ಚಾಮರಾಜನಗರದಲ್ಲಿ ಆಂಥ್ರಾಕ್ಸ್, ಕಂಗೆಟ್ಟ ರೈತರು

By: ಮೈಸೂರು ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ಜನವರಿ,11: ಹೈನುಗಾರಿಕೆಯಿಂದ ಜೀವನ ನಿರ್ವಹಣೆ ಮಾಡುತ್ತಿದ್ದ ರೈತರಿಗೆ ಈಗ ಆಂಥ್ರಾಕ್ಸ್ ರೋಗದ ಭಯ ಆರಂಭವಾಗಿದೆ. ಕಾಲುಬಾಯಿ ಜ್ವರ ದೂರಾಗಿ ಜಾನುವಾರುಗಳು ಚೇತರಿಸಿಕೊಳ್ಳುವಾಗಲೇ ಆಂಥ್ರಾಕ್ಸ್ ಮಹಾಮಾರಿಗೆ ಬಲಿಯಾಗುತ್ತಿವೆ.

ಚಾಮರಾಜನಗರ ಜಿಲ್ಲೆಯ ತೆರಕಣಾಂಬಿಯಲ್ಲಿ ಮಹದೇವ ಎಂಬುವರ 50ಸಾವಿರ ಬೆಲೆ ಬಾಳುವ ಹಸುವೊಂದು ಸಾವನ್ನಪ್ಪಿದ್ದು, ಆಂಥ್ರಾಕ್ಸ್ ರೋಗದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು ಹೈನುಗಾರಿಕೆಯಿಂದಲೇ ಜೀವನ ಸಾಗಿಸುತ್ತಿರುವ ರೈತರು ಕಂಗಾಲಾಗಿದ್ದಾರೆ.[ಬರ್ರೀ ಲೇ ಇಲ್ಲೇ ನನ್ನ ಉಳ್ಳಾಗಡ್ಡಿ ರೊಕ್ಕ ಕೊಡಿಸ್ರೋ!]

cow

ಕಾಲುಬಾಯಿ ಜ್ವರದಿಂದ ಜಾನುವಾರಗಳನ್ನು ಮುಕ್ತಗೊಳಿಸಲು ಸರ್ಕಾರ ಕ್ರಮ ಕೈಗೊಂಡಿತ್ತು, ಈ ಸಂಬಂಧ ಜಾನುವಾರುಗಳಿಗೆ ಲಸಿಕೆ ಹಾಕುವ ಕಾರ್ಯ ಮಾಡಿತ್ತು. ಇದೀಗ ಕಾಲುಬಾಯಿ ಜ್ವರದಿಂದ ಮುಕ್ತಿ ಹೊಂದಿ ಎಲ್ಲವೂ ಸರಿ ಹೋಯಿತು ಎನ್ನುವಾಗಲೇ ಮತ್ತೊಂದು ಮಹಾಮಾರಿ ಆಂಥ್ರಾಕ್ಸ್ ನ ಭಯ ಆರಂಭವಾಗಿದೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪಶು ವೈದ್ಯರು ತೆರಳಿದ್ದು, ಸೋಂಕುವಿನ ಮಾದರಿ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಅಲ್ಲದೆ ಮುನ್ನೆಚ್ಚರಿಕೆ ಕ್ರಮವಾಗಿ ಇತರೆ ಜಾನುವಾರುಗಳಿಗೆ ಲಸಿಕೆ ಹಾಕಿದ್ದಾರೆ. ಇದ್ದಕ್ಕಿದ್ದಂತೆ ಹಸು ಸತ್ತಿರುವುದು ಇತರೆ ರೈತರನ್ನು ಕಂಗೆಡಿಸಿದೆ.[ಪತ್ರ : ಗಟ್ಟಿಮುಟ್ಟಾದ ತರ್ಕವಿಲ್ಲದ ಬಾಲಿಶ ವಿಚಾರಧಾರೆ]

ಅಂಥ್ರಾಕ್ಸ್ ರೋಗ ಅಂದ್ರೇನು?

