7th Pay Commission: 6ನೇ ವೇತನ ಆಯೋಗ ಮಾಡಿದ್ದ ಶಿಫಾರಸುಗಳ ವಿವರಗಳು

ಬೆಂಗಳೂರು, ಅಕ್ಟೋಬರ್ 13: ಕರ್ನಾಟಕ ಸರ್ಕಾರ ರಚನೆ ಮಾಡಿದ್ದ ಕೆ. ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ 558 ಪುಟಗಳ ಸಂಪುಟ-1ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ಆಗಸ್ಟ್‌ ತಿಂಗಳಿನಿಂದಲೇ ವರದಿಯನ್ನು ಜಾರಿಗೊಳಿಸಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಆಯೋಗ ತನ್ನ ವರದಿಯಲ್ಲಿ 6ನೇ ವೇತನ ಆಯೋಗ ಸರ್ಕಾರಿ ನೌಕರರಿಗೆ ಶಿಫಾರಸು ಮಾಡಿದ್ದ ಅಂಶಗಳನ್ನು ಸಹ ಉಲ್ಲೇಖಿಸಿದೆ, ಅವುಗಳ ಮಾಹಿತಿ ಇಲ್ಲಿದೆ.

6ನೇ ರಾಜ್ಯ ವೇತನ ಆಯೋಗ, 2017 ಅನ್ನು ಎಂ. ಆರ್. ಶ್ರೀನಿವಾಸ ಮೂರ್ತಿ ನೇತೃತ್ವದಲ್ಲಿ ದಿನಾಂಕ 01.06.2017 ರಂದು ರಚಿಸಲಾಯಿತು. ಆಯೋಗವು ತನ್ನ ವರದಿಯನ್ನು ಎರಡು ಸಂಪುಟಗಳಲ್ಲಿ ನೀಡಿತು. ದಿನಾಂಕ 18.01.2018ರಂದು ಸಂಪುಟ-1 ಮತ್ತು ಏಪ್ರಿಲ್ 2018ರಲ್ಲಿ ಸಂಪುಟ-2. ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿರುವ ವೇತನ ರಚನೆ, ಭತ್ಯೆಗಳು, ಮತ್ತು ನಿವೃತ್ತಿ ವೇತನವು ಈ ಆಯೋಗದ ಶಿಫಾರಸ್ಸುಗಳನ್ನು ಆಧರಿಸಿದೆ. ಈ ಶಿಫಾರಸ್ಸುಗಳನ್ನು ದಿನಾಂಕ 01.07.2017 ರಿಂದ ಕಾಲ್ಪನಿಕವಾಗಿ ಜಾರಿಗೊಳಿಸಲಾಯಿತು ಮತ್ತು ವಾಸ್ತವವಾಗಿ ಆರ್ಥಿಕ ಸೌಲಭ್ಯಗಳನ್ನು ದಿನಾಂಕ 01.04.2018ರಿಂದ ಒದಗಿಸಲಾಯಿತು.

7th Pay Commission Report Karnataka Know 6Th Pay Commission Recommendations

ಆಯೋಗದ ಪ್ರಮುಖ ಶಿಫಾರಸ್ಸುಗಳು: ಆಯೋಗ ಈ ಹಿಂದೆ ಅಸ್ತಿತ್ವದಲ್ಲಿದ್ದ ಅದೇ ಸಂಖ್ಯೆಯ ವೇತನ ಶ್ರೇಣಿಗಳಿಗೆ ಅನುಗುಣವಾಗಿ 25 ಹೊಸ ವೇತನ ಶ್ರೇಣಿಗಳನ್ನು ಅಳವಡಿಸಿಕೊಳ್ಳುವುದು. 92 ಹಂತಗಳೊಂದಿಗೆ ನೂತನ ಮುಖ್ಯ ಶ್ರೇಣಿ ರೂ.17,000 - ರೂ.1,50,600. ಮನೆ ಬಾಡಿಗೆ ಭತ್ಯೆ ಮತ್ತು ನಗರ ಪರಿಹಾರ ಭತ್ಯೆಯನ್ನು ಹೊರತುಪಡಿಸಿ ದಿನಾಂಕ 01.07.2017ಕ್ಕೆ ಮಾಸಿಕ ರೂ.17,000ಗಳ ಕನಿಷ್ಠ ವೇತನವನ್ನು ನಿಗದಿಪಡಿಸುವುದು ಎಂದು ಶಿಫಾರಸು ಮಾಡಿತ್ತು.

