ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ 62 ಮಂದಿಯಿಂದ 426 ಮಂದಿಗೆ ಕೊರೊನಾ ಸೋಂಕು

|
Google Oneindia Kannada News

ಬೆಂಗಳೂರು, ಮೇ 6: ಕರ್ನಾಟಕದಲ್ಲಿ 62 ಮಂದಿಯಿಂದ 426 ಮಂದಿಗೆ ಕೊರೊನಾ ಸೋಂಕು ತಗುಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Recommended Video

ತಬ್ಲಿಘಿ ಜಮಾತ್ ನಲ್ಲಿ ಸಿಲುಕಿ ಚೇತರಿಸಿಕೊಂಡ ವ್ಯಕ್ತಿ ಎರಡನೇ ಬಾರಿ ಪ್ಲಾಸ್ಮಾ ದಾನ ಮಾಡಿದರು | Plasma Therapy

ಮಂಗಳವಾರ ರಾತ್ರಿ ರಾಜ್ಯ ಕೊವಿಡ್ ವಾರ್ ರೂಂ ಮಾಹಿತಿಯೊಂದನ್ನು ಪ್ರಕಟಿಸಿತ್ತು. ಅದರ ಪ್ರಕಾರ 62 ರೋಗಿಗಳ ಪೈಕಿ 29 ಮಂದಿಗೆ ತೀವ್ರ ಉಸಿರಾಟದ ಸಮಸ್ಯೆ ಅಥವಾ ಐಎಲ್‌ಎ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದು, ಕೊವಿಡ್ ರೋಗಿಗಳೆಂದು ಪತ್ತೆ ಹಚ್ಚಲಾಗಿತ್ತು.

ಬಾಗಲಕೋಟೆಯಲ್ಲಿ ಒಬ್ಬನಿಂದ 13 ಮಂದಿಗೆ ಕೊರೊನಾ ಪಾಸಿಟಿವ್!ಬಾಗಲಕೋಟೆಯಲ್ಲಿ ಒಬ್ಬನಿಂದ 13 ಮಂದಿಗೆ ಕೊರೊನಾ ಪಾಸಿಟಿವ್!

ಒಬ್ಬ ಕೊವಿಡ್ 19 ರೋಗಿಯಿಂದ 6.87 ಮಂದಿಗೆ ರೋಗ ಹರಡಿದೆ. ಮಂಗಳವಾರದ ಅಂಕಿ ಅಂಶಗಳ ಪ್ರಕಾರ ಕರ್ನಾಟಕದಲ್ಲಿ 1320 ಮಂದಿಗೆ ಸೋಂಕು ತಗುಲಿದ್ದು, ರೋಗಿಗಳ ಒಡನಾಡಿಗಳಿಗೆ ಸೋಂಕು ತಗುಲಿರುವ ಪ್ರಕರಣ 4,778ರಷ್ಟಾಗಿದೆ.

ಕೊರೊನಾ ಸೋಂಕು ಹರಡುವುದು ಹೇಗೆ?

ಕೊರೊನಾ ಸೋಂಕು ಹರಡುವುದು ಹೇಗೆ?

ರೋಗಿಯಿಂದ ಅವರ ಕುಟುಂಬಗಳಿಗೆ ಸೋಮಕು ಹರಡುವುದು ಒಂದು ರೀತಿಯಾಗಿದ್ದರೆ, ರೋಗಿಯು ಸೋಂಕು ವಾಹಕವಾಗಿ ಅವರೊಂದಿಗೆ ಸಂಪರ್ಕ ಸಾಧಿಸಿದರೆ ಇತರರಿಗೂ ಸೋಂಕು ಹರಡುತ್ತದೆ.

ವಿದೇಶದಿಂದ ಬಂದ 15 ಮಂದಿಯಿಂದ 34 ಜನರಿಗೆ ಸೋಂಕು

ವಿದೇಶದಿಂದ ಬಂದ 15 ಮಂದಿಯಿಂದ 34 ಜನರಿಗೆ ಸೋಂಕು

ವಿದೇಶದಿಂದ ಬಂದ 15 ಜನರಿಂದ 34 ಮಂದಿಗೆ ಕೊರೊನಾ ಸೋಂಕು ಹರಡಿದೆ. ವರದಿಯ ಪ್ರಕಾರ ವಿದೇಶದಿಂದ ಹೆಚ್ಚಿನವರಿಗೆ ಸೋಂಕು ಹರಡಿಲ್ಲ, ಮತ್ತು ಸೋಂಕು ಹರಡುವಿಕೆ ನಿಯಂತ್ರಣದಲ್ಲಿತ್ತು, ಆದರೆ ಅವರ ಕುಟುಂಬದವರಿಗ ಹರಡುವ ಸಾಧ್ಯತೆ ಹಚ್ಚಿದೆ.

ಒಬ್ಬರಿಂದ 36 ಮಂದಿಗೆ ಸೋಂಕು

ಒಬ್ಬರಿಂದ 36 ಮಂದಿಗೆ ಸೋಂಕು

20 ವರ್ಷದ ರೋಗಿಯೊಬ್ಬ ಬೆಳಗಾವಿ ಮೂಲದವನಾಗಿದ್ದು, ಮಾರ್ಚ್ 13ರಿಂದ 18ರವರೆಗೆ ನಡೆದ ತಬ್ಲಿಘಿ ಜಮಾತ್ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ವ್ಯಕ್ತಿಯಿಂದ 36 ಮಂದಿಗೆ ಸೋಂಕು ತಗುಲಿದೆ. ಸೋಂಕು ತಗುಲಿದವರಲ್ಲಿ 15 ಮಂದಿ ಕರ್ನಾಟಕದವರಾಗಿದ್ದಾರೆ.

ಹೆಚ್ಚಿನವರು ಜಮಾತ್ ಸಭೆಯಲ್ಲಿ ಭಾಗವಹಿಸಿದವರಾಗಿದ್ದಾರೆ

ಹೆಚ್ಚಿನವರು ಜಮಾತ್ ಸಭೆಯಲ್ಲಿ ಭಾಗವಹಿಸಿದವರಾಗಿದ್ದಾರೆ

18 ಮಂದಿ ದೇಶದ ವಿವಿಧೆಡೆ ಪ್ರಯಾಣ ಮಾಡಿ ಬಂದವರಾಗಿದ್ದಾರೆ. ಹೆಚ್ಚಿನವರು ತಬ್ಲಿಘಿ ಜಮಾತ್ ಸಭೆಯಲ್ಲಿ ಪಾಲ್ಗೊಂಡಿದ್ದರು. 18ರಲ್ಲಿ 15 ಮಂದಿ ದೆಹಲಿಗೆ ಹೋಗಿ ಬಂದವರಾಗಿದ್ದು ಇವರಿಂದ 100 ಮಂದಿಗೆ ಸೋಂಕು ಹರಡಿದೆ. ಇನ್ನುಳಿದ ಮೂವರು ದೇಶದ ವಿವಿಧ ಭಾಗಗಳಿಗೆ ಹೋಗಿ ಬಂದವರಾಗಿದ್ದಾರೆ.

English summary
A total of just 62 “root” COVID-19 positive patients have been responsible for infecting 426 others in the state. In simpler terms, this means that every single “root” COVID-19 positive patient infected 6.87 others.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X