ಶಾಸಕ ಬೆನ್ನಲ್ಲೇ 34 ಕಾರ್ಯಕರ್ತರಿಗೆ ನಿಗಮ ಮಂಡಳಿ ಸ್ಥಾನ: ಯಾರಿಗೆಲ್ಲ ಅವಕಾಶ? ಇಲ್ಲಿದೆ ಪಟ್ಟಿ
ಬೆಂಗಳೂರು, ಜನವರಿ 30: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶಾಸಕರನ್ನ ಹಾಗೂ ಕಾರ್ಯಕರ್ತರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ನಾಯಕರು ಭರ್ಜರಿ ತಯಾರಿ ನಡೆಸಿದ್ದಾರೆ.
ಹೌದು, ಪಕ್ಷ ಸಂಘಟನೆ ಜತೆ ಜತೆಗೆ ಕಾರ್ಯಕರ್ತರು, ನಾಯಕರಿಗೆ ಆದ್ಯತೆ ಕೊಡಲು ಮುಂದಾಗಿದೆ. 28 ಲೋಕಸಭಾ ಕ್ಷೇತ್ರಗಳಲ್ಲಿ ಕನಿಷ್ಠ 20 ಕ್ಷೇತ್ರಗಳನ್ನು ಗೆಲ್ಲುವ ನಿಟ್ಟಿನಲ್ಲಿ ಹೈಕಮಾಂಡ್ ಟಾಸ್ಕ್ ನೀಡಿದೆ, ಈಗಾಗಲೇ 34 ಶಾಸಕರಿಗೆ ನಿಗಮ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿಲಾಗಿದ್ದು, ಇದೀಗ ಕಾರ್ಯಕರ್ತರನ್ನ ಸಮಾಧಾನಗೊಳಿಸುವ ನಿಟ್ಟಿನಲ್ಲಿ ಕಾರ್ಯಕರ್ತರಿಗೆ ಅವಕಾಶ ನೀಡಲು ಮುಂದಾಗಿದೆ ಎಂದು ತಿಳಿದು ಬಂದಿದೆ.

ಶಾಸಕರಿಗೆ ನಿಗಮ ಮಂಡಳಿ ಸ್ಥಾನ ನೀಡಿದ ಬಳಿಕ ಕಾರ್ಯಕರ್ತರಿಗೆ ನಿಗಮ, ಮಂಡಳಿ ಸ್ಥಾನ ನೀಡುವ ಸಂಬಂಧ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಯಾರನ್ನು ಆಯ್ಕೆ ಮಾಡಬೇಕು? ಆಯ್ಕೆ ಮಾನದಂಡ ಹೇಗಿರಬೇಕು? ಅಸಮಾಧಾನಗೊಂಡರೆ ಏನು ಮಾಡಬೇಕು? ಎಂಬ ಕುರಿತು ಚರ್ಚೆ ನಡೆಸಿದ್ದು, 34 ಜನ ಕಾರ್ಯಕರ್ತರಿಗೆ ಸ್ಥಾನ ಕಲ್ಪಿಸುವ ಕುರಿತು ಪಟ್ಟಿಯನ್ನ ರೆಡಿ ಮಾಡಲಾಗಿದೆ.
ಕಾಂಗ್ರೆಸ್ ಹೈಕಮಾಂಡ್‌ಗೆ ಕಳುಹಿಸಿದ ಕಾರ್ಯಕರ್ತರ ಪಟ್ಟಿ ?
ಜಿ.ಎಸ್.ಮಂಜುನಾಥ್
ಕಾಂತಾ ನಾಯಕ್
ಮುಂಡರಗಿ ನಾಗರಾಜ್
ವಿನೋದ್ ಎಸ್ ಅಸೂಟಿ
ಬಿ.ಎಚ್. ಹರೀಶ್
ಡಾ. ಅಂಶುಮಂತ್
ಜೆ.ಎಸ್. ಆಂಜನೇಯಲು
ಡಾ. ಬಿ. ಯೋಗೇಶ್ ಬಾಬು
ಡಾ. ಎಚ್. ಕೃಷ್ಣ
ಮರಿಗೌಡ
ದೇವೇಂದ್ರಪ್ಪ ಮಾರ್ತೂರು
ರಾಜಶೇಖರ್ ರಾಮಸ್ವಾಮಿ
ಕೆ. ಮರೀಗೌಡ
ಎಸ್. ಮನೋಹರ್
ಅಯೂಬ್ ಖಾನ್
ಮಮತಾ ಗುಟ್ಟಿ
ಪಲ್ಲವಿ ಜಿ.
ಎಸ್.ಇ. ಸುದೀಂದ್ರ
ಡಾ. ನಾಗಲಕ್ಷ್ಮಿ ಚೌಧರಿ
ಎಚ್.ಎಸ್. ಸುಂದರೇಶ್
ಆರ್.ಎಂ. ಮಂಜುನಾಥ್ ಗೌಡ
ಜಯಣ್ಣ

ಎಸ್.ಆರ್. ಪಾಟೀಲ್ ಬ್ಯಾಡಗಿ
ಆರ್. ಸಂಪತ್ ರಾಜ್
ಪದ್ಮಾವತಿ
ಸರೋವರ್ ಶ್ರೀನಿವಾಸ್
ಶಕೀರ್ ಸನದಿ
ಸೋಮಣ್ಣ ಬೇವಿನಮರದ
ಬಿ.ಪುಷ್ಪಾ ಅಮರನಾಥ್
ಮೆಹಬೂಬ್ ಪಾಷಾ
ಕೀರ್ತಿ ಗಣೇಶ್
ಮಜರ್ ಖಾನ್
ಸವಿತಾ ರಘು
ಲಲಿತ್ ರಾಘವ್












Click it and Unblock the Notifications