ಭರಚುಕ್ಕಿ ಜಲಪಾತದಲ್ಲಿ ಜಾರಿ ಬಿದ್ದು ಇನ್ಫೋಸಿಸ್ ಟೆಕ್ಕಿ ಸಾವು

By: ಮೈಸೂರು ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ಫೆಬ್ರವರಿ, 01: ವೀಕೆಂಟ್ ಮಸ್ತಿಗಾಗಿ ಸ್ನೇಹಿತರೊಂದಿಗೆ ತೆರಳಿದ ಟೆಕ್ಕಿಯೊಬ್ಬಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ ಘಟನೆ ಚಾಮರಾಜನಗರ ತಾಲೂಕಿನ ಕೊಳ್ಳೇಗಾಲ ಬಳಿಯಿರುವ ಶಿವನ ಸಮುದ್ರದ ಭರಚುಕ್ಕಿ ಜಲಪಾತದಲ್ಲಿ ಭಾನುವಾರ ಸಂಜೆ ನಡೆದಿದೆ.

ನೇಹಾ (25) ಮೃತಪಟ್ಟ ಟೆಕ್ಕಿ. ಈಕೆ ಮೂಲತಃ ಜಾರ್ಖಂಡ್ ನವಳಾಗಿದ್ದು, ಮೈಸೂರಿನ ಇನ್ಫೋಸಿಸ್‍ ನಲ್ಲಿ ತರಬೇತಿ ಪಡೆಯುತ್ತಿದ್ದ ಈಕೆ ವೀಕೆಂಡ್ ಹಿನ್ನೆಲೆಯಲ್ಲಿ ಸಹಪಾಠಿಗಳೊಂದಿಗೆ ಭರಚುಕ್ಕಿಗೆ ತೆರಳಿದ್ದಳು ಎಂದು ತಿಳಿದು ಬಂದಿದೆ.[ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ರೇಪ್, ವಿಡಿಯೋ ಮಾಡಿದ ದುರುಳರು]

A infosys techie died in Bharachukki falls, Chamarajanagar

ಶನಿವಾರ ಮತ್ತು ಭಾನುವಾರ ಎರಡು ದಿನ ಕಚೇರಿಗೆ ರಜೆ ಇದ್ದ ಕಾರಣ ನೇಹಾ ಭಾನುವಾರ ಸ್ನೇಹಿತರೊಂದಿಗೆ ಚಾಮರಾಜನಗರ ಕೊಳ್ಳೆಗಾಲ ಬಳಿ ಇರುವ ಶಿವನ ಸಮುದ್ರದ ಭರಚುಕ್ಕಿ ಜಲಪಾತಕ್ಕೆ ತೆರಳಿದ್ದರು. ಜಲಪಾತ ವೀಕ್ಷಿಸಿದ ಬಳಿಕ ಸಂಜೆ ನೀರಿನಲ್ಲಿ ಆಟವಾಡುತ್ತಿದ್ದಾಗ ಗವಿಗುಂಡಿ ಬಳಿ ಕಾಲು ಜಾರಿ ನೀರಿಗೆ ಬಿದ್ದ ಪರಿಣಾಮ ಮುಳುಗಿ ಸಾವನ್ನಪ್ಪಿದ್ದಾರೆ.[ಇನ್ಫೋಸಿಸ್ ನಿಂದ 20 ಸಾವಿರ ನೇಮಕಾತಿ ಘೋಷಣೆ!]

ವಿಷಯ ತಿಳಿದು ಸ್ಥಳಕ್ಕೆ ಕೊಳ್ಳೇಗಾಲ ಗ್ರಾಮಾಂತರ ಎಸ್‍ಐ ಮೋಹಿತ್ ಸಹದೇವ್ ಅವರು ತೆರಳಿದ್ದು ಶವದ ಹುಡುಕಾಟ ಮುಂದುವರೆದಿದೆ. ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A infosys techie Neha (25) died in Bharachukki falls, Kollegala, Chamarajanagar on Sunday evening, January 31st.
Please Wait while comments are loading...