರಾ ಸ್ಟುಡಿಯೋ ಮಾಲೀಕ ಲೋಕೇಶ್ (32), ಪತ್ನಿ ಸೌಮ್ಯ(28) ಆತ್ಮಹತ್ಯೆ ಮಾಡಿಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ. ಅದರೆ, ಭಾನುವಾರ ಕಡೂರು ಹಾಗೂ ಬೀರೂರಿನಲ್ಲಿ ಎರಡು ಮದುವೆ ಇತ್ತು. ದಂಪತಿಗಳು ಹೋಗಿ ಮನೆಗೆ ಹಿಂತಿರುಗಿದ್ದರು. ಅದರೆ, ಲೋಕೇಶ್ ಮತ್ತೊಮ್ಮೆ ಮನೆಯಿಂದ ಹೊರ ಬಿದ್ದವನು ಮುಂಜಾನೆ ಮನೆಗೆ ಹಿಂತಿರುಗಿದ್ದಾನೆ. ಇದರಿಂದ ಸಿಟ್ಟಿಗೆದ್ದ ಸೌಮ್ಯ ಗಂಡನನ್ನು ದಬಾಯಿಸಿದ್ದಾಳೆ. ಮಾತಿಗೆ ಮಾತು ಬೆಳೆದಿದೆ. ಮನನೊಂದ ಸೌಮ್ಯ ಕೋಣೆಗೆ ತೆರಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

ಅಸ್ವಸ್ಥಗೊಂಡಿದ್ದ ಸೌಮ್ಯಳಿಗೆ ತಕ್ಷಣವೇ ಸಮೀಪದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಅದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.ಪತ್ನಿಯ ಸಾವಿನಿಂದ ನೊಂದ ಲೋಕೇಶ್ ಹಿಂದು ಮುಂದು ಯೋಚಿಸದೆ ಮನೆ ಬಳಿ ಇರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸೌಮ್ಯಳ ಅಂತಿಮ ದರ್ಶನ ಮುಗಿಸಿಕೊಂಡು ಲೋಕೇಶ್ ನನ್ನು ಹುಡುಕುತ್ತಾ ಲೋಕೇಶ್ ಮನೆಗೆ ಆಗಮಿಸುತ್ತಿದ್ದಂತೆ ಮರದಲ್ಲಿ ನೇತಾಡುತ್ತಿದ್ದ ಲೋಕೇಶ್ ಅವರನ್ನು ಸ್ವಾಗತಿಸಿದೆ. ದುಃಖದ ಕಟ್ಟೆಯೊಡೆದು ಕೋಡಿಯಂತೆ ಕಡೂರಿನಲ್ಲಿ ಹರಡಿದೆ. ಮಾಜಿ ಶಾಸಕ ವಿಶ್ವನಾಥ್ ಸೇರಿದಂತೆ ನೂರಾರು ಮಂದಿ ಸಾರ್ವಜನಿಕರು ಸೇರಿದಂತೆ ಅನೇಕ ಗಣ್ಯರು ಮೃತರ ಅಂತಿಮ ದರ್ಶನ ಪಡೆದು ಮಮ್ಮಲ ಮರಗಿದ್ದಾರೆ. ಈ ಘೋರ ದುರಂತಕ್ಕೆ ಸಾಕ್ಷಿಯಾಗಿರುವ 15 ತಿಂಗಳ ಹೆಣ್ಣು ಕೂಸು ಸದ್ಯಕ್ಕೆ ಅಜ್ಜಿ ಮನೆ ಸೇರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+