IPS Officers Transfer: ರಾಜ್ಯದಲ್ಲಿ 48 ಐಪಿಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ: ಇಲ್ಲಿದೆ ಸಂಪೂರ್ಣ ಮಾಹಿತಿ
IPS Officers Transfer: ರಾಜ್ಯ ಸರ್ಕಾರ ಹೊಸ ವರ್ಷದ ಹಿಂದಿನ ದಿನವೇ ಆಡಳಿತ ಯಂತ್ರಕ್ಕೆ ಮೇಜರಿ ಸರ್ಜರಿ ಮಾಡಿದೆ. ರಾಜ್ಯದಲ್ಲಿ 48 ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಿ ಹಾಗೂ ವಿವಿಧ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಬೆಂಗಳೂರು ನಗರದ ಡಿಸಿಪಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಹಾಗಾದ್ರೆ, ಯಾರಿಗೆ ಯಾವ ಹುದ್ದೆ ಎನ್ನುವ ಸಂಪೂರ್ಣ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಮಹತ್ವದ ಬದಲಾವಣೆಗಳು: ಬೆಂಗಳೂರು ನಗರದಲ್ಲಿ ಪ್ರಮುಖ ಪಾತ್ರ ವಹಿಸುವ ಡಿಸಿಪಿ ಹುದ್ದೆಗಳಲ್ಲಿ ದೊಡ್ಡ ಮಟ್ಟದ ಬದಲಾವಣೆ ಮಾಡಲಾಗಿದೆ. ವೈಟ್‌ಫೀಲ್ಡ್ ವಿಭಾಗಕ್ಕೆ ಸೈದುಲು ಅದಾವತ್, ಪಶ್ಚಿಮ ವಿಭಾಗಕ್ಕೆ ಯತೀಶ್ ಎನ್., ಈಶಾನ್ಯ ವಿಭಾಗಕ್ಕೆ ಮಿಥುನ್ ಕುಮಾರ್, ಪೂರ್ವ ವಿಭಾಗಕ್ಕೆ ವಿಕ್ರಮ್ ಆಮ್ಟೆ ಹಾಗೂ ಆಗ್ನೇಯ ವಿಭಾಗಕ್ಕೆ ಮಹಮ್ಮದ್ ಸುಜೀತಾ ಅವರನ್ನು ನೇಮಕ ಮಾಡಲಾಗಿದೆ.

ಮತ್ತೊಂದೆಡೆ, ಬೆಳಗಾವಿ ಎಸ್‌ಪಿ ಆಗಿದ್ದ ಭೀಮಾಶಂಕರ್ ಗುಳೇದ್ ಅವರಿಗೆ ಡಿಐಜಿಪಿ ಆಗಿ ಮುಂಬಡ್ತಿ ನೀಡಿ ಸಿಐಡಿ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಬೆಳಗಾವಿಯ ನೂತನ ಎಸ್‌ಪಿಯಾಗಿ ಕೊಡಗಿನಲ್ಲಿದ್ದ ಕೆ. ರಾಮರಾಜನ್ ಅವರನ್ನು ನೇಮಕ ಮಾಡಲಾಗಿದೆ. ಮೈಸೂರು ಎಸ್‌ಪಿ ಆಗಿದ್ದ ವಿಷ್ಣುವರ್ಧನ ಅವರಿಗೆ ನಿರ್ದೇಶಕರು ಕೆಪಿಎ ಹುದ್ದೆಗೆ ನೀಡಲಾಗಿದೆ. ಮಂಡ್ಯ ಎಸ್‌ಪಿ ಆಗಿದ್ದ ಮಲ್ಲಿಕಾರ್ಜುನ ಬಾಲದಂಡಿ ಅವರನ್ನು ಮೈಸೂರು ಎಸ್‌ಪಿಯಾಗಿ ವರ್ಗಾವಣೆ ಮಾಡಲಾಗಿದೆ.
ದಕ್ಷಿಣ ವಲಯದ ಡಿಐಜಿಪಿ ಆಗಿದ್ದ ಡಾ.ಎಂ.ಬಿ. ಬೋರಲಿಂಗಯ್ಯ ಅವರಿಗೆ ಐಜಿಪಿ ಆಗಿ ಮುಂಬಡ್ತಿ ನೀಡಲಾಗಿದ್ದು, ಅದೇ ಹುದ್ದೆಯಲ್ಲಿ ಮುಂದುವರೆಸಲಾಗಿದೆ. ಹಾಗೆಯೇ ಬೆಂಗಳೂರು ನಗರ ಅಪರಾಧ ವಿಭಾಗದ ಜಂಟಿ ಆಯುಕ್ತರಾಗಿದ್ದ ಅಜಯ್ ಹಿಲೋರಿ ಅವರಿಗೂ ಐಜಿಪಿ ಆಗಿ ಪದೋನ್ನತಿ ನೀಡಲಾಗಿದೆ.
