ವಾಯುಭಾರ ಕುಸಿತ: ಪರಿಣಾಮ ಕರ್ನಾಟಕ ಸೇರಿ ಈ ರಾಜ್ಯಗಳಿಗೆ ಭಾರೀ ಮಳೆ, ಪ್ರಭಾವ ಭೀತಿ
ಬೆಂಗಳೂರು, ಜುಲೈ 16: ರಾಜ್ಯದಲ್ಲಿ ಕೆಲವು ವಾರಗಳಿಂದ ಸಾಧಾರಣದಿಂದ ಭಾರೀ ಮಳೆ ಮುಂದುವರಿದೆ. ಈ ಮಳೆ ಸದ್ಯಕ್ಕೆ ಬಿಡುವುದು ಅಸಾಧ್ಯವಾಗಿದೆ. ಏಕೆಂದರೆ ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರ ಮೇಲ್ಮೈನಲ್ಲಿ ಉಂಟಾಗಿರುವ ವೈಪರಿತ್ಯಗಳ ಪ್ರಭಾವದಿಂದ ಭಾರಿ ಹಾಗೂ ಅತ್ಯಧಿಕ ಮಳೆ ಅಬ್ಬರಿಸಲಿದೆ. ಅತೀವೃಷ್ಟಿ, ಪ್ರವಾಹದ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಹೌದು, ಬಂಗಾಳಕೊಲ್ಲಿಯಲ್ಲಿ ಒಡಿಶಾ ರಾಜ್ಯದ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದರೊಂದಿಗೆ ಮೇಲೈ ಸುಳಿಗಾಳಿಯು 7.6 ಎತ್ತರದವರೆಗೆ ಸುಳಿಗಾಳಿ ಸೃಷ್ಟಿಯಾಗಿದೆ. ಇನ್ನೂ ಪೂರ್ವ ಅರಬ್ಬಿ ಸಮುದ್ರದಲ್ಲಿ ಸಹ ಈಗಾಗಲೇ ಉಂಟಾಗಿರುವ ಬದಲಾವಣೆಗಳು ಮತ್ತೆ ಮುಂದುವರಿದಿದೆ ಎಂದು ಐಎಂಡಿ ಬೆಂಗಳೂರು ಹವಾಮಾನ ತಜ್ಞ ಡಾ.ಸಿ.ಎಸ್.ಪಾಟೀಲ್ ಅವರು ಮಾಹಿತಿ ನೀಡಿದ್ದಾರೆ.

ಪೂರ್ವ ಅರಬ್ಬಿ ಸಮುದ್ರದಲ್ಲಿ ಕೇರಳ, ಕರ್ನಾಟಕ, ಮಹಾರಾಷ್ಟ್ರ ಹಾಗೂ ಗುಜರಾತ್ ಕರಾವಳಿ ಭಾಗದ ಭೂಮಿಗೆ ಹತ್ತಿರದಲ್ಲಿ ಸ್ಟ್ರಫ್ ಉಂಟಾಗಿದೆ. ಇವೆಲ್ಲ ವೈಪರಿತ್ಯಗಳು, ಹವಾಮಾನ ಬದಲಾವಣೆಗಳ ತೀವ್ರತೆಯ ಪ್ರಭಾವದಿಂದಾಗಿ ಕರ್ನಾಟಕ ರಾಜ್ಯದಲ್ಲಿ ಎಲ್ಲೆಡೆ ಮುಂಗಾರು ಮಳೆ ಆವರಿಸಿದೆ. ಕರ್ನಾಟಕದಲ್ಲಿ ಜುಲೈ 19ರವರೆಗೆ ಭಾರೀ ಮಳೆ ಎಚ್ಚರಿಕೆ ನೀಡಲಾಗಿದೆ.
ವಾಯುಭಾರ ಕುಸಿತ, ಸ್ಟ್ರಫ್ ತೀವ್ರಗೊಂಡರೆ ಪ್ರವಾಹ ಭೀತಿ?
ಒಡಿಶಾ ರಾಜ್ಯದ ಕರಾವಳಿ ಸಮೀಪ ಉಂಟಾಗಿರುವ ವಾಯುಭಾರ ಕುಸಿತವು, ಮತ್ತಷ್ಟು ತೀವ್ರಗೊಂಡರೆ, ಪರಿಸ್ಥಿತಿ ಬಿಗುಡಾಯಿಸುತ್ತದೆ. ಸುಳಿಗಾಳಿ, ಸ್ಟ್ರಫ್ ನಂತರದ ಹಂತದಲ್ಲಿ ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾಗುತ್ತದೆ. ಮತ್ತೆ ಅದು ತೀವ್ರಗೊಂಡು ಸ್ಪಷ್ಟ ವಾಯುಭಾರ ಕುಸಿತವಾಗುತ್ತದೆ. ಸದ್ಯ ವಾಯುಭಾರ ಕುಸಿತವು ಮತ್ತಷ್ಟು ತೀವ್ರಗೊಂಡಿದ್ದೆ ಆದಲ್ಲಿ ಅದು ಚಂಡಮಾರುತವಾಗಿಯೂ ಬದಲಾಗಬಹುದು ಎಂದು ಅಂದಾಜಿಸಲಾಗಿದೆ.
ಸದ್ಯ ಒಡಿಶಾ ಭಾಗದ (ಬಂಗಾಳಕೊಲ್ಲಿ) ವೈಪರಿತ್ಯ ಬಿರುಗಾಳಿಯು ಕೇರಳದತ್ತ ಬೀಸಿದ್ದೇ ಆದಲ್ಲಿ, ಕರ್ನಾಟಕ, ಚೆನ್ನೈ, ಕೇರಳ ರಾಜ್ಯಗಳಲ್ಲಿ ಪ್ರವಾಹ ಉಂಟು ಮಾಡುವ ಮಳೆ ಬರಬಹುದು. ಒಂದು ವೇಳೆ ಅದು ಅಂಡಮಾನ್, ಅಸ್ಸಾಂ ಕಡೆಗೆ ಗಾಳಿ ಸಾಗಿದರೆ ರಾಜ್ಯಕ್ಕೆ ತೊಂದರೆ ಆಗುವುದಿಲ್ಲ.

