ಕರ್ನಾಟಕ; ಬೆಂಗಳೂರಲ್ಲಿ 14,316 ಹೊಸ ಪ್ರಕರಣ ದಾಖಲು
ಬೆಂಗಳೂರು, ಮೇ 14; ಕರ್ನಾಟಕದಲ್ಲಿ ಕೋವಿಡ್ 2ನೇ ಅಲೆ ತಡೆಗೆ ಲಾಕ್‌ಡೌನ್ ಮಾಡಲಾಗಿದೆ. ರಾಜ್ಯದಲ್ಲಿ 24 ಗಂಟೆಯಲ್ಲಿ 41,779 ಹೊಸ ಪ್ರಕರಣ ದಾಖಲಾಗಿದ್ದು, 373 ಜನರು ಸಾವನ್ನಪ್ಪಿದ್ದಾರೆ.
ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಪ್ರಕಾರ 24 ಗಂಟೆಯಲ್ಲಿ 35,879 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 2130267ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 5,98,605.
ರಾಜ್ಯದಲ್ಲಿ ಇದುವರೆಗೂ 21085 ಜನರು ಮೃತಪಟ್ಟಿದ್ದಾರೆ. 1510557 ಜನರು ಇದುವರೆಗೂ ಗುಣಮುಖಗೊಂಡು ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದ ಖಚಿತ ಪ್ರಕರಣಗಳ ಶೇಕಡಾವಾರು ಪ್ರಮಾಣ 32.86 ಆಗಿದೆ. ಮೃತಪಟ್ಟವರ ಶೇಕಡಾವಾರು ಪ್ರಮಾಣ 0.89 ಆಗಿದೆ.

24 ಗಂಟೆಯಲ್ಲಿ 10,315 ಆಂಟಿಜೆನ್, 1,16,790 ಆರ್‌ಟಿಪಿಸಿಆರ್ ಮಾದರಿಗಳ ಪರೀಕ್ಷೆ ಸೇರಿಸಿ ಒಟ್ಟು 1,27,105 ಮಾದರಿಗಳ ಪರೀಕ್ಷೆಗಳನ್ನು ನಡೆಸಲಾಗಿದೆ. ಇದುವರೆಗೂ 27648133 ಮಾದರಿಗಳ ಪರೀಕ್ಷೆ ನಡೆದಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು?: ಬೆಂಗಳೂರು ನಗರದಲ್ಲಿ 24 ಗಂಟೆಯಲ್ಲಿ 14,316 ಹೊಸ ಪ್ರಕರಣ ಪತ್ತೆಯಾಗಿದೆ, 121 ಜನರು ಗುಣಮುಖಗೊಂಡಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 1029312. ಸಕ್ರಿಯ ಪ್ರಕರಣಗಳು 360862.
ಬಳ್ಳಾರಿ 2421. ಬೆಳಗಾವಿ 1592. ದಕ್ಷಿಣ ಕನ್ನಡ 1215. ಹಾಸನ 1339. ಮಂಡ್ಯ 1385. ಮೈಸೂರು 2340. ರಾಯಚೂರು 1063. ತುಮಕೂರು 2668. ಉಡುಪಿ 1219 ಹೊಸ ಪ್ರಕರಣ ಪತ್ತೆಯಾಗಿದೆ.
ಬಾಗಲಕೋಟೆ 773. ಬೆಂಗಳೂರು ಗ್ರಾಮಾಂತರ 707. ಚಾಮರಾಜನಗರ 713. ಚಿಕ್ಕಬಳ್ಳಾಪುರ 676. ಚಿಕ್ಕಮಗಳೂರು 835. ಚಿತ್ರದುರ್ಗ 314. ದಾವಣಗೆರೆ 581. ಧಾರವಾಡ 829. ಹಾವೇರಿ 292. ಕಲಬುರಗಿ 929. ಉತ್ತರ ಕನ್ನಡ 787. ವಿಜಯಪುರ 444, ಯಾದಗಿರಿ 683 ಹೊಸ ಪ್ರಕರಣಗಳು ದಾಖಲಾಗಿವೆ.












Click it and Unblock the Notifications