ಯಾರು ಯಾವ ಹುದ್ದೆಗೆ ವರ್ಗಾವಣೆ?
* ಭೀಮಾಶಂಕರ್ ಗುಳೇದ್: ಎಸ್‌ಪಿ, ಬೆಳಗಾವಿ ಜಿಲ್ಲೆ - ಡಿಐಜಿಪಿ, ಸಿಐಡಿ
* ಇಲಾಕ್ಕಿಯ ಕರುಣಾಕರನ್ : ಎನ್‌ಎಚ್‌ಆರ್‌ಸಿ - ಡಿಐಜಿಪಿ, ವೈರ್‌ಲೆಸ್
* ವೇದಮೂರ್ತಿ: ಎಸ್‌ಪಿ, ರಾಜ್ಯ ಗುಪ್ತಚರ - ಡಿಐಜಿಪಿ, ರಾಜ್ಯ ಗುಪ್ತಚರ
* ಕೆ.ಎಂ. ಶಾಂತರಾಜು: ಎಸ್‌ಪಿ, ಐಎಸ್‌ಡಿ - ಡಿಐಜಿಪಿ, ಐಎಸ್‌ಡಿ
* ಹನುಮಂತರಾಯ: ಎಸ್‌ಪಿ, ಕೆಎಲ್‌ಎ - ಡಿಐಜಿಪಿ, ಎಸ್‌ಎಚ್‌ಆರ್‌ಸಿ
* ಡಿ. ದೇವರಾಜು: ಡಿಸಿಪಿ, ಪೂರ್ವ ವಿಭಾಗ, ಬೆಂಗಳೂರು - ಡಿಐಜಿಪಿ, ತರಬೇತಿ
* ಡಾ. ಸಿರಿ ಗೌರಿ: ಎಸ್‌ಪಿ, ಎಸ್‌ಸಿಆರ್‌ಬಿ - ಡಿಐಜಿಪಿ, ಕರ್ನಾಟಕ ಲೋಕಾಯುಕ್ತ
* ಡಾ. ಕೆ. ಧರಣಿ ದೇವಿ: ಎಸ್‌ಪಿ, ಡಿಸಿಆರ್‌ಇ - ಡಿಐಜಿಪಿ, ಗುಪ್ತಚರ
* ಎಸ್. ಸವಿತಾ: ಎಸ್‌ಪಿ, ಸಿಐಡಿ - ಡಿಐಜಿಪಿ, ಗೃಹ ರಕ್ಷಕ ದಳ
* ಸಿ.ಕೆ. ಬಾಬಾ: ಎಸ್‌ಪಿ, ಬೆಂಗಳೂರು ಗ್ರಾಮಾಂತರ - ಡಿಐಜಿಪಿ, ಕೆಎಸ್‌ಆರ್‌ಪಿ
* ಅಬ್ದುಲ್ ಅಹದ್: ನಿರ್ದೇಶಕರು, ಬಿಎಂಟಿಸಿ - ನಿರ್ದೇಶಕರು, ಬಿಎಂಟಿಸಿ
* ಎಸ್. ಗಿರೀಶ್: ಡಿಸಿಪಿ, ಪಶ್ಚಿಮ ವಿಭಾಗ, ಬೆಂಗಳೂರು - ಡಿಐಜಿಪಿ, ಎಎನ್‌ಟಿಎಫ್
* ಎಂ. ಪುಟ್ಟಮಾದಯ್ಯ: ಎಸ್‌ಪಿ, ರಾಯಚೂರು - ಡಿಐಜಿಪಿ, ಪ್ರಾಂಶುಪಾಲರು, ಪಿಟಿಸಿ ಕಲಬುರಗಿ
* ಟಿ. ಶ್ರೀಧರ: ಎಸ್‌ಪಿ, ಡಿಸಿಆರ್‌ಇ - ಡಿಐಜಿಪಿ, ಕೇಂದ್ರ ಕಚೇರಿ
* ಎ.ಎನ್. ಪ್ರಕಾಶ್ ಗೌಡ: ಎಸ್‌ಪಿ, ಐಎಸ್‌ಡಿ - ಡಿಐಜಿಪಿ, ಎಸ್‌ಎಎಫ್
* ಜಿನೇಂದ್ರ ಖಾನಗಾವಿ: ಎಸ್‌ಪಿ, ಐಎಸ್‌ಡಿ - ಡಿಐಜಿಪಿ, ಕಾರಾಗೃಹ
* ಜೆ.ಕೆ. ರಶ್ಮಿ: ಡೆಪ್ಯುಟಿ ಕಮಾಂಡೆಂಟ್, ಗೃಹ ರಕ್ಷಕ - ಡಿಐಜಿಪಿ, ರೈಲ್ವೆ