ಸೋಂಕು ಅಂಟಿದ ಜಾನುವಾರುಗಳನ್ನು ಕೆಲವೇ ಗಂಟೆಗಳಲ್ಲಿ ಯಮಲೋಕಕ್ಕೆ ಅಟ್ಟುವಂಥ ಶಕ್ತಿಯುಳ್ಳ ಅಂಥ್ರಾಕ್ಸ್ ಅಥವಾ ನೆರಡಿ ರೋಗ ಬ್ಯಾಸಿಲಸ್ ಆಂಥ್ರಾಸಿಸ್ ಎಂಬ ಬಗೆಯ ಬ್ಯಾಕ್ಟೀರಿಯಾದಿಂದ ಬರುತ್ತದೆ. ಸತ್ತ ದನಕರುಗಳನ್ನು ಎಲ್ಲೆಂದರಲ್ಲಿ ಬಿಸಾಡುವುದರಿಂದ ಹುಟ್ಟಿಕೊಳ್ಳುವ ಬ್ಯಾಕ್ಟೀರಿಯಾ ತಮ್ಮ ಸುತ್ತ ವಿಶಿಷ್ಟ ಕವಚ ಕಟ್ಟಿಕೊಳ್ಳುತ್ತವೆ. ಇದರಿಂದಾಗಿ ಯಾವುದೇ ಕಾಲವಾದರೂ ಇವು ಸಾಯುವುದಿಲ್ಲ.[ಸತ್ತ ಕರುವಿಗೆ ನ್ಯಾಯ ಕೇಳುತ್ತಿರುವ 'ಪುಣ್ಯಕೋಟಿ'ಯ ಕಥೆ]

ಅಂಥ ಪ್ರದೇಶದಲ್ಲಿ ದನಕರುಗಳು ಹುಲ್ಲು ಮೇಯುವಾಗ, ನೀರು ಕುಡಿಯುವಾಗ ಪ್ರಾಣಿಯ ದೇಹವನ್ನು ಈ ಬ್ಯಾಕ್ಟೀರಿಯಾಗಳು ಸೇರಿ ಮರಣಮೃದಂಗ ಬಾರಿಸುತ್ತವೆ. ವಿಪರೀತ ಜ್ವರಿಂದ ಬಳಲುವ ಹಸುಗಳು ಸಾಯುತ್ತಿದ್ದಂತೆ ಅವುಗಳ ಗುದದ್ವಾರ, ಕಿವಿ, ಬಾಯಿಯಿಂದ ರಕ್ತ ಒಸರುತ್ತದೆ. ಸದ್ಯಕ್ಕೆ ಈ ರೋಗಕ್ಕೆ ಯಾವುದೇ ಚಿಕಿತ್ಸೆಯನ್ನು ಕಂಡುಹಿಡಿಯಲಾಗಿಲ್ಲ. ಕುರಿಗಳನ್ನು ಸಾಕುವ ಕುರಿಗಾಹಿಗಳಿಗೆ ಕೂಡ ಈ ರೋಗ ಬರುವ ಸಾಧ್ಯತೆ ಇರುತ್ತದೆ ಎಂದು ಚಾಮರಾಜನಗರದ ಸ್ಥಳೀಯ ವೈದ್ಯರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದರು.

ಆಂಥ್ರಾಕ್ಸ್ ರೋಗದಿಂದ ಸತ್ತ ಪ್ರಾಣಿಗಳನ್ನು ಪೋಸ್ಟ್ ಮಾರ್ಟಂ ಮಾಡಬಾರದು. ಹಾಗೂ ಕುಯ್ದು ಓಪನ್ ಮಾಡದಂತೆ ರೈತರಿಗೆ ತಿಳಿವಳಿಕೆ ನೀಡಬೇಕು. ಗುಂಡಿ ತೆಗೆದು ಕಳೇಬರದ ಮೇಲೆ ಸುಣ್ಣ ಸುರಿದು ಮಣ್ಣಿನಿಂದ ಮುಚ್ಚಬೇಕು. ಹೀಗೆ ಮಾಡಿದರೆ ಬ್ಯಾಕ್ಟೀರಿಯಾ ಹಾವಳಿ ಎಬ್ಬಿಸದಂತೆ ತಡೆಯಲು ಸಾಧ್ಯ ಎನ್ನುತ್ತಾರೆ ವೈದ್ಯರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A cow died in Anthrax disease in Chamarajanagar.Anthrax is an acute disease caused by the bacterium Bacillus anthracis. Most forms of the disease are lethal, and it affects most animals. It can be transmitted through contact with infected meat.
Please Wait while comments are loading...