ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಕಾಶಿಯಾತ್ರಿಕರಿಗೆ 5 ಸಾವಿರ ರೂ. ಸಹಾಯಧನ

|
Google Oneindia Kannada News

ಬೆಂಗಳೂರು, ಏಪ್ರಿಲ್ 20; ಕರ್ನಾಟಕದಿಂದ ಕಾಶಿಯಾತ್ರೆ ತೆರಳುವ ಭಕ್ತರಿಗೆ 5 ಸಾವಿರ ರೂ. ಸಹಾಯಧನ ನೀಡುವುದಾಗಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಬಜೆಟ್‌ನಲ್ಲಿ ಸಹಾಯಧನ ನೀಡುವುದಾಗಿ ಘೋಷಣೆ ಮಾಡಲಾಗಿತ್ತು.

ಕಂದಾಯ ಇಲಾಖೆ (ಧಾರ್ಮಿಕ ದತ್ತಿ ಇಲಾಖೆ) ಸರ್ಕಾರದ ಅಧೀನ ಕಾರ್ಯದರ್ಶಿ ಎಂ. ಎಲ್. ವರಲಕ್ಷ್ಮೀ ಈ ಕುರಿತು ಆದೇಶ ಹೊರಡಿಸಿದ್ದಾರೆ. 30 ಸಾವಿರ ಯಾತ್ರಾರ್ಥಿಗಳಿಗೆ ತಲಾ 5 ಸಾವಿರ ರೂ. ಸಹಾಯಧನ ಸಿಗಲಿದೆ.

ಬಜೆಟ್ ಘೋಷಣೆ; ಹೇಗಿರಲಿದೆ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್?ಬಜೆಟ್ ಘೋಷಣೆ; ಹೇಗಿರಲಿದೆ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್?

ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2022-23ನೇ ಸಾಲಿನ ಬಜೆಟ್‌ನಲ್ಲಿ ಕಾಶಿಯಾತ್ರಾರ್ಥಿಗಳಿಗೆ ಸಹಾಯಧನ ನೀಡುವುದಾಗಿ ಘೋಷಣೆ ಮಾಡಿದ್ದರು. ಈಗ ಈ ಕುರಿತು ಆದೇಶ ಹೊರಡಿಸಲಾಗಿದೆ.

ಸರಕಾರದ ಅಭಿವೃದ್ಧಿಪರ ಬದ್ಧತೆಗೆ ಬಜೆಟ್ ಸಾಕ್ಷಿ: ಸಚಿವ ಡಾ.ಸಿಎನ್.ಅಶ್ವಥ್ ನಾರಾಯಣ್ ಸರಕಾರದ ಅಭಿವೃದ್ಧಿಪರ ಬದ್ಧತೆಗೆ ಬಜೆಟ್ ಸಾಕ್ಷಿ: ಸಚಿವ ಡಾ.ಸಿಎನ್.ಅಶ್ವಥ್ ನಾರಾಯಣ್

5 Thousand Subsidy For Pilgrims Who Will Take Kashi Yatra From Karnataka

ರಾಜ್ಯದಿಂದ ಕಾಶಿಯಾತ್ರೆಯನ್ನು ಕೈಗೊಳ್ಳುವ 30,000 ಯಾತ್ರಾರ್ಥಿಗಳಿಗೆ ಸರ್ಕಾರದಿಂದ ತಲಾ 5 ಸಾವಿರ ರೂ.ಗಳ ಸಹಾಯಧನ ನೀಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಬಜೆಟ್ ಘೋಷಣೆಗಳ ಅನುಷ್ಠಾನಕ್ಕೆ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ: ಸಿಎಂ ಬಜೆಟ್ ಘೋಷಣೆಗಳ ಅನುಷ್ಠಾನಕ್ಕೆ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ: ಸಿಎಂ

2022-23ನೇ ಸಾಲಿನ ಆಯವ್ಯಯ ಭಾಷಣದಲ್ಲಿನ ಕಂಡಿಕೆ-366ರಲ್ಲಿನ ಘೋಷಣೆಯಂತೆ ರಾಜ್ಯದಿಂದ ಕಾಶಿಯಾತ್ರೆಯನ್ನು ಕೈಗೊಳ್ಳುವ 30 ಸಾವಿರ ಯಾತ್ರಾರ್ಥಿಗಳಿಗೆ ಸರ್ಕಾರದಿಂದ ತಲಾ 5 ಸಾವಿರ ರೂ.ಗಳ ಸಹಾಯಧನವನ್ನು ನೀಡಲು ತಾತ್ವಿಕ ಅನುಮೋದನೆ ನೀಡಿ ಆದೇಶಿಸಲಾಗಿದೆ ಎಂದು ಸರ್ಕಾರ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

ಕೆಲವು ದಿನಗಳ ಹಿಂದೆ ಮಾತನಾಡಿದ್ದ ಮುಜರಾಯಿ ಇಲಾಖೆ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಸರ್ಕಾರದ ಘೋಷಣೆಯಿಂದ ದೇವಾಲಯ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ಸಿಕ್ಕಿದಂತೆ ಆಗುತ್ತದೆ. ಜೀವಮಾನದಲ್ಲಿ ಒಮ್ಮೆಯಾದರೂ ಕಾಶಿಯಾತ್ರೆ ಮಾಡಬೇಕು ಎಂಬುದು ಬಹುತೇಕ ಹಿಂದೂಗಳ ಕನಸು ಎಂದು ಹೇಳಿದ್ದರು.

ಅನೇಕರಿಗೆ ನಾನಾ ಕಾರಣಗಳಿಂದ ಕಾಶಿಯಾತ್ರೆಗೆ ತೆರಳಲು ಸಾಧ್ಯವಾಗುವುದಿಲ್ಲ. ಸರ್ಕಾರದ ಸಹಾಯಧನದೊಂದಿಗೆ ಆಸಕ್ತರು ಕಾಶಿಯಾತ್ರೆಗೆ ಹೋಗಿ ಬರಲು ಸಾಧ್ಯವಾಗುತ್ತದೆ ಎಂದು ಸಚಿವರು ತಿಳಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಕಾಶಿಯ ವಿಶ್ವನಾಥ ಮಂದಿರವನ್ನು ವಿಶಿಷ್ಟ ರೀತಿಯಲ್ಲಿ ಜೀರ್ಣೋದ್ಧಾರ ಮಾಡುವ ಮೂಲಕ ಐತಿಹಾಸಿಕ ಕಾಶಿಗೆ ದಿವ್ಯಕಾಶಿ-ಭವ್ಯಕಾಶಿ ಎಂದು ಹೆಸರು ಬರುವಂತೆ ಮಾಡಿದ್ದಾರೆ. ರಾಜ್ಯದ ಸಾವಿರಾರು ಯಾತ್ರಾರ್ಥಿಗಳು ಕಾಶಿಗೆ ಭೇಟಿ ನೀಡಿ ವಿಶ್ವನಾಥನ ದರ್ಶನ ಪಡೆಯುತ್ತಾರೆ ಎಂದು ಸಚಿವರು ವಿವರಿಸಿದ್ದರು.

Recommended Video

ಹಿಂದೂ ಆಕ್ಟಿವಿಸ್ಟ್ ಸಾದ್ವಿ ರಿತುಂಬರ್ ಏನ್ ಹೇಳಿದಾರೆ ಗೊತ್ತಾ!! | Oneindia Kannada

English summary
Karnataka government announced subsidy of Rs 5,000 per person who will take Kashi yatra from Karnataka. Scheme announced in 2022-23 budget.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X