ಸಿಹಿ ಸುದ್ದಿ: ಹೈಟೆಕ್ '08 ಸ್ಕ್ರೀನ್ ಮಲ್ಟಿಫ್ಲೆಕ್ಸ್' ಥಿಯೇಟರ್ ಶುರು, ಹೇಗಿದೆ ಗೊತ್ತಾ....
ಹುಬ್ಬಳ್ಳಿ, ಅಕ್ಟೋಬರ್ 14: ಓಟಿಟಿ ಜಮಾನ ಶುರುವಾದ ಮೇಲೆ ಸಿಂಗ್ ಸ್ಕ್ರೀನ್ ಥಿಯೇಟರ್ ಗಳಿಗೆ ಹೊಡೆತ ಬಿದ್ದಿವೆ. ಎರಡರಿಂದ ನಾಲ್ಕು ಸ್ಕ್ರೀನ್‌ವುಳ್ಳ ಮಲ್ಟಿಫೆಕ್ಸ್ ಅಬ್ಬರ ಶುರುವಾಗಿದೆ. ಇತ್ತೀಚೆಗೆ ಮಲ್ಟಿಫೆಕ್ಸ್‌ಗೂ ಜನ ಬರುವುದು ಕಡಿಮೆ ಎಂಬಂತಾಗಿದೆ. ಹೀಗಿರುವಾಗ ಇಲ್ಲಿ '08 ಸ್ಕ್ರೀನ್ ಇರುವ 'ಮಲ್ಟಿಫ್ಲೆಕ್ಸ್' ಥಿಯೇಟರ್ ಆರಂಭವಾಗುತ್ತಿದೆ. ಈ ಮೂಲಕ ಸಿನಿಮಾ ರಂಗದವರಿಗೆ, ಸಿನಿಮಾಸಕ್ತರಿಗೆ ಸಿಹಿ ಸುದ್ದಿಯೊಂದು ಸಿಕ್ಕಂತಾಗಿದೆ.
ಪ್ರೇಕ್ಷಕರಿಗೆ ಐಶಾರಾಮಿ, ರಾಜ್ಯದಲ್ಲಿ ಎಲ್ಲಿಯೂ ಸಿಗದೇ ಹೊಸ ಅನುಭವ ನೀಡುವ ಉದ್ದೇಶದಿಂದ ಈ ಬಹು ಪರದೆ (ಮಲ್ಟಿಸ್ಕ್ರೀನ್) ಥಿಯೇಟರ್ (ಮಲ್ಟಿಫ್ಲೆಕ್ಸ್) ಶುರುವಾಗುತ್ತಿದೆ. ನೀವು ಇಲ್ಲಿಗೆ ಬಂದು ಒಂದು ಬಾರಿ ಸಿನಿಮಾ ವೀಕ್ಷಿಸಿದರೆ, ಮುಂದಿನ ಸಿನಿಮಾವನ್ನು ಇಲ್ಲಿಯೋ ನೋಡಬಯಸುವಂತೆ ಇರಲಿದೆ. 4k ವಿಡಿಯೋ ಅನುಭವ ಇಲ್ಲಿಗೆ ನಿಮಗೆ ಸಿಗಲಿದೆ ಎನ್ನುತ್ತಾರೆ. ಇದರ ಹೆಸರು ಲಕ್ಷ್ಮೀ ಸಿಟಿ ಪ್ರೈಡ್ ಮಲ್ಟಿಪೆಕ್ಷ್ ಥಿಯೇಟರ್ ಆರಂಭ ಆಗಿದೆ.

