ರಾಜ್ಯದಲ್ಲಿ ಹೊಸದಾಗಿ 5,024 ಸಾವಿರ ಓಎಂಸಿ ಪೆಟ್ರೋಲ್ ಬಂಕ್
ಬೆಂಗಳೂರು, ನವೆಂಬರ್ 26: ಇಂಧನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಈ ಹಿನ್ನೆಲೆಯಲ್ಲಿ 5 ಸಾವಿರ ಓಎಂಸಿ ಪೆಟ್ರೋಲ್ ಬಂಕ್‌ಗಳನ್ನು ನಿರ್ಧರಿಸಿರುವುದಾಗಿ ಒಎಂಸಿಎ ಮುಖ್ಯ ಅಧಿಕಾರಿ ಡಿ.ಎಲ್. ಪ್ರಮೋದ್ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಹೊಸದಾಗಿ 5024 ಪೆಟ್ರೋಲ್ ಬಂಕ್ ಆರಂಭಿಸಲು ನಿರ್ಧರಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಗ್ರಾಮೀಣ ಭಾಗದಲ್ಲಿ 1109 ಮತ್ತು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ 2915 ಪೆಟ್ರೋಲ್ ಬಂಕ್ ತೆರೆಯಲಾಗುತ್ತಿದೆ. ಎಸ್ಸಿ ಮತ್ತು ಎಸ್ಟಿ ವರ್ಗದವರಿಗ ಶೇ. 22, ಒಬಿಸಿ ವರ್ಗದವರಿಗೆ ಶೇ.27 ಮತ್ತು ಸಾಮಾನ್ಯ ವರ್ಗದವರಿಗೆ ಶೇ.49ಮೀಸಲಾತಿ ನೀಡಲಾಗಿದೆ.
ದೇಶದಲ್ಲಿ ಈಗ ಇರುವ ಹಳೇ ಬಂಕ್‌ಗಳು ಡಿಸೆಂಬರ್ 31ರೊಳಗೆ ಆಟೋಮೇಷನ್ ತಂತ್ರಜ್ಞಾನ ಅಳವಡಿಸಿಕೊಳ್ಳಲಿವೆ. ಭವಿಷ್ಯದಲ್ಲಿ ಇಂಧನ ಕೊರತೆ ನೀಗಿಸಲು ಕೇಂದ್ರ ಸರ್ಕಾರ ಸುಗಮ ವಾಣಿಜ್ಯ ನಿರ್ವಹಣೆಗೆ ಒತ್ತು ನೀಡಿದೆ.

ಡೀಲರ್‌ಗಳ ಆಯ್ಕೆ ಪ್ರಕ್ರಿಯೆ ಸರಳೀಕರಿಸಲಾಗಿದೆ. ಅರ್ಹತೆ ಸಾಬೀತಾಗಿ ಈ ಹಿಂದೆ ಅರ್ಜಿದಾರರು ಸಲ್ಲಿಸುತ್ತಿದ್ದ ಪುಟಗಟ್ಟಲೆ ದಸ್ತಾವೇಜುಗಳನ್ನು ಕೈಬಿಡಲಾಗಿದೆ.












Click it and Unblock the Notifications