Breaking; 7ನೇ ವೇತನ ಆಯೋಗ, ಸಿಬ್ಬಂದಿ ನಿಯೋಜನೆ ಆದೇಶ
ಬೆಂಗಳೂರು, ಡಿಸೆಂಬರ್ 08; ಕರ್ನಾಟಕ ಸರ್ಕಾರ 7ನೇ ವೇತನ ಆಯೋಗ ಮಾಡಿ ಆದೇಶ ಹೊರಡಿಸಿದೆ. ಸುಧಾಕರ್ ರಾವ್ ಅಧ್ಯಕ್ಷತೆಯ ಆಯೋಗಕ್ಕೆ ಸಿಬ್ಬಂದಿ ನೇಮಕದ ಕುರಿತು ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸಿಬ್ಬಂದಿ) ಈ ಕುರಿತು ಆದೇಶ ಹೊರಡಿಸಿದ್ದಾರೆ. ಒಟ್ಟು 44 ಸಿಬ್ಬಂದಿಗಳನ್ನು ನಿಯೋಜನೆಗೊಳಿಸಿ ಆದೇಶಿಸಲಾಗಿದೆ.
ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳನ್ನು ಪರಿಷ್ಕರಿಸಲು ಮತ್ತು ನೂತನ ವೇತನ ರಚನೆ ಇತ್ಯಾದಿಗಳನ್ನು ರೂಪಿಸಲು, ಅಧ್ಯಕ್ಷರು ಮತ್ತು ಸದಸ್ಯರುಗಳನ್ನೊಳಗೊಂಡಂತೆ 7ನೇ ರಾಜ್ಯ ವೇತನ ಆಯೋಗವನ್ನು ರಚಿಸಲಾಗಿರುತ್ತದೆ.

7ನೇ ರಾಜ್ಯ ವೇತನ ಆಯೋಗಕ್ಕೆ ಈ ಕೆಳಕಂಡ 44 ಹುದ್ದೆಗಳನ್ನು ಆಯೋಗದ ಅವಧಿಯವರೆಗೆ ತಾತ್ಕಾಲಿಕವಾಗಿ ಸೃಜನೆ ಮಾಡಲಾಗಿರುತ್ತದೆ. ಸೃಜಿಸಲಾದ ಹುದ್ದೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಕರ್ನಾಟಕ ಸರ್ಕಾರ ಸಚಿವಾಲಯದ ಸೇವೆಯಿಂದ ಅಥವಾ ಸರ್ಕಾರದ ಇನ್ನಿತರ ಇಲಾಖೆಗಳಿಂದ ನಿಯೋಜನೆ ಮೂಲಕ ಭರ್ತಿ ಮಾಡಲು ಆದೇಶಿಸಲಾಗಿರುತ್ತದೆ ಎಂದು ತಿಳಿಸಲಾಗಿದೆ.
ನಿಯೋಜನೆಗೊಂಡಿರುವ ಅಧಿಕಾರಿ/ ನೌಕರರು ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಇಲಾಖೆ/ ಹುದ್ದೆಗಳಿಂದ ಕೂಡಲೇ ಕಾರ್ಯಮುಕ್ತಗೊಂಡು 7ನೇ ರಾಜ್ಯ ವೇತನ ಆಯೋಗದಲ್ಲಿ ಕಾರ್ಯ ವರದಿ ಮಾಡಿಕೊಂಡು ಅದರ ವರದಿಯನ್ನು ಸಂಬಂಧಿಸಿದ ಆಡಳಿತ ಶಾಖೆಗೆ ಕಳಿಸಬೇಕು ಎಂದು ಸೂಚಿಸಲಾಗಿದೆ.
ಕರ್ನಾಟಕ ಸರ್ಕಾರ 7ನೇ ವೇತನ ಆಯೋಗಕ್ಕೆ 44 ಸಿಬ್ಬಂದಿಗಳನ್ನು ನಿಯೋಜನೆ ಮಾಡಿ ಆದೇಶ ಹೊರಡಿಸಿದೆ.#Government #Karnataka #7thPayCommission #ಒನ್ಇಂಡಿಯಾಕನ್ನಡಸುದ್ದಿ pic.twitter.com/DVJmC6e061
— oneindiakannada (@OneindiaKannada) December 8, 2022
ಹುದ್ದೆಗಳು; ಕಾರ್ಯದರ್ಶಿ (ಐಎಎಸ್ ವೃಂದ) 1, ಅಪರ/ ಜಂಟಿ/ ಉಪ ಕಾರ್ಯದರ್ಶಿ/ ವಿಶೇಷಾಧಿಕಾರಿ 3. ಜಂಟಿ/ ಉಪ/ ಸಹಾಯಕ ನಿರ್ದೇಶಕರು (ಅಂಕಿ ಅಂಶ) 1. ಅಧೀನ ಕಾರ್ಯದರ್ಶಿ/ ಆಪ್ತ ಕಾರ್ಯದರ್ಶಿ 6. ಶಾಖಾಧಿಕಾರಿ 2. ಹಿರಿಯ ಸಹಾಯಕರು/ ಸಹಾಯಕರು/ ಶೀಘ್ರಲಿಪಿಗಾರರು/ ಕಿರಿಯ ಸಹಾಯಕರು/ ಬೆರಳಚ್ಚುಗಾರರು/ ಡಾಟಾ ಎಂಟ್ರಿ ಆಪರೇಟರ್ ಹಾಗೂ ಇತರೆ ಗ್ರೂಪ್ ಸಿ ವೃಂದದ ಹುದ್ದೆಗಳು 25 ಮತ್ತು ದಲಾಯತ್ 6 ಹುದ್ದೆಗಳಿಗೆ ನಿಯೋಜನೆ ಮಾಡಲಾಗಿದೆ.
7ನೇ ರಾಜ್ಯ ವೇತನ ಆಯೋಗಕ್ಕೆ ಕರ್ನಾಟಕ ಸರ್ಕಾರ ಸಚಿವಾಲಯದ ಗ್ರೂಪ್-ಬಿ ಮತ್ತು ಗ್ರೂಪ್-ಸಿ ವೃಂದದ ಈ ಕೆಳಕಂಡ 24 ಅಧಿಕಾರಿ/ ನೌಕರರುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದ ತನಕ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.












Click it and Unblock the Notifications