Live

Election Result 2026 Live; ಕೇರಳದಲ್ಲಿ ಕಾಂಗ್ರೆಸ್‌ಗೆ ಅಧಿಕಾರ, ಬಂಗಾಳ-ತಮಿಳುನಾಡಿನಲ್ಲಿ ಅಚ್ಚರಿಯ ಫಲಿತಾಂಶ

Election Results 2026 Live: ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೆ ಎಲ್ಲರ ಗಮನ ಇಂದು ಸೋಮವಾರ (ಮೇ 4) ಪ್ರಕಟವಾಗುವ ಫಲಿತಾಂಶದ ಮೇಲೆ ಕೇಂದ್ರೀಕೃತವಾಗಿದೆ. ಬೆಳಗ್ಗೆ 8 ಗಂಟೆಯಿಂದಲೇ ಮತ ಎಣಿಕೆ ಆರಂಭವಾಗುತ್ತದೆ. ಇದಕ್ಕು ಮುನ್ನ ಸರ್ವ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಭದ್ರತಾ ಕೊಠಡಿ ತೆರೆಯಲಾಗುತ್ತದೆ. ಬಳಿಕ ಚುನಾವಣೆ ಆಯೋಗ ನಿಯೋಜಿತ ಸಿಬ್ಬಂದಿ ಮತ ಎಣಿಕೆ ಆರಂಭಿಸಿತ್ತಾರೆ.

ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಮತ್ತು ಪುದುಚೇರಿ ಸೇರಿ ಒಟ್ಟು ಐದು ರಾಜ್ಯಗಳ 824 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಸ್ಪರ್ಧಿಸಿದ್ದ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಹಣಬರಹ ಇಂದು ಗೊತ್ತಾಗಲಿದೆ. ಮತ ಎಣಿಕಾ ಕೇಂದ್ರಗಳಿಗೆ ಅಗತ್ಯ ಎಲ್ಲ ಭದ್ರತೆ ಒದಗಿಸಲಾಗಿದೆ. ಪಾರದರ್ಶಕವಾಗಿ ಮತ ಎಣಿಕೆಗೆ ECI ಸಜ್ಜಾಗಿದೆ.

Five States Election Results

ವಿಧಾನಸಭಾ ಚುನಾವಣೆಯ ಮತ ಎಣಿಕೆ ಸುತ್ತುಗಳು, ಯಾರು ಮುನ್ನಡೆ-ಹಿನ್ನಡೆ, ಸೀಟು ಗಳಿಕೆ ಮತ್ತು ಸೋಲು-ಗೆಲುವಿನ ಕ್ಷಣ ಕ್ಷಣದ ಮಾಹಿತಿಯನ್ನು ನೀವು 'ಒನ್ ಇಂಡಿಯಾ ಕನ್ನಡ' ನೇರ ಪ್ರಸಾರದಲ್ಲಿ ವೀಕ್ಷಿಸಬಹುದು.

8:20 PM, 4 May

ಗೆಲುವಿನ ನಂತರ ಪೋಷಕರ ಆಶೀರ್ವಾದ ಪಡೆದ ವಿಜಯ್! ಅಡ್ಯಾರ್ ನಿವಾಸದಲ್ಲಿ ತಂದೆ-ತಾಯಿಯ ಪಾದಕ್ಕೆ ನಮಸ್ಕರಿಸಿದ ದಳಪತಿ - ಫೋಟೋ ವೈರಲ್!

8:03 PM, 4 May

"ಇದು ಕೇವಲ ಗೆಲುವಲ್ಲ, ನ್ಯಾಯಕ್ಕಾಗಿ ಜನರ ಆರ್ತನಾದ!" - ಬಂಗಾಳದ ಆರ್‌ಜಿ ಕರ್ ಸಂತ್ರಸ್ತೆಯ ತಾಯಿ ರತ್ನ ದೇಬನಾಥ್ ಅವರಿಗೆ 28,000 ಮತಗಳ ಬೃಹತ್ ಅಂತರದ ಜಯ!

