7th Pay Commission: ಲೋಕೋಪಯೋಗಿ ಇಲಾಖೆ ಕಿರಿಯ, ಸಹಾಯಕ ಇಂಜಿನಿಯರ್ ವೇತನ ಎಷ್ಟು ಏರಿಕೆ?

ಬೆಂಗಳೂರು, ಸೆಪ್ಟೆಂಬರ್ 05: ಕರ್ನಾಟಕ ಸರ್ಕಾರ ಕೆ. ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ನೀಡಿರುವ ವರದಿಯನ್ನು ಅಂಗೀಕಾರ ಮಾಡಿದೆ. 7ನೇ ವೇತನ ಆಯೋಗದ ಶಿಫಾರಸುಗಳು ಆಗಸ್ಟ್ ತಿಂಗಳಿನಿಂದ ಜಾರಿಗೆ ಬಂದಿದೆ. ಇದರಿಂದ ಸರ್ಕಾರಿ ನೌಕರರ ವೇತನದಲ್ಲಿ ಏರಿಕೆಯಾಗಿದೆ. ಯಾವ ಇಲಾಖೆಯ ನೌಕರರಿಗೆ ಎಷ್ಟು ವೇತನ ಏರಿಕೆಯಾಗಿದೆ? ಎಂಬುದು ಸದ್ಯ ಚರ್ಚೆಯ ವಿಚಾರ. ಈ ಕುರಿತು ಆದೇಶದಲ್ಲಿ ವಿವರಣೆ ನೀಡಲಾಗಿದೆ.

ಆರ್ಥಿಕ ಇಲಾಖೆ ಸರ್ಕಾರದ ಕಾರ್ಯದರ್ಶಿ (ವೆಚ್ಚ) ಡಾ. ರೇಜು ಎಂ. ಟಿ. ವಿವಿಧ ಇಲಾಖೆಗಳ ನೌಕರರ ವೇತನ ಎಷ್ಟು ಹೆಚ್ಚಳವಾಗಲಿದೆ? ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಇದರಲ್ಲಿ ಲೋಕೋಪಯೋಗಿ ಇಲಾಖೆ ಕಿರಿಯ, ಸಹಾಯಕ ಇಂಜಿನಿಯರ್ ವೇತನ ಎಷ್ಟು ಹೆಚ್ಚಳ? ಎಂದು ಮಾಹಿತಿ ನೀಡಲಾಗಿದೆ.

7th Pay Commission Karnataka Salary Hike Of PWD Department Junior And Assistant Engineer

ಇಂಜಿನಿಯರ್ ವೇತನ ಏರಿಕೆ: ಲೋಕೋಪಯೋಗಿ ಇಲಾಖೆಯ ಕಿರಿಯ ಅಭಿಯಂತರರ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರನಿಗೆ 2018ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ದಿನಾಂಕ 23.02.2020 ರಿಂದ ಜಾರಿಗೆ ಬರುವಂತ ಹಿರಿಯ ವೇತನ ಶ್ರೇಣಿ ಮಂಜೂರು ಮಾಡಿ ವೇತನ ನಿಗದಿಪಡಿಸಲಾಗಿರುತ್ತದೆ. ಸದರಿ ನೌಕರನ ವೇತನದ ದೃಷ್ಟಾಂತ ಉದಾಹರಣೆ ಈ ಕೆಳಕಂಡಂತಿದೆ.

1ನೇ ಜುಲೈ, 2022ರಂದು ಧಾರಣೆ ಮಾಡಿದ ಹುದ್ದೆಯ ಪದನಾಮ ಕಿರಿಯ ಅಭಿಯಂತರರು (ಲೋಕೋಪಯೋಗಿ ಇಲಾಖೆ). ಪ್ರಸಕ್ತ ವೇತನ ಶ್ರೇಣಿ 33450-850-36000-950-39800-1100-46400-1250-53900-1450-62600 ರೂ.ಗಳು.

23ನೇ ಫೆಬ್ರವರಿ 2020ರಿಂದ ಅನ್ವಯವಾಗುವಂತ ಹಿರಿಯ ವೇತನ ಶ್ರೇಣಿ ಸೌಲಭ್ಯದಡಿ ಲಭ್ಯವಿರುವ ಪ್ರಸಕ್ತ ಆಯ್ಕೆಕಾಲಿಕ ವೇತನ ಶ್ರೇಣಿ. ರೂ.37900-950-39800-1100-46400-1250-53900-1450-62600-1650-70850.