ಎಲ್ಲಾ ವರ್ಗಗಳಿಗೂ ಮೂಲ ವೇತನವನ್ನು ಶೇ.30ಕ್ಕೆ ಏರಿಸಲಾಯಿತು. ಶೇ.30 ರಷ್ಟು ವೇತನ ಹೆಚ್ಚಳ ಸೌಲಭ್ಯವನ್ನು (Fitment benefit) ಮತ್ತು ಮೂಲ ವೇತನದ ಶೇ.45.25 ರಷ್ಟು ತುಟ್ಟಿಭತ್ಯೆಯನ್ನು ವಿಲೀನಗೊಳಿಸುವುದು. ಮೂಲ ನಿವೃತ್ತಿ ವೇತನವನ್ನು ಶೇ.30ಕ್ಕೆ ಹೆಚ್ಚಿಸುವುದರ ಮೂಲಕ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ಪರಿಷ್ಕರಿಸುವುದು. ವೇತನ ಬಡ್ತಿ ದರಗಳನ್ನು ರೂ. 400ರಿಂದ ರೂ. 3,100ಕ್ಕೆ ಏರಿಸಲಾಯಿತು. ವಾರ್ಷಿಕ ವೇತನ ಬಡ್ತಿಗಳನ್ನು ಜನವರಿ 1 ಅಥವಾ ಜುಲೈ 1ರಂದು ಮಂಜೂರು ಮಾಡುವುದು ಎಂದು ಶಿಫಾರಸು ಮಾಡಿತ್ತು.

ಭತ್ಯೆಗಳು

* ಭಾರತ ಸರ್ಕಾರದಲ್ಲಿ ಚಾಲ್ತಿಯಲ್ಲಿರುವ ಮಾದರಿಯಲ್ಲಿ ವರ್ಷದಲ್ಲಿ ಎರಡು ಬಾರಿ ತುಟ್ಟಿ ಭತ್ಯೆ ಸಂದಾಯವನ್ನು ಮುಂದುವರೆಸಿ, ಕೇಂದ್ರದ ತುಟ್ಟಿ ಭತ್ಯೆಯ ಪತಿ ಶೇ.1 ರಷ್ಟು ಹೆಚ್ಚಳಕ್ಕೆ 0.944 ದರದಲ್ಲಿ ತುಟ್ಟಿ ಭತ್ಯೆ.

* ಮನೆ ಬಾಡಿಗೆ ಭತ್ಯೆ ದರಗಳು ಶೇ.24, ಶೇ.16, ಶೇ.8

* ನಗರ ಪರಿಹಾರ ಭತ್ಯೆಯನ್ನು ಬಿಬಿಎಂಪಿ ಪ್ರದೇಶದಲ್ಲಿನ ಎಲ್ಲಾ ಗ್ರೂಪ್ ಎ, ಬಿ, ಸಿ ಮತ್ತು ಡಿ ಮತ್ತು ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಮೈಸೂರು, ಮಂಗಳೂರು ಮತ್ತು ಕಲಬುರಗಿ ನಗರಗಳಿಗೆ ಪರಿಷ್ಕರಿಸುವುದು.

* ವಿಶೇಷ ಕಷ್ಟಕರ ಕರ್ತವ್ಯಗಳಿಗಾಗಿ ವಿಶೇಷ ಭತ್ಯೆಯನ್ನು ರೂ. 600ಗಳಿಗೆ ನಿಗದಿಪಡಿಸಿ ಸರಳೀಕರಣಗೊಳಿಸಿತು.

* ವಿಶೇಷ ಚೇತನ ನೌಕರರಿಗಾಗಿ ವಿಶೇಷ ವಾಹನ/ ಯಾಂತ್ರೀಕೃತ ಸಾರಿಗೆಯನ್ನು ಖರೀದಿಸಲು ಸಹಾಯಧನವನ್ನು ರೂ. 40,000ಕ್ಕೆ ಹೆಚ್ಚಿಸುವುದು

* ನೌಕರರ ವಿಶೇಷ ಚೇತನ ಮಕ್ಕಳಿಗಾಗಿ ಶೈಕ್ಷಣಿಕ ಭತ್ಯೆಯನ್ನು ಪ್ರತಿ ಮಗುವಿಗೆ ಮಾಸಿಕ ರೂ.1000ಕ್ಕೆ ಹಚ್ಚಿಸುವುದು (ಎರಡು ಮಕ್ಕಳವರೆಗೆ).

* ವಿಶೇಷ ಚೇತನ ನೌಕರರು ಲ್ಯಾಪ್‌ಟಾಪ್‌ ಮತ್ತು ಡಿಜಿಟಲ್ ನೆರವು ಮುಂತಾದವುಗಳನ್ನು ಖರೀದಿಸಲು ರೂ. 25,000 ಗಳ ಬಡ್ಡಿರಹಿತ ಸಾಲ.

