ಕರ್ನಾಟಕಕ್ಕೆ ಆಘಾತ; ಒಂದೇ ದಿನ 378 ಮಂದಿಗೆ ಕೊರೊನಾ ವೈರಸ್!
ಬೆಂಗಳೂರು, ಜೂನ್.06: ಕರ್ನಾಟಕದಲ್ಲಿ ಮತ್ತೊಮ್ಮೆ ನೊವೆಲ್ ಕೊರೊನಾ ವೈರಸ್ ಮಹಾಸ್ಫೋಟ ಸಂಭವಿಸಿದೆ. ಶನಿವಾರ ಒಂದೇ ದಿನ ರಾಜ್ಯದಲ್ಲಿ 378 ಮಂದಿಗೆ ಕೊವಿಡ್-19 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.
Recommended Video
India surpasses Italy in Corona cases count | Oneindia kannada
ಶನಿವಾರ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ ರಾಜ್ಯದ ಜನರಿಗೆ ಆಘಾತ ನೀಡಿದೆ. ಕಳೆದ 24 ಗಂಟೆಗಳಲ್ಲಿ ಕೊವಿಡ್-19 ಸೋಂಕಿನಿಂದ ಇಬ್ಬರು ಪ್ರಾಣ ಬಿಟ್ಟಿದ್ದಾರೆ. ಕರ್ನಾಟಕದಲ್ಲಿ ಕೊರೊನಾ ವೈರಸ್ ನಿಂದ ಮೃತಪಟ್ಟವರ ಸಂಖ್ಯೆಯು 59ಕ್ಕೆ ಏರಿಕೆಯಾಗಿದೆ.

ಕೃಷ್ಣನಗರಿಯಲ್ಲಿ ಮತ್ತೊಮ್ಮೆ ನೊವೆಲ್ ಕೊರೊನಾ ವೈರಸ್ ಅಟ್ಟಹಾಸ ತೋರಿದೆ. ಜಿಲ್ಲೆ ಒಂದರಲ್ಲೇ ಬರೋಬ್ಬರಿ 121 ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, ಯಾದಗಿರಿಯಲ್ಲೂ 103 ಜನರಿಗೆ ಸೋಂಕು ದೃಢಪಟ್ಟಿದೆ.












Click it and Unblock the Notifications