ಕರ್ನಾಟಕದಲ್ಲಿ ಒಂದೇ ದಿನ 29744 ಮಂದಿಗೆ ಕೊರೊನಾ ಪಾಸಿಟಿವ್!
ಬೆಂಗಳೂರು, ಏಪ್ರಿಲ್ 26: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಭಾನುವಾರಕ್ಕೆ ಹೋಲಿಸಿದರೆ ಸ್ವಲ್ಪ ಪ್ರಮಾಣದಲ್ಲಿ ತಗ್ಗಿದೆ. 34 ರಿಂದ ಸೋಂಕಿತ ಪ್ರಕರಣಗಳ ಸಂಖ್ಯೆ 29 ಸಾವಿರಕ್ಕೆ ಇಳಿಕೆಯಾಗಿದೆ.
ರಾಜ್ಯದಲ್ಲಿ 24 ಗಂಟೆಗಳಲ್ಲಿ 29744 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಒಂದು ದಿನದಲ್ಲಿ 201 ಮಂದಿ ಮಹಾಮಾರಿಗೆ ಬಲಿಯಾಗಿದ್ದರೆ, ಇದೇ ಅವಧಿಯಲ್ಲಿ 10663 ಸೋಂಕಿತರು ಗುಣಮುಖರಾಗಿದ್ದಾರೆ.
ಬೆಂಗಳೂರಿನಲ್ಲೇ ಒಂದು ದಿನದಲ್ಲಿ 16545 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸಿಲಿಕಾನ್ ಸಿಟಿಯಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 6,70,201ಕ್ಕೆ ಏರಿಕೆಯಾಗಿದ್ದು, ಈವರೆಗೂ 5905 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಕಳೆದ 24 ಗಂಟೆಗಳಲ್ಲೇ 105 ಮಂದಿ ಪ್ರಾಣ ಬಿಟ್ಟಿದ್ದು, ಬೆಂಗಳೂರಿನಲ್ಲಿ 1,92,669 ಸಕ್ರಿಯ ಪ್ರಕರಣಗಳಿವೆ.

ಸೋಮವಾರದ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಒಟ್ಟು 13,68,945 ಕೊರೊನಾವೈರಸ್ ಸೋಂಕಿತ ಪ್ರಕರಣಗಳಿವೆ. ಈ ಪೈಕಿ 10,73,257 ಸೋಂಕಿತರು ಗುಣಮುಖರಾಗಿದ್ದು, ಸೋಂಕಿಗೆ ಈವರೆಗೂ 14627 ಮಂದಿ ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ ರಾಜ್ಯದಲ್ಲಿ 2,81,042 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ?
ರಾಜ್ಯದಲ್ಲಿ ಒಟ್ಟು 29744 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 418, ಬಳ್ಳಾರಿ 786, ಬೆಳಗಾವಿ 312, ಬೆಂಗಳೂರು ಗ್ರಾಮಾಂತರ 505, ಬೆಂಗಳೂರು 16545, ಬೀದರ್ 452, ಚಾಮರಾಜನಗರ 267, ಚಿಕ್ಕಬಳ್ಳಾಪುರ 444, ಚಿಕ್ಕಮಗಳೂರು 403, ಚಿತ್ರದುರ್ಗ 104, ದಕ್ಷಿಣ ಕನ್ನಡ 295, ದಾವಣಗೆರೆ 105, ಧಾರವಾಡ 433, ಗದಗ 97, ಹಾಸನ 747, ಹಾವೇರಿ 78, ಕಲಬುರಗಿ 872, ಕೊಡಗು 311, ಕೋಲಾರ 421, ಕೊಪ್ಪಳ 282, ಮಂಡ್ಯ 929 ಮೈಸೂರು 1563, ರಾಯಚೂರು 609, ರಾಮನಗರ 168, ಶಿವಮೊಗ್ಗ 250, ತುಮಕೂರು 1197, ಉಡುಪಿ 412, ಉತ್ತರ ಕನ್ನಡ 190, ವಿಜಯಪುರ 385, ಯಾದಗಿರಿ 164 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.












Click it and Unblock the Notifications