6:45 PM, 4 May

624 ಕೋಟಿಯ ಅಧಿಪತಿ 'ದಳಪತಿ': ಟಾಮ್ ಕ್ರೂಸ್ ಪ್ರೇರಿತ ಬಂಗಲೆ ಮತ್ತು ಲಕ್ಸುರಿ ಕಾರುಗಳ ಲೋಕ!

6:08 PM, 4 May

ಸಿನಿಮಾ ಮಾಡೆಲ್ ಅಲ್ಲ, ಇದು ಪೀಪಲ್ ಮಾಡೆಲ್!" - ಪ್ರಕಾಶ್ ರಾಜ್ ಅವರ 'ಸಿನಿಮಾ ಸಿಎಂ' ಟೀಕೆಯನ್ನು ಧೂಳೀಪಟ ಮಾಡಿದ ವಿಜಯ್ ಅವರ TVK ಸುನಾಮಿ!

4:57 PM, 4 May

ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವು: ಶೆಟ್ಟರ್ ಹರ್ಷ

ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಪುದುಚೇರಿಗಳಲ್ಲಿ ಬಿಜೆಪಿಗೆ ಮತದಾರರು ಭವ್ಯ ಸ್ವಾಗತ ಕೋರಿದ್ದಾರೆ. ಪಕ್ಷದ ಆಡಳಿತ ಮತ್ತು ಅಭಿವೃದ್ಧಿ ಕಾರ್ಯವೈಖರಿಯನ್ನು ಮೆಚ್ಚಿ ಜನತೆ ನೀಡಿರುವ ಈ ಬೆಂಬಲ ಅತ್ಯಂತ ಸಂತಸ ತಂದಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ದುರಾಡಳಿತಕ್ಕೆ ಜನ ತಕ್ಕ ಶಾಸ್ತಿ ಮಾಡಿದ್ದಾರೆ ಎಂದು ಸಂಸದ ಜಗದೀಶ್ ಶೆಟ್ಟರ್ ಹರ್ಷ ವ್ಯಕ್ತಪಡಿಸಿದ್ದಾರೆ.

Top Fight - ಗೋಬಿಚೆಟ್ಟಿಪಾಳ್ಯಂ

image

ಕೆ.ಎ. ಸೆಂಗೋಟಿಯನ್

Won

image

ವಿ.ಪಿ. ಪ್ರಭು

Lost

4:46 PM, 4 May

ಪೆರಂಬೂರಿನಲ್ಲಿ ನಟ ವಿಜಯ್ ಗೆಲುವು

ತಮಿಳುನಾಡು ಪೆರಂಬೂರು ವಿಧಾನಸಭಾ ಕ್ಷೇತ್ರದಲ್ಲಿ ಟಿವಿಕೆ ಮುಖ್ಯಸ್ಥ ನಟ ವಿಜಯ್ ಗೆಲುವು. ಸುಮಾರು 31 ಸಾವಿರ ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ. ಮೊದಲ ಚುನಾವಣೆಯಲ್ಲಿ ಅವರು ರಾಜ್ಯದ ಸಿಎಂ ಸ್ಥಾನ ಅಲಂಕರಿಸಲಿದ್ದಾರೆ. ಇವರು ತಿರುಚಿರಾಪಳ್ಳಿ ಪೂರ್ವ ಕ್ಷೇತ್ರದಲ್ಲೂ ಸ್ಪರ್ಧಿಸಿದ್ದಾರೆ.

Top Fight - ಮಜುಲಿ

image

ಭುಬನ್ ಗ್ರಾಮ್

Won

image

ಇಂದ್ರಾನಿಲ್ ಪೆಗು

Lost

Top Fight - ಜಾಗಿರೋಡ್

image

ಪಿಜುಷ್ ಹಜಾರಿಕಾ

Won

image

ಬಾಬುಲ್ ದಾಸ್

Lost

4:10 PM, 4 May

ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶ : ಈ ಕ್ಷಣದ ಟ್ರೆಂಡ್ ..