ಉದ್ಯಮಿ ದಿ. ರಾಮಕೃಷ್ಣ ಸಾ ಎಂ. ಚಾಟ್ನಿ ಅವರ ದೂರದೃಷ್ಟಿ ಫಲ
ಶ್ರೀ ಲಕ್ಷ್ಮೀ ಎಂಟರ್ಪ್ರೈಸ್ ವತಿಯಿಂದ ಲಕ್ಷ್ಮೀ ಸಿಟಿ ಪ್ರೈಡ್ ಮಲ್ಟಿಪೆಕ್ಷ್ ಥಿಯೇಟರ್ ಹೆಸರಿನಲ್ಲಿ ಹುಬ್ಬಳ್ಳಿಯಲ್ಲಿ ಹೊಸ ರೀತಿಯ ಅನುಭವ ನೀಡಲು ಮಾಲೀಕರು ಸಜ್ಜಾಗಿದ್ದಾರೆ. ಉತ್ತರ ಕರ್ನಾಟಕದ ಪ್ರಮುಖ ನಗರಗಳಲ್ಲಿ ಒಂದಾದ, ರಾಜ್ಯದ ವಾಣಿಜ್ಯ ನಗರಿಯಾಗಿರುವ ಹುಬ್ಬಳ್ಳಿಯ ಸಿನಿ ಪ್ರೇಕ್ಷಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಕೇವಲ ಹುಬ್ಬಳ್ಳಿ ಮಾತ್ರವಲ್ಲದೇ ಧಾರವಾಡ ಜನರಿಗೂ ಇದೊಂದು ಖುಷಿಯ ವಿಷಯವಾಗಿದೆ.
ಸಿನಿ ಪ್ರೇಕ್ಷಕರಿಗಾಗಿ ಎಂಟು ಪರದೆಗಳುಳ್ಳ ( 8 screen) ದೊಡ್ಡ ಮಲ್ಟಿಪ್ಲೆಕ್ಸ್ ಥಿಯೇಟರ್ ಅತ್ಯಂತ ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ಇದು ಉತ್ತರ ಕರ್ನಾಟಕದಲ್ಲಿಯೇ ಮೊಟ್ಟ ಮೊದಲ 8 ಪರದೆಗಳ ಮಲ್ಟಿಪ್ಲೆಕ್ಸ್ ಥಿಯೇಟರ್ ಇದಾಗಿದೆ.

ಹೈಟೆಕ್ ಥಿಯೇಟರ್ ವಿಶೇಷತೆಗಳು ಏನು?
ಹುಬ್ಬಳ್ಳಿ ನಗರದ ಅತ್ಯಂತ ಪ್ರಮುಖ ಮಾರುಕಟ್ಟೆ ಹಾಗೂ ಹೃದಯಭಾಗದಲ್ಲೇ ಇರುವ ಈ ಎಂಟು ಪರದೆಗಳ ದೊಡ್ಡ ಮಲ್ಟಿಸ್ಕ್ರೀನ್ ಮಲ್ಟಿಪ್ಲೆಕ್ಸ್ ಥಿಯೇಟರ್ ಗೆ ಲಕ್ಷ್ಮೀ ಸಿಟಿ ಪ್ರೈಡ್ ಮಲ್ಟಿಪೆಕ್ಷ್ ಥಿಯೇಟರ್ ಎಂದು ಹೆಸರಿಡಲಾಗಿದೆ.
ಈ ಹೈಟೆಕ್ 4ಕೆ ಲೇಸರ್ ಪ್ರೊಜೆಕ್ಷನ್, ಡಾಲ್ಬಿ ಆಟಮ್ಸ್ ಆಡಿಯೋ ವ್ಯವಸ್ಥೆ, ಬೆಡ್ ಲಾಂಜರ್ ಮಾದರಿ ಹಾಗೂ ರಿಕ್ಲೈನರ್ ಮಾದರಿಯ ಆಸನಗಳ ವ್ಯವಸ್ಥೆಯಿದೆ. ಜಾಗತಿಕ ಆಡಿಯೋ ರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಡಾಲ್ಬಿ ಆಡಿಯೋ ವ್ಯವಸ್ಥೆಯು ಹುಬ್ಬಳ್ಳಿಗೆ ಶ್ರೀ ಲಕ್ಷ್ಮೀ ಎಂಟರ್ಪ್ರೈಸ್ ಹೆಸರಲ್ಲಿ ಚಾಟ್ನಿ ಸಹೋದರರು ಇದೇ ಮೊದಲ ಬಾರಿಗೆ ಇಂಥದ್ದೊಂದು ಸುವ್ಯವಸ್ಥೆಯನ್ನು ಪರಿಚಯಿಸಿದ್ದಾರೆ.












Click it and Unblock the Notifications