ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಸ್ನೇಹಿತನ ಪತ್ರ!

|
Google Oneindia Kannada News

ಬೆಂಗಳೂರು, ಜನವರಿ 02 : ಎಚ್.ಡಿ.ಕುಮಾರಸ್ವಾಮಿ ಅವರ ಸಂಪುಟ ಪುನಾರಚನೆ ಸಮಯದಲ್ಲಿ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಕೈ ಬಿಡಲಾಗಿದೆ. ಆದರೆ, ಅವರ ಸ್ನೇಹಿತರು ಅವರ ಬೆಂಬಲಕ್ಕೆ ನಿಂತಿದ್ದಾರೆ.

ಸಂಪುಟ ವಿಸ್ತರಣೆ ಬಳಿಕ ರಮೇಶ್ ಜಾರಕಿಹೊಳಿ ಸ್ನೇಹಿತರು ಮತ್ತು ಮಾಧ್ಯಮದವರ ಕೈಗೆ ಸಿಕ್ಕಿಲ್ಲ. ರಮೇಶ್ ಜಾರಕಿಹೊಳಿ ಅವರು ಎಲ್ಲಿದ್ದಾರೆ? ಎಂಬ ಪ್ರಶ್ನೆ ಕಾಡುತ್ತಿದೆ. ಮಂಬೈನಲ್ಲಿದ್ದಾರೆ, ದೆಹಲಿಯಲ್ಲಿ ಬಿಜೆಪಿ ನಾಯಕರ ಜೊತೆ ಇದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ರಮೇಶ್ ಜಾರಕಿಹೊಳಿ ಅಸಮಾಧಾನ : ಸತೀಶ್ ಜಾರಕಿಹೊಳಿ ಹೇಳಿದ್ದೇನು?ರಮೇಶ್ ಜಾರಕಿಹೊಳಿ ಅಸಮಾಧಾನ : ಸತೀಶ್ ಜಾರಕಿಹೊಳಿ ಹೇಳಿದ್ದೇನು?

ಸ್ನೇಹಿತರೊಬ್ಬರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಬರೆದಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 'ಎಂಟು ದಿನಗಳಿಂದ ನಿಮ್ಮನ್ನು ಹುಡುಕಿ ಸಾಕಾಗಿದೆ' ಎಂದು ಅಶೋಕ್ ಚಂದರಗಿ ಎಂಬುವವರು ಪತ್ರ ಬರೆದಿದ್ದಾರೆ.

ರಮೇಶ್ ಜಾರಕಿಹೊಳಿ ಎಲ್ಲಿದ್ದಾರೆ ಎಂಬುದು ನನಗೆ ಗೊತ್ತಿಲ್ಲ: ಸಿದ್ದರಾಮಯ್ಯರಮೇಶ್ ಜಾರಕಿಹೊಳಿ ಎಲ್ಲಿದ್ದಾರೆ ಎಂಬುದು ನನಗೆ ಗೊತ್ತಿಲ್ಲ: ಸಿದ್ದರಾಮಯ್ಯ

'ನೀವು ಕಾಂಗ್ರೆಸ್, ಬಿಜೆಪಿ ಯಾವುದೇ ಪಕ್ಷದಲ್ಲಾದರೂ ಇರಿ. ಆದರೆ, ಸದಾ ನಮ್ಮ ಕಣ್ಣ ಮುಂದೆ ಇರಿ. ರಮೇಶ್ ಜಾರಕಿಹೊಳಿ ಎಂದು ನಿಂತ ನೀರಲ್ಲ' ಎಂದು ಮಿತ್ರರು ಪತ್ರದಲ್ಲಿ ಬರೆದಿದ್ದಾರೆ. ಪತ್ರದಲ್ಲೇನಿದೆ? ಚಿತ್ರಗಳಲ್ಲಿ ನೋಡಿ....