3:55 PM, 4 May

ಷಡ್ಯಂತ್ರದಿಂದ ಶೃಂಗೇರಿಯಲ್ಲಿ ಸೋಲು: ಡಿಕೆ ಶಿವಕುಮಾರ್ ಕಿಡಿ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು ಗೆಲುವು ಸಾಮಾನ್ಯ. ಆದರೆ ಶೃಂಗೇರಿಯಲ್ಲಿ ಷಡ್ಯಂತ್ರ ನಡೆದಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು. ಮತ ಎಣಿಕೆ ಬಾಕ್ಸ್‌ಗಳನ್ನು ತೆರೆಯಲಾಗಿದೆ. ನಮಗೆ ಅನುಮಾನ ಇದ್ದರೆ ನಾವು ಸುಪ್ರೀಂ ಕೋರ್ಟ್‌ಗೆ ಹೋಗುತ್ತಿದ್ದೆವು ಎಂದು ಕೆಪಿಸಿಸಿ ಕಚೇರಿಯಲ್ಲಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

3:53 PM, 4 May

ಕೇರಳದಲ್ಲಿ ಆಡಳಿತ ವಿರೋಧಿ ಅಲೆಗೆ ಸಿಎಂ ಕಂಗಾಲು

ಕೇರಳದಲ್ಲಿ ಆಡಳಿತ ವಿರೋಧಿ ಅಲೆಯಲ್ಲಿ ಕೊಚ್ಚಿಹೋದ ಸಿಎಂ ಪಿಣರಾಯಿ ವಿಜಯನ್. 64 ಸ್ಥಾನದಲ್ಲಿ ಮುನ್ನಡೆ ಇರುವ ಕಾಂಗ್ರೆಸ್ ವಿಜಯಪತಾಕೆ ಹಾರಿಸಲು ಸಜ್ಜಾಗಿದೆ. ಒಟ್ಟು 140 ಕ್ಷೇತ್ರಗಳಿದ್ದು, ಮ್ಯಾಜಿಕ್ ನಂಬರ್ ದಾಟಲು ಕಾಂಗ್ರೆಸ್‌ಗೆ‌ ಏಳು ಸ್ಥಾನ ಬೇಕಿದೆ. ಇತರ ಪಕ್ಷಗಳೊಂದಿಗೆ ಕಾಂಗ್ರೆಸ್ ಮೈತ್ರಿ ಮೂಲಕ ಸರ್ಕಾರ ರಚಿಸಲಿದೆ.

3:46 PM, 4 May

ತಮಿಳುನಾಡಿನ ಸಿಎಂ ಎಂಕೆ ಸ್ಟಾಲಿನ್‌ಗೆ ಸೋಲು

ತಮಿಳುನಾಡಿನ ಸಿಎಂ ಎಂಕೆ ಸ್ಟಾಲಿನ್‌ಗೆ ಸೋಲು

ತಮಿಳುನಾಡಿನ ಕೊಲತೂರಿನಲ್ಲಿ ಆಡಳಿತ ಪಕ್ಷದ ಡಿಎಂಕೆ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಸೋಲಾಗಿದೆ. ರಾಜ್ಯದಲ್ಲಿ ಟಿವಿಕೆ ಅಬ್ಬರ ಜೋರಾಗಿದೆ.

