ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೇರಾ ಪಾಲಿಸದ 924 ಯೋಜನೆಗಳು ಬ್ಲ್ಯಾಕ್‌ಲಿಸ್ಟ್‌ಗೆ

By Nayana
|
Google Oneindia Kannada News

ಬೆಂಗಳೂರು, ಜು.20: ರೇರಾ ಕಾಯ್ದೆಯಲ್ಲಿ ರಾಜ್ಯದ 1626 ಬಿಲ್ಡರ್‌ಗಳಿಗೆ ನೋಟಿಸ್ ನೀಡಲಾಗಿದ್ದು, 924 ಯೋಜನೆಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದು ಸಚಿವ ಯುಟಿ ಖಾದರ್‌ ತಿಳಿಸಿದ್ದಾರೆ.

ರೇರಾ ಕಾಯ್ದೆಯಲ್ಲಿ 2370 ಯೋಜನೆಗಳು ನೋಂದಣಿಯಾಗಿದ್ದು, 1942 ಯೋಜನೆಗಳಿಗೆ ಪರವಾನಗಿ ನೀಡಲಾಗಿದೆ. 175 ಅರ್ಜಿಗಳು ತಿರಸ್ಕೃತಗೊಂಡಿದೆ. ಆರು ಯೋಜನೆಗಳನ್ನು ಅರ್ಜಿದಾರರೇ ಹಿಂಪಡೆದಿದ್ದಾರೆ. ಅರ್ಜಿಯನ್ನು ಪಡೆದು ಮೂರು ತಿಂಗಳ ಒಳಗಾಗಿ ರೇರಾದಲ್ಲಿ ರಿಜಿಸ್ಟರ್‌ ಆಗಬೇಕು, ಮಾರ್ಕೆಟಿಂಗ್‌ ಮಾಡುವ ಮೊದಲು ನೋಂದಾಯಿಸಬೇಕು, ಕೆಲವು ಮಾರ್ಕೆಟಿಂಗ್‌ ಆರಂಭಮಾಡಿ ಮೂರು ತಿಂಗಳು ಕಳೆದರೂ ರೇರಾದಲ್ಲಿ ನೋಂದಣಿ ಮಾಡಿಲ್ಲ, ಹಾಗಾಗಿ ಅವುಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ.

924 projects not registered with RERA may be blacklisted

247 ಅರ್ಜಿಗಳು ಪ್ರಕ್ರಿಯೆಯಲ್ಲಿದೆ. ರೇರಾ ಕಾಯ್ದೆಯಡಿ ಒಟ್ಟು 1037 ದೂರುಗಳು ಬಂದಿದ್ದು, ಅಧಿಕಾರಿಗಳು ಪರಿಶೀಲಿಸಿ ಕ್ರಮ ಜರುಗಿಸಲಿದ್ದಾರೆ, ಸಾರ್ವಜನಿಕರಿಂದ ಬರುವ ದೂರುಗಳ ವಿಚಾರಣೆ ನಡೆಸಲು ನಿವೃತ್ತ ನ್ಯಾಯಮೂರ್ತಿಗಳಿದ್ದಾರೆ ಇದುವರೆಗೆಈ ಹಂತದಲ್ಲಿ 272 ದೂರು ಬಂದಿದ್ದು, ಆ ಪೈಕಿ 221 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.

ರಾಜ್ಯ ಸರ್ಕಾರದ 'ರಿಯಲ್ ಎಸ್ಟೇಟ್ ಕಾಯ್ದೆ' ಶೀಘ್ರವೇ ಅನುಷ್ಠಾನ? ರಾಜ್ಯ ಸರ್ಕಾರದ 'ರಿಯಲ್ ಎಸ್ಟೇಟ್ ಕಾಯ್ದೆ' ಶೀಘ್ರವೇ ಅನುಷ್ಠಾನ?

ಬಿಲ್ಡರ್‌ಗಳು ನಿಗದಿತ ಸಮಯದಲ್ಲಿ ಕಟ್ಟಡ ನಿರ್ಮಿಸಿ ಹಸ್ತಾಂತರಿಸದೇ ಇರುವ ದೂರುಗಳನ್ನು ಶೀಘ್ರದಲ್ಲೇ ಪರಿಹರಿಸಲು ಕ್ರಮ ಕೈಗೊಳ್ಳಲಾಗಿದೆ. ಗ್ರಾಹಕಉ ಹಾಗೂ ಬುಲ್ಡರ್‌ ನಡುವೆ ಒಪ್ಪಂದ ಉಲ್ಲಂಘನೆಯಾಗಿದ್ದಲ್ಲಿ 2 ತಿಂಗಳಲ್ಲಿ ಬಿಲ್ಡರ್‌ಗಳು ಗ್ರಾಹಕರಿಂದ ಪಡೆದ ಹಣ ಹಿಂದಿರುಗಿಸಬೇಕು ಎಂದು ಕಾಯ್ದೆಯಲ್ಲಿ ಹೇಳಲಾಗಿದೆ ಎಂದು ತಿಳಿಸಿದರು.

English summary
As many as 924 housing projects across the state are likely to be blacklisted by the government for not registering with the Real Estate Regulatory Authority, as mandated by the Real Estate (Regulation and Development) Act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X