* ಟಿ.ಪಿ. ಶಿವಕುಮಾರ್: ಎಸ್‌ಪಿ, ಕೆಪಿಸಿಎಲ್ - ಡಿಐಜಿಪಿ, ಎಸ್‌ಸಿಆರ್‌ಬಿ
* ವಿಷ್ಣುವರ್ಧನ: ಎಸ್‌ಪಿ, ಮೈಸೂರು ಜಿಲ್ಲೆ - ನಿರ್ದೇಶಕರು, ಕೆಪಿಎ
* ಡಾ.ಸಂಜೀವ್ ಎಂ ಪಾಟೀಲ್: ಎಐಜಿಪಿ, ಜನರಲ್ - ಡಿಐಜಿಪಿ, ಜನರಲ್
* ಕೆ. ಪರಶುರಾಮ: ಡಿಸಿಪಿ, ವೈಟ್‌ಫೀಲ್ಡ್ - ಡಿಐಜಿಪಿ, ಸಿಟಿಆರ್‌ಎಸ್
* ಎಚ್.ಡಿ. ಆನಂದ್ ಕುಮಾರ್: ಎಸ್‌ಪಿ, ಡಿಸಿಆರ್‌ಇ - ಡಿಐಜಿಪಿ, ಸೈಬರ್ ಕಮಾಂಡ್
* ಕಲಾ ಕೃಷ್ಣಸ್ವಾಮಿ: ಎಐಜಿಪಿ, ಅಪರಾಧ - ಡಿಐಜಿಪಿ, ಅಪರಾಧ
ಐಜಿಪಿ ಆಗಿ ಮುಂಬಡ್ತಿ
* ಡಾ.ಎಂ.ಬಿ. ಬೋರಲಿಂಗಯ್ಯ: ಡಿಐಜಿಪಿ, ದಕ್ಷಿಣ ವಲಯ, ಮೈಸೂರು - ಐಜಿಪಿ, ದಕ್ಷಿಣ ವಲಯ, ಮೈಸೂರು
* ಅಜಯ್ ಹಿಲೋರಿ: ಜಂಟಿ ಆಯುಕ್ತರು, ಅಪರಾಧ, ಬೆಂಗಳೂರು - ಹೆಚ್ಚುವರಿ ಆಯುಕ್ತರು, ಅಪರಾಧ, ಬೆಂಗಳೂರು
ಎಸ್‌ಪಿ, ಡಿಸಿಪಿಗಳ ವರ್ಗಾವಣೆ
* ಚಂದ್ರಕಾಂತ್ ಎಂ.ವಿ: ಎಸ್‌ಪಿ, ಬೆಂಗಳೂರು ಗ್ರಾಮಾಂತರ
* ಸೈದುಲು ಅದಾವತ್: ಎಸ್‌ಪಿ, ಸಿಐಡಿ - ಡಿಸಿಪಿ, ವೈಟ್‌ಫೀಲ್ಡ್, ಬೆಂಗಳೂರು
* ಯತೀಶ್ ಎನ್: ಎಸ್‌ಪಿ, ರೈಲ್ವೆ - ಡಿಸಿಪಿ, ಪಶ್ಚಿಮ ವಿಭಾಗ, ಬೆಂಗಳೂರು
* ಕೆ. ರಾಮರಾಜನ್: ಎಸ್‌ಪಿ, ಕೊಡಗು - ಎಸ್‌ಪಿ, ಬೆಳಗಾವಿ ಜಿಲ್ಲೆ
* ಬಿ. ನಿಖಿಲ್: ಎಸ್‌ಪಿ, ಕೋಲಾರ - ಎಸ್‌ಪಿ, ಶಿವಮೊಗ್ಗ
* ಅರುಣಾಂಶು ಗಿರಿ: ಎಸ್‌ಪಿ, ಸಿಐಡಿ - ಎಸ್‌ಪಿ, ರಾಯಚೂರು
* ಶುಭನ್ವಿತಾ: ಎಸ್‌ಪಿ, ಸಿಐಡಿ - ಎಸ್‌ಪಿ, ಹಾಸನ
* ಮಿಥುನ್ ಕುಮಾರ್: ಎಸ್‌ಪಿ, ಶಿವಮೊಗ್ಗ - ಡಿಸಿಪಿ, ಈಶಾನ್ಯ ವಿಭಾಗ, ಬೆಂಗಳೂರು
* ವಿಕ್ರಮ್ ಆಮ್ಟೆ: ಎಸ್‌ಪಿ, ಚಿಕ್ಕಮಗಳೂರು - ಡಿಸಿಪಿ, ಪೂರ್ವ ವಿಭಾಗ, ಬೆಂಗಳೂರು
* ಜಿತೇಂದ್ರ ಕುಮಾರ್ ದಯಾಮ್: ಎಸ್‌ಪಿ, ಎಎನ್‌ಎಫ್ - ಎಸ್‌ಪಿ, ಚಿಕ್ಕಮಗಳೂರು
* ಕನ್ನಿಕಾ ಸಿಕ್ರಿವಾಲ್: ಡಿಸಿಪಿ, ಎಲ್&ಒ, ಕಲಬುರಗಿ - ಎಸ್‌ಪಿ, ಕೋಲಾರ ಜಿಲ್ಲೆ
* ಬಿಂದು ಮಣಿ: ಡಿಸಿಪಿ, ಎಲ್&ಒ, ಮೈಸೂರು - ಎಸ್‌ಪಿ, ಕೊಡಗು ಜಿಲ್ಲೆ
* ಮಹಮ್ಮದ್ ಸುಜೀತಾ ಎಂ.ಎಸ್: ಎಸ್‌ಪಿ, ಹಾಸನ - ಡಿಸಿಪಿ, ಆಗ್ನೇಯ ವಿಭಾಗ, ಬೆಂಗಳೂರು
* ಶೋಭಾರಾಣಿ: ಎಸ್‌ಪಿ, ಬಳ್ಳಾರಿ - ಎಸ್‌ಪಿ, ಮಂಡ್ಯ
* ಸಾರಾ ಫಾತಿಮಾ: ಡಿಸಿಪಿ, ಆಗ್ನೇಯ ವಿಭಾಗ - ಎಸ್‌ಪಿ, ರೈಲ್ವೇಸ್
* ಮುತ್ತುರಾಜು ಎಂ: ಎಸ್‌ಪಿ, ಬಿಎಂಟಿಎಫ್ - ಎಸ್‌ಪಿ, ಚಾಮರಾಜನಗರ
* ಡಾ.ಕವಿತಾ ಬಿ.ಟಿ: ಎಸ್‌ಪಿ, ಚಾಮರಾಜನಗರ - ಎಸ್‌ಪಿ, ಸಿಐಡಿ, ಬೆಂಗಳೂರು
* ಸಜಿತ್: ಡಿಸಿಪಿ, ಈಶಾನ್ಯ ವಿಭಾಗ - ಎಸ್‌ಪಿ, ಐಎಸ್‌ಡಿ
* ಪವನ್ ನೆಜ್ಜೂರ್: ಎಸ್‌ಪಿ, ಲೋಕಾಯುಕ್ತ - ಎಸ್‌ಪಿ, ಬಳ್ಳಾರಿ ಜಿಲ್ಲೆ
* ಮಲ್ಲಿಕಾರ್ಜುನ ಬಾಲದಂಡಿ: ಎಸ್‌ಪಿ, ಮಂಡ್ಯ - ಎಸ್‌ಪಿ, ಮೈಸೂರು
* ಸ್ಯಾಮ್ ವರ್ಗೀಸ್: ಎಎಸ್‌ಪಿ, ಚನ್ನಗಿರಿ - ಎಸ್‌ಪಿ, ಸಿಐಡಿ
* ಶಾಲೂ: ಎಸಿಪಿ ಹೊಳೆನರಸೀಪುರ - ಎಸ್‌ಪಿ, ಸಿಐಡಿ
* ಡಾ ಹರ್ಷ ಪ್ರಿಯಂವದ: ಎಎಸ್‌ಪಿ ಉಡುಪಿ - ಎಸ್‌ಪಿ ಸಿಐಡಿ
ಹೀಗೆ ರಾಜ್ಯ ಸರ್ಕಾರ ಆಡಳಿತ ಯಂತ್ರಕ್ಕೆ ಮೇಜರ್ ಸರ್ಕರಿ ಮಾಡುತ್ತಲಿರುತ್ತದೆ. ಆದರೆ, ಇದೀಗ ಹೊಸ ವರ್ಷದ ಹಿಂದಿನ ದಿನ ಅಂದರೆ ಡಿಸೆಂಬರ್ 31ರಂದು ದಿಢೀರ್ ಈ ನಿರ್ಧಾರ ತೆಗೆದುಕೊಂಡಿರುವುದು ಅಚ್ಚರಿ ಮೂಡಿಸುವಂತಹ ವಿಚಾರವೇ ಆಗಿದೆ ಎಂದರೆ ತಪ್ಪಾಗಲಾರದು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications