Dudhsagar: ದೂಧ್‌ಸಾಗರ್ ನೋಡಲು ತೆರಳಿ ಸಿಕ್ಕಿಬಿದ್ದ 32 ಪ್ರವಾಸಿಗರು, ಮಳೆಗಾಲದ ಸಾಹಸಕ್ಕೆ ಬ್ರೇಕ್

ಹುಬ್ಬಳ್ಳಿ; ಮಳೆಗಾಲ ಬಂತೆಂದರೆ ಸಾಕು ರಾಜ್ಯದ ಒಳಗಿನ ಪ್ರವಾಸಿತಾಣಗಳು ಮಾತ್ರವಲ್ಲದೇ, ಗೋವಾ- ಕರ್ನಾಟಕದ ಗಡಿಯಲ್ಲಿರುವ ದೂಧ್ ಸಾಗರ್ (Dudhsagar Water Falls) ಜಲಪಾತ ನೋಡಲು ಪ್ರವಾಸಿಗರು ಮುಗಿ ಬೀಳುತ್ತಾರೆ. ಅದರಲ್ಲೂ ವಾರಾಂತ್ಯದಲ್ಲಿ ಈ ಭಾಗದಲ್ಲಿ ಅತೀ ಹೆಚ್ಚು ಪ್ರವಾಸಿಗರು ಆಗಮಿಸುತ್ತಾರೆ. ಮಳೆಗಾಲದಲ್ಲಿ ಈ ತಾಣದ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗುತ್ತದೆ. ಸಾಕಷ್ಟು ಎಚ್ಚರಿಕೆ, ಪ್ರವೇಶ ನಿರ್ಬಂಧ ಜಾರಿ ಹೊರತಾಗಿಯು 32 ಪ್ರವಾಸಿಗರು ಅಕ್ರಮ ಪ್ರವೇಶ ಮಾಡಿದ್ದಾರೆಂದು ಆರ್‍ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ.

ಕೊಂಕಣ, ಗೋವಾ, ಮಹಾರಾಷ್ಟ್ರ ಭಾಗದಲ್ಲಿ ಭಾರೀ ಮಳೆ ಸುರಿಯುತ್ತದೆ. ಮಳೆಯಾದರೆ ಸಾಕು ಹಚ್ಚ ಹಸಿರಿನ ಮಧ್ಯ ಹಾಲಿನ ನೋರೆಯಂತೆ ಧುಮ್ಮಿಕ್ಕುವ ದೂಧ್ ಸಾಗರ ಜಲಪಾತದಲ್ಲಿ ನೀರಿನ ಹರಿವು ಹೆಚ್ಚಿರುತ್ತದೆ. ಮುಂಗಾರು ಋತುವಿನಲ್ಲಿ ಜಲಪಾತದ ನೋಡಲು ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು, ಚಾರಣಪ್ರಿಯರು ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿಗೆ ಬರಲು ಕಾಡಿನೊಳಗಿನಿಂದ ಶಾರ್ಟ್ ಮಾರ್ಗಗಳು ಇವೆ. ಇಲ್ಲವೇ ಹುಬ್ಬಳ್ಳಿಯಿಂದ ಕ್ಯಾಸಲ್‌ರಾಕ್ ವರೆಗೆ ರೈಲಲ್ಲಿ ಬಂದು, ಅಲ್ಲಿಂದ ಸುಮಾರು 10-12ಕಿಲೋ ಮೀಟರ್ ರೈಲ್ವೆ ಟ್ರ್ಯಾಕ್ ಮೇಲೆ ಟ್ರೆಕಿಂಗ್ ಮಾಡಬೇಕು.

Dudhsagar

1600 ರೂಪಾಯಿ ದಂಡ ಹೇರಿಕೆ

ಹೆಚ್ಚಿನ ರೈಲುಗಳ ಸಂಚಾರ ಇರುವ ಈ ಮಾರ್ಗದಲ್ಲಿ ಟನಲ್ ಮೂಲಕ ಪ್ರವಾಸಿಗರು ಹಳಿ ಮೇಲೆ ನಡೆದು ಸಾಗಬೇಕಾಗುತ್ತದೆ. ಭಾರೀ ಮಳೆ, ಎಲ್ಲ ಕಾಲದಲ್ಲೂ ಸಂಚಾರಕ್ಕೆ ಯೋಗ್ಯವಲ್ಲದ ಕಾರಣ ಹಾಗೂ ಪ್ರವಾಸಿಗರ ಹಿತದೃಷ್ಟಿಯಿಂದ ಜೂನ್‌ನಿಂದ ಜಲಪಾತ ವೀಕ್ಷಣೆ, ಪ್ರವೇಶ ನಿರ್ಬಂಧಿಸಲಾಗುತ್ತದೆ. ಆದರೂ ಸಹಿತ ಸುಮಾರು 32 ಮಂದಿ ಅಕ್ರಮವಾಗಿ ಪ್ರವೇಶಿಸಿದ್ದಾರೆ. ಅವರಿಂದ ತಲಾ 500 ರೂಪಾಯಿ ಒಟ್ಟು 1600 ರೂಪಾಯಿ ದಂಡ ಸಂಗ್ರಹಿಸಲಾಗಿದೆ ಎಂದು ರೈಲ್ವೆ ರಕ್ಷಣಾ ಪಡೆ (RPF) ತಿಳಿಸಿದೆ.

Tour Package: ಹುಬ್ಬಳ್ಳಿ-ಜೋಗ ಜಲಪಾತಕ್ಕೆ NWKRTC ವಿಶೇಷ ಬಸ್‌ ವ್ಯವಸ್ಥೆ, ಟಿಕೆಟ್ ದರ-ವೇಳಾಪಟ್ಟಿ
Tour Package: ಹುಬ್ಬಳ್ಳಿ-ಜೋಗ ಜಲಪಾತಕ್ಕೆ NWKRTC ವಿಶೇಷ ಬಸ್‌ ವ್ಯವಸ್ಥೆ, ಟಿಕೆಟ್ ದರ-ವೇಳಾಪಟ್ಟಿ

ಪ್ರವಾಸಿಗರ ಮೇಲೆ ರೈಲ್ವೆ ಅಧಿಕಾರಿಗಳ ತೀವ್ರ ನಿಗಾ

ಕ್ಯಾಸಲ್ ರಾಕ್ ಬಳಿಯ ಕರ್ನಾಟಕ-ಗೋವಾ ಗಡಿಯಲ್ಲಿನ ಈ ಪ್ರಮುಖ ಪ್ರವಾಸಿ ತಾಣವು ಮಳೆಗಾಲದಲ್ಲಿ ಅಪಾರ ಜನರನ್ನು ತನ್ನತ್ತ ಕೈ ಬೀಸಿ ಕರೆಯುತ್ತದೆ. ಪ್ರತಿ ವಾರಾಂತ್ಯದಲ್ಲಿ ಜನ ತುಂಬಿ ತುಳುಕುತ್ತಾರೆ. ಪ್ರವೇಶಕ್ಕೆ ಅವಕಾಶ ಇಲ್ಲದ ಕಾರಣ ಆರ್‍‌ಪಿಎಫ್ ಸಿಬ್ಬಂದಿ ಗಸ್ತು ಹೆಚ್ಚಿಸಲಾಗುತ್ತಿದೆ. ಚಾರಣಿಗರ ಅತಿಕ್ರಮಣ, ಅಪಘಾತ ತಡೆಗೆ ರೈಲ್ವೆ ಅಧಿಕಾರಿಗಳು ದಿನದ 24 ಗಂಟೆಯು ನಿಗಾ ವಹಿಸಿರುತ್ತಾರೆ. ವಾರಾಂತ್ಯದಲ್ಲಿ ಹೆಚ್ಚಿನ ಸಿಬ್ಬಂದಿ ಗಸ್ತಿನಲ್ಲಿರುತ್ತಾರೆ. ಕ್ಯಾಸಲ್ ರಾಕ್‌ನ ಆರ್‌ಪಿಎಫ್ ಸಬ್-ಇನ್‌ಸ್ಪೆಕ್ಟರ್ ನೇತೃತ್ವದ ತಂಡವು ದೂಧ್‌ಸಾಗರ್ (ಡಿಡಿಎಸ್) ಮತ್ತು ಸೋನಾಲಿಯಮ್ (ಎಲ್‌ಐಎಂ) ನಿಲ್ದಾಣಗಳ ನಡುವಿನ ರೈಲ್ವೆ ಹಾದಿಯಲ್ಲಿ ಅನಿರೀಕ್ಷಿತ ತಪಾಸಣೆ ನಡೆಸಿದಾಗ ಈ 32 ಮಂದಿ ಅಕ್ರಮ ಪ್ರವಾಸಿಗರು ಪತ್ತೆಯಾಗಿದ್ದಾರೆ ಎಂದು ವರದಿ ಆಗಿದೆ.

