Daily Horoscope May 4: ಈ ರಾಶಿಯವರಿಗೆ ವೃತ್ತಿಜೀವನದಲ್ಲಿ ಹೊಸ ಆರಂಭ: ಆರ್ಥಿಕ ಸಮಸ್ಯೆಗೆ ಸಿಗಲಿದೆ ಪರಿಹಾರ
Daily Horoscope May 4: ಮೇ 4ರ ಸೋಮವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯವಾಗಿದೆ. ಮೇ 4ರ ದಿನ ಭವಿಷ್ಯ: 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ.
ಮೇಷ ರಾಶಿ
ವೃತ್ತಿ ಮತ್ತು ಉದ್ಯೋಗಗಳಲ್ಲಿ ಗೌರವ ಹೆಚ್ಚಾಗುತ್ತದೆ. ಸಹೋದರರ ನಡುವಿನ ಸಮಸ್ಯೆಗಳು ಬಗೆಹರಿಯುತ್ತವೆ. ನಿಮಗೆ ಸಿಗಬೇಕಾದ ಹಣ ನಿಮ್ಮ ಕೈ ಸೇರುವುದು. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವುದು.

ವೃಷಭ ರಾಶಿ
ವೃತ್ತಿಜೀವನದಲ್ಲಿ ಕ್ರಮೇಣ ಪ್ರಗತಿಯಾಗುವುದು. ವೆಚ್ಚಗಳು ಹೆಚ್ಚಾಗುವುದು. ಮಾನಸಿಕ ಒತ್ತಡ ಮುಂದುವರಿಯುವ ಸಾಧ್ಯತೆ ಇದೆ. ದೈಹಿಕ ಮತ್ತು ಮಾನಸಿಕ ವಿಶ್ರಾಂತಿ ಅತ್ಯಗತ್ಯ.
ಮಿಥುನ ರಾಶಿ
ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಆದರೆ ಈ ಸಮಯದಲ್ಲಿ ಹೂಡಿಕೆ ಮಾಡುವುದು ಸರಿಯಲ್ಲ. ಆರೋಗ್ಯವು ಸಾಮಾನ್ಯವಾಗಿರುತ್ತದೆ. ಸ್ನೇಹಿತರೊಂದಿಗೆ ಪ್ರವಾಸ ತೆರಳುವ ಸಾಧ್ಯತೆ ಇದೆ.
ಕರ್ಕಾಟಕ ರಾಶಿ
ದೊಡ್ಡ ಖರ್ಚುಗಳನ್ನು ತಪ್ಪಿಸುವುದು ಒಳ್ಳೆಯದು. ಮನಸ್ಸು ಗೊಂದಲದ ಗೂಡಾಗಬಹುದು. ಸಣ್ಣ ಸಣ್ಣ ಕೆಲಸ ಮಾಡುವುದು ಕೂಡಾ ಕಷ್ಟವಾಗಬಹುದು.
ಸಿಂಹ ರಾಶಿ
ನಿಮ್ಮ ಕೆಲಸಕ್ಕೆ ಮೇಲಾಧಿಕಾರಿಗಳಿಂದ ಮೆಚ್ಚುಗೆ ಸಿಗುವುದು. ಆರ್ಥಿಕ ಲಾಭವಾಗುವುದು. ವಿದ್ಯಾರ್ಥಿಗಳಿಗೆ ಈ ದಿನ ಅನುಕೂಲಕರವಾಗಿರುತ್ತದೆ. ಆರೋಗ್ಯವು ಉತ್ತಮವಾಗಿರುತ್ತದೆ.
ಕನ್ಯಾ ರಾಶಿ
ಖರ್ಚುಗಳನ್ನು ನಿಯಂತ್ರಿಸಲು ಪ್ರಯತ್ನಿಸುವಿರಿ. ಕೆಲಸದಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಕುಟುಂಬದೊಂದಿಗೆ ಸಮಯ ಕಳೆಯಲು ಅವಕಾಶಗಳು ಸಿಗುತ್ತವೆ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ತುಲಾ ರಾಶಿ
ವೃತ್ತಿಜೀವನದಲ್ಲಿ ಹೊಸ ಆರಂಭಕ್ಕೆ ಅವಕಾಶ ಸಿಗುವುದು. ಆದಾಯದ ಹೊಸ ಮೂಲ ಹುಟ್ಟಿಕೊಳ್ಳುವುದು.ಆರೋಗ್ಯವು ಉತ್ತಮವಾಗಿರುವುದು.
ವೃಶ್ಚಿಕ ರಾಶಿ
ವೃತ್ತಿಜೀವನದ ಬಗ್ಗೆ ಜಾಗರೂಕರಾಗಿರುವುದು ಅಗತ್ಯ. ಹಣ ಖರ್ಚು ಮಾಡುವಾಗ ಯೋಚನೆ ಮಾಡಿ ವೆಚ್ಚ ಮಾಡುವುದು ಒಳ್ಳೆಯದು. ಬುದ್ಧಿವಂತಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಧನು ರಾಶಿ
ವೃತ್ತಿಜೀವನದಲ್ಲಿ ಯಶಸ್ಸು ಸಿಗುವುದು. ಹೊಸ ಹೊಸ ಅವಕಾಶಗಳು ಅರಸಿಕೊಂಡು ಬರುವುದು. ಉನ್ನತ ಸ್ಥಾನಕ್ಕೆ ಏರುವ ಅವಕಾಶವಿದೆ. ಹೊಸ ಆದಾಯದ ಮೂಲಗಳು ಹೊರಹೊಮ್ಮಬಹುದು.
ಮಕರ ರಾಶಿ
ಜವಾಬ್ದಾರಿಗಳು ಹೆಚ್ಚಾಗುತ್ತವೆ.ಕಠಿಣ ಪರಿಶ್ರಮವು ಯಶಸ್ಸು ನೀಡುತ್ತದೆ. ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ ಮತ್ತು ಆದಾಯದಲ್ಲಿ ಹೆಚ್ಚಳವಾಗುವ ಲಕ್ಷಣಗಳಿವೆ.
ಕುಂಭ ರಾಶಿ
ಅದೃಷ್ಟವು ನಿಮಗೆ ಅನುಕೂಲಕರವಾಗಿರುತ್ತದೆ. ಹೊಸ ವೃತ್ತಿ ಅವಕಾಶಗಳು ಹೊರಹೊಮ್ಮುತ್ತವೆ. ನಿಮ್ಮ ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ.ಆರೋಗ್ಯವು ಉತ್ತಮವಾಗಿರುತ್ತದೆ.
ಮೀನ ರಾಶಿ
ವೃತ್ತಿಜೀವನದಲ್ಲಿ ಕೆಲವು ಅಡೆತಡೆಗಳು ಉಂಟಾಗಬಹುದು. ತಾಳ್ಮೆ ಬಹಳ ಮುಖ್ಯ. ವಿದ್ಯಾರ್ಥಿಗಳು ಹೆಚ್ಚು ಶ್ರಮಿಸಬೇಕಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications