ರಾಜ್ಯದಲ್ಲಿ ಇಂದು 9,886 ಕೋವಿಡ್ ಪ್ರಕರಣ ಪತ್ತೆ

ಬೆಂಗಳೂರು, ಅಕ್ಟೋಬರ್ 3: ರಾಜ್ಯದಲ್ಲಿ ಶನಿವಾರ 9886 ಹೊಸ ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿವೆ. ನೂರು ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 8,989 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ರಾಜ್ಯದಲ್ಲಿ ಒಟ್ಟು 1,12783 ಸಕ್ರಿಯ ಪ್ರಕರಣಗಳಿವೆ. ಒಟ್ಟು 5,08495 ಮಂದಿ ಚೇತರಿಸಿಕೊಂಡಿದ್ದು, ಇದುವರೆಗೂ 9219 ಮಂದಿ ಬಲಿಯಾಗಿದ್ದಾರೆ. ರಾಜ್ಯದ ಪಾಸಿಟಿವ್ ಪ್ರಕರಣಗಳ ಸಂಖ್ಯೆ 6,30,516ಕ್ಕೆ ಏರಿಕೆಯಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು 3925 ಪ್ರಕರಣಗಳು ಪತ್ತೆಯಾಗಿವೆ. 2001 ಮಂದಿ ಬಿಡುಗಡೆಯಾಗಿದ್ದಾರೆ. 21 ಮಂದಿ ಮೃತಪಟ್ಟಿರುವುದು ವರದಿಯಾಗಿದೆ. ಇದರಿಂದ ಬೆಂಗಳೂರು ನಗರದಲ್ಲಿನ ಒಟ್ಟು ಪ್ರಕರಣಗಳು 2,45,700ಕ್ಕೆ ತಲುಪಿದ್ದು, 1,89,382 ಮಂದಿ ಬಿಡುಗಡೆಯಾಗಿದ್ದಾರೆ. ಬೆಂಗಳೂರಿನ ನಂತರ ಅತ್ಯಧಿಕ ಪ್ರಕರಣಗಳು ಮೈಸೂರಿನಲ್ಲಿ ವರದಿಯಾಗಿವೆ. ಮೈಸೂರಿನಲ್ಲಿ ಸಾವಿರಕ್ಕೂ ಅಧಿಕ ಪ್ರಕರಣಗಳು (1514) ವರದಿಯಾಗಿವೆ.

9886 New Coronavirus Cases And 100 Deaths Registered In The State On Saturday

ಹಾಸನ 460, ದಕ್ಷಿಣ ಕನ್ನಡ 258, ಬೆಂಗಳೂರು ಗ್ರಾಮಾಂತರ 283, ಬಳ್ಳಾರಿ 253, ಶಿವಮೊಗ್ಗ 337, ತುಮಕೂರು 302, ಮಂಡ್ಯ 206, ಉಡುಪಿ 158, ದಾವಣಗೆರೆ 129, ಕಲಬುರಗಿ 107, ವಿಜಯಪುರ 97, ಉತ್ತರ ಕನ್ನಡ 92, ಕೊಪ್ಪಳ 98, ಚಿತ್ರದುರ್ಗ 76, ಚಿಕ್ಕಮಗಳೂರು 175, ಬೆಳಗಾವಿ 258, ಚಿಕ್ಕಬಳ್ಳಾಪುರದಲ್ಲಿ 234 ಪ್ರಕರಣಗಳು ವರದಿಯಾಗಿವೆ.

ಅತಿ ಕಡಿಮೆ ಪ್ರಕರಣ ಬೀದರ್‌ನಲ್ಲಿ-14 ದಾಖಲಾಗಿದೆ. ಕೊಡಗು 37, ಕೋಲಾರ 20, ಹಾವೇರಿ 71, ಪ್ರಕರಣಗಳು ದಾಖಲಾಗಿವೆ. ಚಾಮರಾಜನಗರ 179, ಗದಗ 32, ರಾಯಚೂರು 199, ರಾಮನಗರ 58, ಯಾದಗಿರಿ 128, ಧಾರವಾಡ 98, ಬಾಗಲಕೋಟೆ 88 ಪ್ರಕರಣಗಳು ಪತ್ತೆಯಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+