ಸಚಿವ ರಮೇಶ್ ಜಾರಕಿಹೊಳಿಗೆ ಸಮನ್ಸ್ ನೀಡಿದ ಸಿದ್ದರಾಮಯ್ಯಸಚಿವ ರಮೇಶ್ ಜಾರಕಿಹೊಳಿಗೆ ಸಮನ್ಸ್ ನೀಡಿದ ಸಿದ್ದರಾಮಯ್ಯ

ದೂರ ಉಳಿದಿರುವುದು ಸರಿಯಲ್ಲ

ದೂರ ಉಳಿದಿರುವುದು ಸರಿಯಲ್ಲ

ಅಶೋಕ್ ಚಂದರಗಿ ಅವರು ಬರೆದಿರುವ ಪತ್ರದಲ್ಲಿ, 'ಕಳೆದ ಎಂಟು ದಿನಗಳಿಂದ ದೂರ ಉಳಿದಿರುವುದು ಸರಿಯಲ್ಲ. ಮಿತ್ರರಿಂದ ದೂರು ಉಳಿದಿರುವುದು ಏಕೆ?' ಎಂದು ಪ್ರಶ್ನೆ ಮಾಡಿದ್ದಾರೆ.

ಮಿಸ್ ಮಾಡಿಕೊಂಡಿದ್ದೇವೆ

ಮಿಸ್ ಮಾಡಿಕೊಂಡಿದ್ದೇವೆ

'ನಿಮ್ಮ ನೇರ ಮಾತು, ನಿಷ್ಕಪಟ ನಡೆಯನ್ನು ನಾವು ಮಿಸ್ ಮಾಡಿಕೊಂಡಿದ್ದೇವೆ. ನಿಮ್ಮನ್ನು ಹುಡುಕಿ ಸಾಕಾಗಿದೆ. ನೀವು ಯಾವ ಪಕ್ಷದಲ್ಲಿ ಬೇಕಾದರು ಇರಿ. ಆದರೆ, ಸದಾ ನಮ್ಮ ಕಣ್ಣ ಮುಂದಿರಿ' ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಕಾಂಗ್ರೆಸ್‌ನಿಂದ ಚಳ್ಳೆಹಣ್ಣು

ಕಾಂಗ್ರೆಸ್‌ನಿಂದ ಚಳ್ಳೆಹಣ್ಣು

ಕಾಂಗ್ರೆಸ್ ನಾಯಕರು ನಿಮಗೆ ಚಳ್ಳೆಹಣ್ಣು ತಿನ್ನಿಸಿರಬಹುದು. ಬಿಜೆಪಿಯವರು ನಿಮ್ಮನ್ನು ಆಸೆಗಣ್ಣಿನಿಂದ ನೋಡುತ್ತಿರಬಹುದು. ನಿಮ್ಮ ಧೀರ್ಘ ಕಾಲದ ಕಣ್ಮರೆ ದುಃಖ ತಂದಿದೆ ಎಂದು ಪತ್ರದಲ್ಲಿ ಸ್ನೇಹಿತರು ವಿವರಿಸಿದ್ದಾರೆ.

ರಾಜಕೀಯ ನಿಂತ ನೀರಲ್ಲ

ರಾಜಕೀಯ ನಿಂತ ನೀರಲ್ಲ

ರಮೇಶ ರಾಜಕೀಯ ನಿಂತ ನೀರಲ್ಲ. ಸದಾ ಹರಿಯುತ್ತಲೇ ಇರುತ್ತದೆ. ಒಮ್ಮೊಮ್ಮೆ ಹರಿದು ಗಟಾರ ಸೇರುತ್ತದೆ. ಕೆಲವೊಮ್ಮೆ ಸಮುದ್ರ ಸೇರುತ್ತದೆ. ನಿನ್ನ ಇಚ್ಛೆ ಏನಿದೆಯೋ ಗೊತ್ತಿಲ್ಲ ಎಂದು ಸ್ನೇಹಿತ ಪತ್ರದಲ್ಲಿ ವಿವರಣೆ ನೀಡಿದ್ದಾರೆ.

English summary
After H.D.Kumaraswamy cabinet resaffueI Ramesh Jarakiholi drooped from cabinet. From past 8 days Ramesh Jarakiholi not met any leader and media persons. Here is letter to Ramesh Jarakiholi by his friend.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X