• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಗರ ಪ್ರದೇಶದ SC-STಯವರಿಗೂ 75 ಯೂನಿಟ್ ಉಚಿತ ವಿದ್ಯುತ್: ಷರತ್ತು ಹೀಗಿವೆ..

|
Google Oneindia Kannada News

ಬೆಂಗಳೂರು, ಮೇ 18: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದವರಿಗೆ 75 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಸಂಬಂಧ ಇಂಧನ ಇಲಾಖೆ ಬುಧವಾರ ಪರಿಷ್ಕೃತ ಆದೇಶ ಹೊರಡಿಸಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್) ಕುಟುಂಬಗಳಿಗೆ ಗೃಹ ಬಳಕೆಗಾಗಿ 75 ಯೂನಿಟ್ ವರೆಗೆ ಉಚಿತ ವಿದ್ಯುತ್ ಘೋಷಣೆ ಮಾಡಲಾಗಿತ್ತು. ಈ ಮೊದಲು ಹೊರಡಿಸಿದ್ದ ಆದೇಶದಲ್ಲಿ ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿ ಮತ್ತು ಪಂಗಡದ ಬಿಪಿಎಲ್ ಕುಟುಂಬಳಿಗೆ ಮಾತ್ರ ಉಚಿತ ವಿದ್ಯುತ್ ಎಂದು ಹೇಳಲಾಗಿತ್ತು. ಆಗ ಹಳೆಯ ಆದೇಶವನ್ನು ಪರಿಷ್ಕರಿಸಿ ನಗರ ಪ್ರದೇಶದವರನ್ನೂ ಒಳಗೊಳ್ಳುವಂತೆ ಮರು ಆದೇಶ ಹೊರಡಿಸಲಾಗಿದೆ.

ಎಸ್‌ಸಿ, ಎಸ್‌ಟಿ ಕುಟುಂಬಗಳಿಗೆ 75 ಯೂನಿಟ್‌ ಉಚಿತ ವಿದ್ಯುತ್: ಮೇ ತಿಂಗಳಿಂದಲೇ ಜಾರಿ ಎಸ್‌ಸಿ, ಎಸ್‌ಟಿ ಕುಟುಂಬಗಳಿಗೆ 75 ಯೂನಿಟ್‌ ಉಚಿತ ವಿದ್ಯುತ್: ಮೇ ತಿಂಗಳಿಂದಲೇ ಜಾರಿ

ಮುಖ್ಯಮಂತ್ರಿ ಮಾಡಿದ್ದ ಆದೇಶ:

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಡಾ.ಬಾಬು ಜಗಜೀವನ್‌ರಾಮ್ ಜಯಂತಿ ಸಮಾರಂಭದಲ್ಲಿ ಮಾತನಾಡಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಗ್ರಾಮೀಣ ಪ್ರದೇಶದಲ್ಲಿ ಭಾಗ್ಯಜ್ಯೋತಿ/ ಕುಟೀರಜ್ಯೋತಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳಿಗೆ ಹಾಲಿ ಉಚಿತವಾಗಿ ನೀಡುತ್ತಿರುವ 40 ಯೂನಿಟ್‌ಗಳನ್ನು 75 ಯೂನಿಟ್‌ಗಳವರೆಗೆ ಹೆಚ್ಚಿಸಲಾಗುವುದು ಎಂದು ಹೇಳಿದ್ದರು.

ಈ ಯೋಜನೆಯ ವ್ಯಾಪ್ತಿಗೆ ಬರುವಂತಹ ಬಳಕೆದಾರರು ಆ ತಿಂಗಳ ಒಟ್ಟಾರೆ ವಿದ್ಯುತ್ ಬಿಲ್‌ನ ಮೊತ್ತವನ್ನು ಮೊದಲು ಸಂಪೂರ್ಣವಾಗಿ ಪಾವತಿಸಬೇಕು. ಹೀಗೆ ಬಿಲ್ ಪಾವತಿಸಿದ ನಂತರ ಬಿಲ್ಲಿನ ಒಟ್ಟಾರೆ ಬಳಕೆಯ ವಿದ್ಯುತ್ ಪ್ರಮಾಣದಲ್ಲಿ 75 ಯೂನಿಟ್‌ಗಳ ವಿದ್ಯುತ್ ಶುಲ್ಕದ ಮೊತ್ತವನ್ನು ಮರಳಿ ಗ್ರಾಹಕರಿಗೆ ನೇರ ಫಲಾನುಭವಿಗಳಿಗೆ ವರ್ಗಾವಣೆ (ಡಿಬಿಟಿ) ಯೋಜನೆಯಡಿ ಮರುಪಾವತಿಸಲಾಗುತ್ತದೆ.

Karnataka: 75 units of free electricity for urban SC-ST also: details here

ಉಚಿತ ವಿದ್ಯುತ್‌ಗೆ ಷರತ್ತುಗಳು ಹೀಗಿವೆ:

* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 75 ಯೂನಿಟ್‌ಗಳ ಉಚಿತ ವಿದ್ಯುತ್ ಮರುಪಾವತಿ ಮೊತ್ತವನ್ನು ಮರುಪಾವತಿ ಮಾಡುವ ವ್ಯವಸ್ಥೆ 2022ರ ಮೇ 1ರಿಂದ ಜಾರಿಗೆ ಬಂದಿದೆ.

* ಈ ವರ್ಗದ ವಿದ್ಯುತ್ ಸ್ಥಾವರಗಳಿಗೆ ಮಾಪಕವನ್ನು (ಮೀಟರ್) ಅಳವಡಿಸುವುದು ಹಾಗೂ ಮೀಟರ್ ರೀಡಿಂಗ್ ಮಾಡುವುದು ಕಡ್ಡಾಯವಾಗಿರುತ್ತದೆ.

* ಗ್ರಾಹಕರು ಈ ಸೌಲಭ್ಯ ಪಡೆಯಲು ಬಿಪಿಎಲ್ ಕಾರ್ಡ್, ಆಧಾರ್, ಜಾತಿ ಪ್ರಮಾಣಪತ್ರದ ಧೃಡೀಕರಣ ದಾಖಲೆಗಳನ್ನು ಒದಗಿಸುವುದು ಕಡ್ಡಾಯ

* ಈ ಪ್ರವರ್ಗದ ಗ್ರಾಹಕರು ಮಾಸಿಕ ವಿದ್ಯುತ್ ಬಿಲ್ಲನ್ನು ಸಂಪೂರ್ಣವಾಗಿ ಪಾವತಿಸಿದ ನಂತರ ಗ್ರಾಹಕರಿಗೆ ಡಿಬಿಟಿ ಯೋಜನೆ ಮೂಲಕ 75ಯೂನಿಟ್‌ನ ಹಣ ಮರಳಿ ಸಂದಾಯವಾಗುತ್ತದೆ.

* ಈ ಪ್ರವರ್ಗದ ವಿದ್ಯುತ್ ಗ್ರಾಹಕರು ವಿದ್ಯುತ್ ಸರಬರಾಜು ಕಂಪೆನಿಗಳಿಗೆ ಬ್ಯಾಂಕ್ ಖಾತೆಯ ಸಂಖ್ಯೆ, ಸಂಬಂಧಿತ ಇತರೆ ದಾಖಲೆಗಳನ್ನು ಒದಗಿಸಬೇಕು. ಅದೇ ಬ್ಯಾಂಕ್ ಖಾತೆಗೆ ವಿದ್ಯುತ್ ಸರಬರಾಜು ಕಂಪೆನಿಗಳಿಂದ ಸರ್ಕಾರದ ಸಹಾಯಧನವನ್ನು ಜಮೆ ಮಾಡಲಾಗುತ್ತದೆ.

* ಈ ಪ್ರವರ್ಗದ ಗ್ರಾಹಕರು 2022ರ ಏಪ್ರಿಲ್ 30ಕ್ಕೆ ಅಂತ್ಯ ಆಗುವಂತೆ ಬಾಕಿ ವಿದ್ಯುತ್ ಶುಲ್ಕದ ಮೊತ್ತವನ್ನು ಸಂಪೂರ್ಣವಾಗಿ ಪಾವತಿಸಿದ್ದಲ್ಲಿ ಮಾತ್ರ ಈ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.

English summary
The Department of Energy on Wednesday issued a revised order to provide 75 Unit free electricity for SC-ST. Now free electricity for urban SC-ST also.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X