ಜಲಪಾತ ನೋಡಲೆಂದೆ ಅರಣ್ಯ ಮಾರ್ಗಗಳ ಮೂಲಕ ಬಂದು ಮುಂದೆ ರೈಲ್ವೆ ಹಳಿಗೆ ಎಂಟ್ರಿ ಕೊಟ್ಟಿದ್ದಾರೆ. ಇವರು ಅತಿಕ್ರಮಿಸಿ ನಿಯಮ ಮೀರಿದ್ದಕ್ಕಾಗಿ ತಲಾ ಒಬ್ಬೊಬ್ಬರಿಗೆ 500 ರೂ. ದಂಡಿ ವಿಧಿಸಿದ್ದಾಗಿ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದೂಧ್ ಸಾಗರ; ಸಾರ್ವಜನಿಕ ಪ್ರವೇಶ ನಿಷೇಧ

ಪ್ರತಿ ಮಳೆಗಾಲದಲ್ಲೂ ದೂಧ್ ಸಾಗರ ಜಲಪಾತವನ್ನು ನಿರ್ಧಿಷ್ಟ ಅವಧಿವರೆಗೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗುತ್ತದೆ. ಮಳೆಗಾಲ ಮುಗಿಯುವವರೆಗೆ ಈ ನಿರ್ಬಂಧ ನಿಯಮ ಮುಂದುವರಿಯುತ್ತದೆ. ಈ ಮೂಲಕ ಘಾಟ್ ಮಾರ್ಗದಲ್ಲಿ ರೈಲುಗಳ ಸುರಕ್ಷಿತ ಸಂಚಾರ ಖಚಿತಪಡಿಸಲಾಗುತ್ತದೆ. ರೈಲು ಸರಕು, ಸಾಗಾಣೆಗೆ ಒತ್ತು ನೀಡಲಾಗುತ್ತದೆ. ಒಂದು ವೇಳೆ ಪ್ರವಾಸಿಗರಿಗೆ ಅನುಮತಿ ನೀಡಿದರೆ ನೀರಿಗೆ ಇಳಿಯಬಹುದು, ಸೆಫ್ಟ್ ಗೀಳಿಗೆ ಬಿದ್ದು ಅಪಾಯ ತಂದುಕೊಳ್ಳಬಹುದು. ರೈಲ್ವೆ ಸಂಚಾರಕ್ಕೆ ತೊಂದರೆ ಆಗುವ ಜೊತೆಗೆ ಅಪಘಾತಗಳಿಗೆ ಕಾರಣವಾಗುವ ಸಾಧ್ಯತೆ ಇರುತ್ತದೆ. ಪ್ರತಿ ವರ್ಷ ಈ ಕ್ರಮ ಜರುಗಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+