ಕರ್ನಾಟಕದಲ್ಲಿ ಒಂದೇ ದಿನ 4120 ಜನರಿಗೆ ಕೊರೊನಾವೈರಸ್ ಪಾಸಿಟಿವ್
ಬೆಂಗಳೂರು, ಜುಲೈ.19: ನೊವೆಲ್ ಕೊರೊನಾವೈರಸ್ ಅಟ್ಟಹಾಸಕ್ಕೆ ಕರ್ನಾಟಕದಲ್ಲಿನ ಚಿತ್ರಣವೇ ಬದಲಾಗುತ್ತಿದೆ. ಪ್ರತಿನಿತ್ಯ ಸಾವಿರಾರು ಸೋಂಕಿತ ಪ್ರಕರಣಗಳು ವರದಿಯಾಗುತ್ತಿದ್ದು, ರಾಜ್ಯದ ಜನರ ನೆಮ್ಮದಿ ಕೆಡಿಸಿದೆ.
Recommended Video
ಕಳೆದ 24 ಗಂಟೆಗಳಲ್ಲೇ ರಾಜ್ಯದಲ್ಲಿ 4120 ಮಂದಿಗೆ ನೊವೆಲ್ ಕೊರೊನಾವೈರಸ್ ಸೋಂಕು ತಗಲಿರುದ್ದು ದೃಢಪಟ್ಟಿದೆ. ಒಟ್ಟು ಕೊರೊನಾವೈರಸ್ ಸೋಂಕಿತರ ಸಂಖ್ಯೆಯು 63772ಕ್ಕೆ ಏರಿಕೆಯಾಗಿದ್ದು, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದ ಅಂಕಿ-ಅಂಶವು ಜನರ ಎದೆಯಲ್ಲಿ ನಡುಕ ಹುಟ್ಟಿಸುವಂತಿದೆ.
ಕರ್ನಾಟಕದಲ್ಲಿ ಭಾನುವಾರ 1290 ಮಂದಿ ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದಾರೆ. ಇದರಿಂದ ರಾಜ್ಯದಲ್ಲಿ ಒಟ್ಟು ಕೊರೊನಾವೈರಸ್ ನಿಂದ ಗುಣಮುಖರಾದವರ ಸಂಖ್ಯೆಯು 23065ಕ್ಕೆ ಏರಿಕೆಯಾಗಿದೆ. ಚೇತರಿಕೆ ಕಂಡು ಬಂದ ಶೇಕಡಾವಾರು ಪ್ರಮಾಣ ಶೇ.36.1ರಷ್ಟಿದೆ. ಇನ್ನು, ರಾಜ್ಯದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆಯು 39370ಕ್ಕೆ ಹೆಚ್ಚಳವಾಗಿದ್ದು, ಮರಣ ಪ್ರಮಾಣ ಶೇ.2.8ರಷ್ಟಿದೆ.

ಬೆಂಗಳೂರಿನಲ್ಲೇ 2156 ಮಂದಿಗೆ ಕೊರೊನಾವೈರಸ್:
ಕೊರೊನಾವೈರಸ್ ಸೋಂಕಿತರ ಪೈಕಿ ಅತಿಹೆಚ್ಚು ಪ್ರಕರಣಗಳು ರಾಜ್ಯ ರಾಜಧಾನಿಯಲ್ಲೇ ಕಂಡು ಬರುತ್ತಿವೆ. ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ 2156 ಮಂದಿಗೆ ಕೊರೊನಾವೈರಸ್ ಸೋಂಕು ಕಾಣಿಸಿಕೊಂಡಿದೆ. 256 ಮಂದಿ ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದು, ಒಂದೇ ದಿನ 36 ಮಂದಿ ಮಹಾಮಾರಿಗೆ ಪ್ರಾಣ ಬಿಟ್ಟಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ 24,316 ಸಕ್ರಿಯ ಪ್ರಕರಣಗಳಿವೆ.












Click it and Unblock the Notifications