Top Fight - ಜೋರ್ಹತ್

image

ಹಿತೇಂದ್ರನಾಥ ಗೋಸ್ವಾಮಿ

Won

image

ಗೌರವ್ ಗೊಗೊಯ್

Lost

Top Fight - ತ್ರಿಶೂರ್

image

ರಾಜನ್ ಜೆ ಪಲ್ಲನ್

Won

image

ಪದ್ಮಜಾ ವೇಣುಗೋಪಾಲ್

Lost

Top Fight - ತಟ್ಟಂಚವಾಡಿ

image

ರಂಗಸಾಮಿ

Won

image

ವೈಥಿಲಿಂಗಂ

Lost

3:29 PM, 4 May

ಶೃಂಗೇರಿಯಲ್ಲಿ ಸೋಲು: ಸಿಎಂ ಭೇಟಿಯಾದ ರಾಜೇಗೌಡ

ಶೃಂಗೇರಿ ವಿಧಾನಸಭಾ ಚುನಾವಣೆ ಮರು ಮತದಾನದಲ್ಲಿ ಬಿಜೆಪಿಗೆ ಜಯ. ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಬೆನ್ನಲ್ಲೆ ಸಿಎಂ ಸಿದ್ದರಾಮಯ್ಯ ಭೇಟಿಯಾದ ಟಿ.ಟಿ ರಾಜೇಗೌಡ. ಅಂಚೆ ಮತ ಎಣಿಕೆಯಲ್ಲಿ ಗೊಂದಲ ಸೃಷ್ಟಿ ಹಿನ್ನೆಲೆಯಲ್ಲಿ ಮರು ಮತ ಎಣಿಕೆಯಾಗಿದೆ. ಇದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡ ಅವರಿಗೆ ಸೋಲಾದ ಬೆನ್ನಲ್ಲೆ, ಇಂದು ಬೆಂಗಳೂರಿನ ಸಿಎಂ ಅಧಿಕೃತ ನಿವಾಸದಲ್ಲಿ ಮುಖ್ಯಮಂತ್ರಿ ಭೇಟಿ ಮಾಡಿದ್ದಾರೆ. ಮುಂದಿನ ನಡೆ ಬಗ್ಗೆ ಚರ್ಚಿಸಿದ್ದಾರೆ.

3:21 PM, 4 May

ಕೇರಳದ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ವಿಜಯ

ಕೇರಳ ರಾಜ್ಯದಲ್ಲಿ ಚಾತನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಡಿ.ಗೋಪಕುಮಾರ್ ಗೆದ್ದಿದ್ದಾರೆ. ಇನ್ನೂ ನೇಮಂ ಕ್ಷೇತ್ರದಲ್ಲಿ ಬಿಜೆಪಿಯ ರಾಜೀವ್ ಚಂದ್ರಶೇಖರ್ ಜಯಭೇರಿ ಬಾರಿಸಿದ್ದಾರೆ. ರಾಜ್ಯದಲ್ಲಿ ಎರಡು ಕಡೆ ಗೆದ್ದು ಕೇಸರಿಪಡೆ ಇತಿಹಾಸ ಸೃಷ್ಟಿಸಿದೆ ಬಿಜೆಪಿ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ.

3:19 PM, 4 May

ತಮಿಳುನಾಡು ಚುನಾವಣಾ ಫಲಿತಾಂಶ : ಈ ಕ್ಷಣದ ಟ್ರೆಂಡ್ ..

Top Fight - ನೇಮಂ

image

ವಿ. ಶಿವನ್‌ಕುಟ್ಟಿ

Leading

image

ರಾಜೀವ್ ಚಂದ್ರಶೇಖರ್

Trailing

3:16 PM, 4 May

ಕೇರಳ: ಬಿಜೆಪಿ ರಾಜೀವ್ ಚಂದ್ರಶೇಖರ್‍‌ಗೆ ಗೆಲುವು

ಕೇರಳದ ನೇಮಂ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಗೆಲುವು. ಚುನಾವಣೆ ಆಯೋಗದಿಂದ ಅಧಿಕೃತ ಘೋಷಣೆ. ಕೇರಳ ಇತಿಹಾಸದಲ್ಲಿ ಬಿಜೆಪಿಯ ಮೊದಲ ವಿಜಯ ದಾಖಲು.

3:05 PM, 4 May

ಟಿವಿಕೆ- ಕಾಂಗ್ರೆಸ್ ಮೈತ್ರಿ? ಆಫರ್ ನೀಡಿದ ವಿಜಯ್ ತಂದೆ

ತಮಿಳುನಾಡಿನಲ್ಲಿ ಅಧಿಕಾರ ಹಿಡಿಯಲು ಟಿವಿಕೆ ಮುಖ್ಯಸ್ಥ ನಟ ವಿಜಯ್ ತಂದೆ ಎಸ್‌.ಎ.ಚಂದ್ರಶೇಖರ್ ಅವರು ಕಾಂಗ್ರೆಸ್ ಬೆಂಬಲ ಕೋರಿದ್ದಾರೆ. ಟಿವಿಕೆ ಜೊತೆಗೆ ಮೈತ್ರಿ ಮಾಡಿಕೊಳ್ಳುವಂತೆ ಕಾಂಗ್ರೆಸ್‌ಗೆ ಚಂದ್ರಶೇಖರ್ ಅವರು ಆಫರ್ ನೀಡಿದ್ದಾರೆ. ಜೊತೆಗೆ ರಾಜ್ಯದಲ್ಲಿ ಮಗನ ಪಕ್ಷ ಗೆದ್ದಿದ್ದಕ್ಕೆ ಸಂತೋಷವಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

3:04 PM, 4 May

ಕೇರಳದಲ್ಲಿ ಖಾತೆ ತೆರೆದ ಬಿಜೆಪಿ

ಕೇರಳ ರಾಜ್ಯದ ಚಾತನ್ನೂರು ಕ್ಷೇತ್ರದಲ್ಲಿ ಮೊದಲು ಗೆಲುವು ದಾಖಲಿಸಿದ ಬಿಜೆಪಿ. ಕೇರಳ ಇತಿಹಾಸದಲ್ಲೇ ಇದು ಎರಡನೇ ಗೆಲವುವಾಗಿದೆ. ಈ ಹಿಂದೆ ನೇಮಂ ಕ್ಷೇತ್ರದಲ್ಲಿ ಒ.ರಾಜಗೋಪಾಲ್ ಗೆಲುವಿನತ್ತ ಸಾಗಿದ್ದರು. ಇದೀಗ ಅಲ್ಲಿ ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಮುನ್ನಡೆ ಸಾಧಿಸಿದ್ದಾರೆ. ಈ ಮೂಲಕ ರಾಜ್ಯದ ಎರಡು ಕಡೆ ಬಿಜೆಪಿ ಖಾತೆ ತೆರೆದಿದೆ.

3:03 PM, 4 May

ತಮಿಳುನಾಡಿನಲ್ಲಿ ಸ್ಥಾನ ಹೆಚ್ಚಿಸಿಕೊಂಡ ಡಿಎಂಕೆ

ತಮಿಳುನಾಡಿನಲ್ಲಿ ಸೀಟು ಹೆಚ್ಚಿಸಿಕೊಂಡ ಡಿಎಂಕೆ. ಮತ ಎಣಿಕೆ ಆರಂಭದ ಕೆಲವು ಸುತ್ತುಗಳಲ್ಲಿ ಕಡಿಮೆ ಸೀಟಿನಿಂದ ಮೂರನೇ ಸ್ಥಾನಕ್ಕಿಳಿದಿದ್ದ ಡಿಎಂಕೆ ಇದೀಗ ಎರಡನೇ ಸ್ಥಾನಕ್ಕೇರಿದೆ. ಇಲ್ಲಿ ಟಿವಿಕೆ 109, ಡಿಎಂಕೆ 65 ಹಾಗೂ ಎಐಎಡಿಎಂಕೆ 60 ಸ್ಥಾನಗಳಲ್ಲಿ ಮುಂದಿದೆ. ಮತ ಎಣಿಕೆ ಪೂರ್ಣಗೊಳ್ಳುವ ಹೊತ್ತಿಗೆ ಇನ್ನಷ್ಟು ಬದಲಾವಣೆ ನಿರೀಕ್ಷಿಸಬಹುದು.

3:02 PM, 4 May

ಕಲ್ಪನೆ ಮಾಡಿಕೊಳ್ಳಿ... ಒಂದು ಕಡೆ 50-60 ವರ್ಷಗಳ ಇತಿಹಾಸವಿರುವ, ಕೋಟ್ಯಂತರ ಕಾರ್ಯಕರ್ತರ ಪಡೆಯನ್ನು ಹೊಂದಿರುವ ದೈತ್ಯ ರಾಜಕೀಯ ಪಕ್ಷಗಳು. ಇನ್ನೊಂದು ಕಡೆ ಕೇವಲ 2-3 ವರ್ಷಗಳ ಹಿಂದೆ ಹುಟ್ಟಿದ, ಯಾವುದೇ ದೊಡ್ಡ ಮೈತ್ರಿಗಳಿಲ್ಲದ 'ತಮಿಳಗ ವೆಟ್ರಿ ಕಳಗಂ' (TVK). ಆದರೆ ಇಂದು ಫಲಿತಾಂಶದ ಟ್ರೆಂಡ್ ಮಾತ್ರ ಉಲ್ಟಾ ಆಗಿದೆ!

