ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ: ರೂಪಾಂತರಿ ಕೊರೊನಾ ಸೋಂಕಿತರ ಸಂಖ್ಯೆ 7ಕ್ಕೆ ಏರಿಕೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 30: ರಾಜ್ಯದಲ್ಲಿ ಬ್ರಿಟನ್ ರೂಪಾಂತರಿ ಕೊರೊನಾ ಸೋಂಕಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಇದುವರೆಗೂ ದೇಶದಲ್ಲಿ 20 ಮಂದಿಗೆ ರೂಪಾಂತರಿ ಕೊರೊನಾ ವೈರಸ್ ತಗುಲಿದೆ.

Recommended Video

ರಾಜ್ಯದಲ್ಲಿ ರೂಪಾಂತರಿ ಕೊರೊನಾ ಸೋಂಕಿತರ ಸಂಖ್ಯೆ 7ಕ್ಕೆ ಏರಿಕೆ | Oneindia Kannada

ಹೊಸ ಕೊರೊನಾ ಸೋಂಕಿಗೆ ತುತ್ತಾಗಿರುವವರು ವಾಸವಿದ್ದ ಅಪಾರ್ಟ್‌ಮೆಂಟ್ ನ್ನು 14 ದಿನ ಬಿಬಿಎಂಪಿ ಸೀಲ್‌ಡೌನ್ ಮಾಡಿದೆ.

ಭಾರತದಲ್ಲಿ 20,550 ಕೊರೊನಾ ಸೋಂಕಿತರು ಪತ್ತೆಭಾರತದಲ್ಲಿ 20,550 ಕೊರೊನಾ ಸೋಂಕಿತರು ಪತ್ತೆ

ಅಪಾರ್ಟ್‌ಮೆಂಟ್‌ನ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಬಿಬಿಎಂಪಿ ಮುಂದಾಗಿತ್ತು, ಆದರೆ ಅಪಾರ್ಟ್‌ಮೆಂಟ್ ನಿವಾಸಿಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ

7 UK Returnees Tested Positive For The New COVID Strain In Karnataka

.
ಮಂಗಳವಾರ ಉತ್ತರಹಳ್ಳಿ ವಸಂತಪುರದ ಇಬ್ಬರು ಒಂದೇ ಕುಟುಂಬದವರು, ಮತ್ತೊಬ್ಬರುಜೆಪಿ ನಗರದ ನಿವಾಸಿಗೆ ಸೋಂಕು ತಗುಲಿತ್ತು. ಡಿಸೆಂಬರ್ 18 ರಂದು ಲಂಡನ್‌ನಿಂದ ಕೋಣನಕುಂಟೆ ಉತ್ತರಹಳ್ಳಿ ಮುಖ್ಯರಸ್ತೆಯ ವಸಂತಪುರಕ್ಕೆ ವಾಪಸ್ ಆಗಿದ್ದ ಮಹಿಳೆ ಮತ್ತು ಮಗುವಿಗೆ ಬ್ರಿಟನ್ ಕೊರೊನಾ ಸೋಂಕು ತಗುಲಿದೆ.

ವಿಷಯ ತಿಳಿದ ಕೂಡಲೇ ಮೂವರು ಸೋಂಕಿತರು, ಅವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದವರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಸಂಜಯ್ ನಗರದ ನಿವಾಸಿ ಬ್ರಿಟನ್‌ನಿಂದ ವಾಪಸ್ ಆಗಿದ್ದರು. ಇದೀಗ ಇವರ ವರದಿ ಪಾಸಿಟಿವ್ ಬಂದಿದ್ದು, ಸೋಂಕಿತ ಹಾಗೂ ಅವರ ಸಂಪರ್ಕದಲ್ಲಿರುವ ಜನರನ್ನು ಕ್ವಾರಂಟೈನ್ ಮಾಡಲಾಗಿದೆ.

ಬ್ರಿಟನ್‌ನಿಂದ ಬಂದ 1290 ಮಂದಿ ಪ್ರಯಾಣಿಕರ ಪರೀಕ್ಷೆ ಮಾಡಲಾಗಿತ್ತು, ಅದರಲ್ಲಿ 17 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಯುಕೆ ಪ್ರಯಾಣಿಕರಲ್ಲಿ 29 ಮಂದಿ ಸ್ಯಾಂಪಲ್ಸ್ ನಲ್ಲಿ ರೂಪಾಂತರದ ಪರೀಕ್ಷೆಯನ್ನು ಕೇವಲ ನಾಲ್ಕು ಮಂದಿಗೆ ಮಾತ್ರ ಮಾಡಲಾಗಿದೆ.

ಉಳಿದ 11 ಮಂದಿಯ ಪರೀಕ್ಷೆ ನಡೆಯುತ್ತಿದೆ. 14 ಮಂದಿಯ ಪರೀಕ್ಷೆ ಪ್ರಕ್ರಿಯೆ ಇನ್ನೂ ಶುರುವಾಗಿಲ್ಲ. ವರದಿಗೆ ಎರಡು ದಿನ ಕಾಯಬೇಕು.

English summary
7 UK Returnees Tested Positive For The New COVID Strain In Karnataka, Health Department said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X