ಕರ್ನಾಟಕ ಸೇರಿ 4 ರಾಜ್ಯಗಳಿಗೆ ಭಾರೀ ಮಳೆ
ಅದೇ ರೀತಿ ಅರಬ್ಬಿ ಸಮುದ್ರದ ನಾಲ್ಕು ರಾಜ್ಯಗಳ (ಕರ್ನಾಟಕ, ಗುಜರಾತ್, ಮಹಾರಾಷ್ಟ್ರ ಮತ್ತು ಕೇರಳ) ಕರಾವಳಿಯಲ್ಲೇ ವಾರಗಳಿಂದ ಬದಲಾವಣೆ ಹೊಂದುತ್ತಿರುವ ಸುಳಿಗಾಳಿಯು ಭೂಮಿ ಮೇಲ್ಮೈ ಅಪ್ಪಳಿಸಿದರೆ, ಮುಂದಿನ ಒಂದು ವಾರ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅತ್ಯಧಿಕ ಮಳೆ ಬರಬಹುದು.
ಸದ್ಯ ಹವಾಮಾನ ಬದಲಾವಣೆಗಳ ಬಗ್ಗೆ ಮಾಹಿತಿ ನೀಡಿರುವ ಹವಾಮಾನ ಇಲಾಖೆಯಿಂದ ನಾಳೆ, ನಾಡಿದ್ದು ಮತ್ತಷ್ಟು ಮುನ್ಸೂಚನೆ ಮಾಹಿತಿ ದೊರೆಯಲಿದೆ.
ಕರ್ನಾಟಕದ ಮೇಲಾಗುವ ಪ್ರಭಾವವೇನು?
ವಾಯುಭಾರ, ಸುಳಿಗಾಳಿಯಿಂದಾಗಿ ಮುಂಗಾರು ಮಳೆ ಕರ್ನಾಟಕದಲ್ಲಿ ಅಬ್ಬರಿಸುತ್ತಿದೆ. ಜುಲೈ 19ರವರೆಗೆ ಕರಾವಳಿ ಮತ್ತು ಮಲೆನಾಡಿನ ಒಂದರೆಡ ಜಿಲ್ಲೆಗಳಲ್ಲಿ ಅತ್ಯಧಿಕ ಧಾರಾಕಾರ ಮಳೆ ಸುರಿಸಲಿದೆ. ಮುಂದಿನ 24 ಗಂಟೆ ಕೆಲ ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ. ಉಳಿದಂತೆ ಮಂಗಳವಾರ ಮತ್ತು ಬುಧವಾರ ರಾಜ್ಯ ಉತ್ತರ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಅಲ್ಲಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.












Click it and Unblock the Notifications