2:48 PM, 4 May

ಇಂದಿನ ಫಲಿತಾಂಶ 'ಇಂಡಿ' ಕೋಟಕ್ಕೆ ಕಪಾಳಮೋಕ್ಷ: ಸಂಸದ ಡಾ.ಕೆ.ಸುಧಾಕರ್

ಪಂಚರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ದೊರೆತಿದೆ. ಇದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಅಭಿವೃದ್ಧಿ ಕಾರ್ಯಕ್ಕೆ ಜನರು ನೀಡಿರುವ ಮೆಚ್ಚುಗೆ ಹಾಗೂ ದೇಶವಿರೋಧಿ ಕಾಂಗ್ರೆಸ್ ಸೇರಿದಂತೆ ಇಂಡಿ ಕೂಟಕ್ಕೆ ಜನರು ಕೊಟ್ಟಿರುವ ಕಪಾಳಮೋಕ್ಷವಾಗಿದೆ ಎಂದು ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ಪ್ರತಿಕ್ರಿಯಿಸಿದ್ದಾರೆ.

2:47 PM, 4 May

ಬಂಗಾಳ ಬಿಜೆಪಿ ತೆಕ್ಕೆಗೆ: ಚುನಾವಣೆ ಆಯೋಗದ ಮೇಲೆ 'ದಿದಿ' ಆರೋಪ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಬಹುಮತ ಬರುತ್ತಿದ್ದಂತೆ ಮತ ಎಣಿಕೆ, ಚುನಾವಣೆ ಆಯೋಗದ ಮೇಲೆ ಸಿಎಂ ಮಮತಾ ಬ್ಯಾನರ್ಜಿ ಅವರು ಸಾಲು ಸಾಲು ಅರೋಪ ಮಾಡಿದ್ದಾರೆ. ಫಲಿತಾಂಶ ಕುರಿತು ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿದ ವಿಡಿಯೋ ಇಲ್ಲಿದೆ..

Top Fight - ಕ್ಯಾನಿಂಗ್ ಪುರ್ಬಾ

image

ಮುಹಮ್ಮದ್ ಬಹಾರುಲ್ ಇಸ್ಲಾಂ

Leading

image

ಅರಬುಲ್ ಇಸ್ಲಾಂ

Trailing

1:43 PM, 4 May

ನಟ ವಿಜಯ್ ನಿವಾಸಕ್ಕೆ ಸ್ನೇಹಿತೆ ತ್ರಿಶಾ ಆಗಮನ

ತಮಿಳುನಾಡಲ್ಲಿ ನಟ ವಿಜಯ್ ಗೆಲುವಿನ ಬೆನ್ನಲ್ಲೆ ತಿರುಪತಿಯಿಂದ ನೇರ ಚೆನ್ನೈನ ವಿಜಯ್ ನಿವಾಸಕ್ಕೆ ನಟಿ ತ್ರಿಶಾ ಆಗಮಿಸಿದ್ದಾರೆ. ವಿಜಯ್ ಕುಟುಂಬಸ್ಥರ ಸಂಭ್ರಮಾಚರಣೆಯಲ್ಲಿ ತ್ರಿಶಾ ಪಾಲ್ಗೊಳ್ಳಲಿದ್ದಾರೆ.

1:39 PM, 4 May

ತಮಿಳುನಾಡು ವಿಧಾನಸಭಾ ಚುನಾವಣೆ 2026ರ ಇಂದಿನ (ಮೇ 4) ಫಲಿತಾಂಶದ ಟ್ರೆಂಡ್‌ಗಳಲ್ಲಿ ದಳಪತಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ಅಸಾಧಾರಣ ಮುನ್ನಡೆ ಸಾಧಿಸಿ ಹೊಸ ಇತಿಹಾಸ ಬರೆಯುತ್ತಿದೆ. ವಿಜಯ್ ಅವರ ಈ 'ಮ್ಯಾಜಿಕ್' ಗೆಲುವಿಗೆ ಪ್ರಮುಖ 3 ಕಾರಣಗಳು ಇಲ್ಲಿವೆ..

READ MORE

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+