1ನೇ ಜುಲೈ, 2022ರಂದು ಇದ್ದಂತೆ ಪ್ರಸಕ್ತ ಆಯ್ಕೆಕಾಲಿಕ ವೇತನ ಶ್ರೇಣಿಯಲ್ಲಿ ಪಡೆಯುತ್ತಿರುವ ಮೂಲ ವೇತನ. ರೂ. 62,600. ಪ್ರಸಕ್ತ ವೇತನ ಶ್ರೇಣಿಯಲ್ಲಿ ಮುಂದಿನ ವೇತನ ಬಡ್ತಿಯ ದಿನಾಂಕ 1ನೇ ಜುಲೈ 2023.

2024ನೇ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಸರ್ಕಾರಿ ನೌಕರನ ವೇತನವನ್ನು ಈ ಕೆಳಕಂಡಂತ ಪುನರ್ ನಿಗದಿಪಡಿಸಿದೆ. ಹುದ್ದೆಗೆ ಅನ್ವಯವಾಗುವ ಪರಿಷ್ಕೃತ ವೇತನ ಶ್ರೇಣಿ. ರೂ. 54175-1375-58300-1500-64300-1650-74200-1900-85600-2300-99400 ರೂ.ಗಳು.

ಪರಿಷ್ಕೃತ ವೇತನ ಶ್ರೇಣಿಯಲ್ಲಿ ಆಯ್ಕೆಕಾಲಿಕ ವೇತನ ಶ್ರೇಣಿ. ರೂ. 61300-1500-64300-1650-74200-1900-85600-2300-99400-2700-112900.

1ನೇ ಜುಲೈ 2022ರಿಂದ ಜಾರಿಗೆ ಬರುವಂತೆ ಪರಿಷ್ಕೃತ ಆಯ್ಕೆಕಾಲಿಕ ವೇತನ ಶ್ರೇಣಿಯಲ್ಲಿ ಕಾಲ್ಪನಿಕವಾಗಿ ನಿಗದಿಪಡಿಸಬೇಕಾದ ವೇತನ. ರೂ. 99,400.

1/7/2023ರಂದು ಲಭ್ಯವಿರುವ ವಾರ್ಷಿಕ ವೇತನ ಬಡ್ತಿಯನ್ನು ಬಿಡುಗಡೆ ಮಾಡಿ ಕಾಲ್ಪನಿಕವಾಗಿ ವೇತನ ನಿಗದಿ. ರೂ. 1,02,100.

1/7/2024ರಂದು ಲಭ್ಯವಿರುವ ವಾರ್ಷಿಕ ವೇತನ ಬಡ್ತಿಯನ್ನು ಬಿಡುಗಡೆ ಮಾಡಿ ಕಾಲ್ಪನಿಕವಾಗಿ ವೇತನ ನಿಗದಿ. ರೂ. 1,04,800 ಆರ್ಥಿಕ ಸೌಲಭ್ಯವು 1/8/2024ರಿಂದ ಪ್ರಾಪ್ತವಾಗುತ್ತದೆ. ಮುಂದಿನ ವಾರ್ಷಿಕ ವೇತನ ಬಡ್ತಿ. 1ನೇ ಜುಲೈ 2025.

ಸಹಾಯಕ ಅಭಿಯಂತರ: ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರರ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರನಿಗೆ 2018ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ದಿನಾಂಕ 15.05.2021 ರಿಂದ ಜಾರಿಗೆ ಬರುವಂತೆ ಆಯ್ಕೆಕಾಲಿಕ ವೇತನ ಶ್ರೇಣಿ ಮಂಜೂರು ಮಾಡಿ ವೇತನ ನಿಗದಿಪಡಿಸಲಾಗಿರುತ್ತದೆ. ಸದರಿ ನೌಕರನ ವೇತನದ ದೃಷ್ಟಾಂತ ಉದಾಹರಣೆ.

1ನೇ ಜುಲೈ, 2022ರಂದು ಧಾರಣೆ ಮಾಡಿದ ಹುದ್ದೆಯ ಪದನಾಮ. ಸಹಾಯಕ ಅಭಿಯಂತರರು (ಲೋಕೋಪಯೋಗಿ ಇಲಾಖೆ).
ಪ್ರಸಕ್ತ ವೇತನ ಶ್ರೇಣಿ 43100-1100-46400-1250-53900-1450-62600-1650-72500-1900-83900 ರೂ.ಗಳು.

15ನೇ ಮೇ 2021ರಿಂದ ಅನ್ವಯವಾಗುವಂತೆ ಕಾಲಬದ್ಧ ಮುಂಬಡ್ತಿ ಯೋಜನೆಯಡಿ ಲಭ್ಯವಿರುವ ಪ್ರಸಕ್ತ ಆಯ್ಕೆಕಾಲಿಕ ವೇತನ ಶ್ರೇಣಿ. ರೂ. 45300-1100-46400-1250-53900-1450-62600-1650-72500-1900-83900-2200-88300

1ನೇ ಜುಲೈ 2022ರಂದು ಇದ್ದಂತೆ ಆಯ್ಕೆಕಾಲಿಕ ವೇತನ ಶ್ರೇಣಿಯಲ್ಲಿ ಪಡೆಯುತ್ತಿರುವ ಮೂಲ ವೇತನ. ರೂ. 53,900. ಪ್ರಸಕ್ತ ವೇತನ ಶ್ರೇಣಿಯಲ್ಲಿ ಮುಂದಿನ ವೇತನ ಬಡ್ತಿಯ ದಿನಾಂಕ 1ನೇ ಜನವರಿ 2023.

2024ನೇ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಸರ್ಕಾರಿ ನೌಕರನ ವೇತನವನ್ನು ಈ ಕೆಳಕಂಡಂತೆ ಪುನರ್ ನಿಗದಿಪಡಿಸಿದೆ. ಹುದ್ದೆಗೆ ಅನ್ವಯವಾಗುವ ಪರಿಷ್ಕೃತ ವೇತನ ಶ್ರೇಣಿ. ರೂ. 69250-1650-74200-1900-85600-2300-99400-2700-115600-3100-134200.

ಪರಿಷ್ಕೃತ ವೇತನ ಶ್ರೇಣಿಯಲ್ಲಿ ಆಯ್ಕೆಕಾಲಿಕ ವೇತನ ಶ್ರೇಣಿ. ರೂ.72550-1650-74200-1900-85600-2300-99400-2700-115600-3100-134200-3500-141200 ಗಳು.

1ನೇ ಜುಲೈ 2022ರಿಂದ ಜಾರಿಗೆ ಬರುವಂತೆ ಪರಿಷ್ಕೃತ ಆಯ್ಕೆಕಾಲಿಕ ವೇತನ ಶ್ರೇಣಿಯಲ್ಲಿ ಕಾಲ್ಪನಿಕವಾಗಿ ನಿಗದಿಪಡಿಸಬೇಕಾದ ವೇತನ. ರೂ. 85,600.

01.07.2023 ರಂದು ಲಭ್ಯವಿರುವ ವಾರ್ಷಿಕ ವೇತನ ಬಡ್ತಿಯನ್ನು ಬಿಡುಗಡೆ ಮಾಡಿ ಕಾಲ್ಪನಿಕವಾಗಿ ವೇತನ ನಿಗದಿ. ರೂ. 87.900.

1/7/2024ರಂದು ಲಭ್ಯವಿರುವ ವಾರ್ಷಿಕ ವೇತನ ಬಡ್ತಿಯನ್ನು ಬಿಡುಗಡೆ ಮಾಡಿ ಕಾಲ್ಪನಿಕವಾಗಿ ವೇತನ ನಿಗದಿ. ರೂ. 90,200. ಆರ್ಥಿಕ ಸೌಲಭ್ಯವು 1/8/2024ರಿಂದ ಪ್ರಾಪ್ತವಾಗುತ್ತದೆ. ಮುಂದಿನ ವಾರ್ಷಿಕ ವೇತನ ಬಡ್ತಿ 1ನೇ ಜನವರಿ 2025.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+