ನಿವೃತ್ತಿ ವೇತನ ಹಾಗೂ ಮರಣ ಮತ್ತು ನಿವೃತ್ತಿ ಉಪದಾನ: ರಾಜ್ಯ ಸರ್ಕಾರವು ನಿವೃತ್ತಿ ವಯಸ್ಸನ್ನು ದಿನಾಂಕ 01.07.2008 ರಿಂದ ಅನ್ವಯವಾಗುವಂತೆ 58 ರಿಂದ 60 ಕ್ಕೆ ಹೆಚ್ಚಿಸಲಾಗಿದ್ದು, 60 ವರ್ಷಗಳನ್ನು ಉಳಿಸಿಕೊಳ್ಳಲಾಗಿರುತ್ತದೆ. ಪೂರ್ಣ ನಿವೃತ್ತಿ ವೇತನ ಪಡೆಯಲು ಅರ್ಹತಾದಾಯಕ ಸೇವೆಯನ್ನು 33 ರಿಂದ 30 ವರ್ಷಗಳಿಗೆ ಇಳಿಸುವುದು. ಸ್ವಯಂ ನಿವೃತ್ತಿ ಪಡೆಯಲು ಕನಿಷ್ಠ ಅರ್ಹತಾದಾಯಕ ಸೇವೆಯನ್ನು 15 ರಿಂದ 10 ವರ್ಷಕ್ಕೆ ಇಳಿಸುವುದು. ಕನಿಷ್ಠ ನಿವೃತ್ತಿ ವೇತನವನ್ನು ರೂ. 4,800 ರಿಂದ ರೂ. 8,500 ಗಳಿಗೆ ಮತ್ತು ಗರಿಷ್ಠ ನಿವೃತ್ತಿ ವೇತನವನ್ನು ರೂ.39,900 ರಿಂದ ರೂ.75,300 ಗಳಿಗೆ ಹೆಚ್ಚಿಸುವುದು ಎಂದು ಶಿಫಾರಸು ಮಾಡಿತ್ತು.

ಕನಿಷ್ಠ ಕುಟುಂಬ ನಿವೃತ್ತಿ ವೇತನವನ್ನು ರೂ. 4,800 ರಿಂದ ರೂ.8,500 ಗಳಿಗೆ ಹಚ್ಚಿಸಲಾಯಿತು. ಗರಿಷ್ಠ ಕುಟುಂಬ ನಿವೃತ್ತಿ ವೇತನವನ್ನು ರೂ. 23,940 ರಿಂದ ರೂ. 45,180 ಗಳಿಗೆ ಹೆಚ್ಚಿಸುವುದು. ಮರಣ ಮತ್ತು ನಿವೃತ್ತಿ ಉಪದಾನದ ಗರಿಷ್ಠ ಮಿತಿಯನ್ನು ರೂ.10 ಲಕ್ಷಗಳಿಂದ ರೂ. 20 ಲಕ್ಷಗಳಿಗೆ ಹೆಚ್ಚಿಸುವುದು. 80 ವರ್ಷ ಮೇಲ್ಪಟ್ಟ ವಯಸ್ಸಿನ ಎಲ್ಲ ಪಿಂಚಣಿದಾರರಿಗೆ/ ಕುಟುಂಬ ಪಿಂಚಣಿದಾರರಿಗೆ ಹೆಚ್ಚುವರಿ ಪಿಂಚಣಿ ಶಿಫಾರಸು ಮಾಡಿತು.

ಹೊಸ ಪಿಂಚಣಿ ಯೋಜನೆಗೆ ಒಳಪಡುವ ನೌಕರರು ಸೇವೆ ಸಲ್ಲಿಸುವ ಸಂದರ್ಭದಲ್ಲಿ ಮರಣ ಹೊಂದಿದಲ್ಲಿ, ಅವರ ಅವಲಂಬಿತರಿಗೆ ಷರತ್ತಿಗೊಳಪಟ್ಟು ಕುಟುಂಬ ನಿವೃತ್ತಿ ವೇತನವನ್ನು ಪಾವತಿಸುವುದು. ವೈದ್ಯಕೀಯ ಸೌಲಭ್ಯಗಳನ್ನು ಎಲ್ಲಾ ಪಿಂಚಣಿದಾರರಿಗೆ/ ಕುಟುಂಬ ಪಿಂಚಣಿದಾರರಿಗೆ ವಿಸ್ತರಿಸುವುದು. ಸಿಬ್ಬಂದಿ ಸಮೂಹ ವಿಮಾ ಯೋಜನೆಯ ವಂತಿಗೆಯನ್ನು ಹೆಚ್ಚಿಸಲಾಗಿದೆ. ಉಳಿತಾಯಗಳ ಮತ್ತು ವಿಮಾ ನಿಧಿಯ ವಂತಿಗೆಗಳ ಅನುಪಾತವನ್ನು 67:33 ರಿಂದ 75:25ಕ್ಕೆ ಮಾರ್ಪಡಿಸುವುದು ಎಂದು ಹೇಳಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+