ಕಾಣೆಯಾದ ಕಲಬುರಗಿಯ ಬಾಲಕನನ್ನು ಹುಡುಕಿಕೊಡಿ

Posted By:
Subscribe to Oneindia Kannada

ಕಲಬುರಗಿ, ಫೆಬ್ರವರಿ,18: ಸಂಜೆ ಮನೆಪಾಠಕ್ಕೆಂದು ತೆರಳಿದವನು ಮನೆ ತಲುಪಿಲ್ಲ. ಸ್ನೇಹಿತರು, ಸಂಬಂಧಿಕರು ಯಾರನ್ನೇ ವಿಚಾರಿಸಿದರೂ ಅವನ ಬಗ್ಗೆ ಇದುವರೆಗೂ ಮಾಹಿತಿ ಲಭ್ಯವಾಗಿಲ್ಲ. ಎಲ್ಲಿ ಹೋದ, ಯಾರು ಅಪಹರಿಸಿದರು ಎಂಬುದೇ ತಿಳಿಯುತ್ತಿಲ್ಲ. ದಯವಿಟ್ಟು ಕಾಣೆಯಾದ ನನ್ನ ಮಗನನ್ನು ಹುಡುಕಿಸಿಕೊಡಿ ಎಂದು ತಂದೆ ತಾಯಿ ಗೋಗರೆಯುತ್ತಿದ್ದಾರೆ.

ಫೆಬ್ರವರಿ 16 ರಿಂದ ಕಾಣೆಯಾದ ಬಾಲಕನೇ ಸುಜಯ್ ಮುದಗಲ್ (ಹಣಮಂತು). ಈತ ಪ್ರಾಣೇಶ್ ಮುದುಗಲ್ ಹಾಗೂ ಗಿರಿಜಾ ದಂಪತಿಯ ಮಗನಾಗಿದ್ದು, ಗುಲ್ಬರ್ಗಾ ಜಿಲ್ಲೆಯ ಕಲಬುರಗಿಯ ರಾಘವೇಂದ್ರ ಕಾಲೋನಿ ಬಳಿ ಇರುವ ಸೇಂಟ್ ಮೇರಿಸ್ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದನು.[ಹೆತ್ತವರ ಪ್ರೀತಿ ಕಳೆದುಕೊಂಡು ನಲುಗುತ್ತಿರುವ ಮಕ್ಕಳು]

A 14 years boy escaped in Kalaburagi, Gulbarga

ಸುಜಯ್ ಫೆಬ್ರವರಿ 16ರಂದು ಸಂಜೆ 6.30ರ ಸುಮಾರಿಗೆ ಮನೆ ಬಳಿ ಇರುವ ಟ್ಯೂಶನ್ ಗಾಗಿ ತೆರಳಿದ್ದಾನೆ. ಎಷ್ಟೇ ಹೊತ್ತಾದರೂ ಮನೆಗೆ ಬಾರದಿರುವುದನ್ನು ಕಂಡು ಕಂಗಾಲಾಗಿ ಟ್ಯೂಶನ್ ಸೇರಿದಂತೆ ಎಲ್ಲೆಡೆ ವಿಚಾರಿಸಲಾಗಿದೆ. ಆದರೂ ಆತನ ಸುಳಿವು ದೊರೆತಿಲ್ಲ.

ಸುಜಯ್ ಕಾಣೆಯಾಗಿರುವ ಕುರಿತು ಆತನ ಅಣ್ಣ ರೇವಂತ ರಾಘವೇಂದ್ರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಆತನ ಹುಡುಕಾಟದಲ್ಲಿ ತೊಡಗಿದ್ದಾರೆ. ಈತನ ಮಾಹಿತಿ ದೊರೆತಲ್ಲಿ ರಾಘವೇಂದ್ರ ನಗರ ಠಾಣೆಗೆ ಅಥವಾ ಪೊಲೀಸ್ ಕಂಟ್ರೋಲ್ ರೂಮ್ ಗೆ (8472-263608, 263604) ತಿಳಿಸುವಂತೆ ಹೇಳಿದ್ದಾರೆ.[ಇಬ್ಬರು ಮಕ್ಕಳ ಬಾಳಿಗೆ ಬೆಳಕಾದ ವಿಜಯಪುರದ 'ಜ್ಯೋತಿ']

ಸುಜಯ್ ನೋಡಲು ಹೇಗಿದ್ದಾನೆ?

14 ವರ್ಷದವನಾದ ಸುಜಯ್ ಕೆಂಪು ಗೋಧಿ ಬಣ್ಣ, ಗೋಲುಮುಖದವನಾಗಿದ್ದು, ಚಾಕಲೇಟ್ ಬಣ್ಣದ ಅಂಗಿ ಮತ್ತು ಕಂದು ಬಣ್ಣದ ಜೀನ್ಸ್ ಧರಿಸಿದ್ದಾನೆ. ಫೆಬವ್ರವರಿಯಿಂದ ಕಾಣೆಯಾಗಿರುವ ಈತ ಎರಡು ದಿನವಾದರೂ ಪತ್ತೆಯಾಗಿಲ್ಲ ಎಂದು ಪೋಷಕರು ತಿಳಿಸಿದ್ದಾರೆ.

ಮನೆ ವಿಳಾಸ:
ಪ್ಲಾಟ್ ನಂ. 23
ಸಿತಾರಾ, ನ್ಯೂ ರಾಘವೇಂದ್ರ ಕಾಲೋನಿ[ಪೋಷಕರೇ, ಮಕ್ಕಳನ್ನು ಫೆವಿಕಾಲ್, ಪೇಯಿಂಟ್ ನಿಂದ ದೂರವಿರಿಸಿ]
ಬ್ರಹ್ಮಪುರ, ಕಲಬುರಗಿ, ಗುಲ್ಬರ್ಗಾ
ಫೋ.ನಂ : 9945015932

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 14 years Sujay Mudagal(Hanamanthu)escaped from February 16th at 6.30 PM, in Kalaburagi, Gulbarga.He is student of Saint mary's School, Raghavendra colony,Gulbarga.If you have get this boy contact his father Pranesh ph:9945015932,Home Address: Plat No.23, Sitara, New Raghavendra Colony, Brahmapur,Kalaburagi,
Please Wait while comments are loading...