ಭಟ್ಕಳ: ಬೋಟ್ ಮುಳುಗಿ ಸಮುದ್ರ ಪಾಲಾಗುತ್ತಿದ್ದ 30 ಮೀನುಗಾರರ ರಕ್ಷಣೆ
ಕಾರವಾರ, ಆಗಸ್ಟ್ 13 : ಇಲ್ಲಿನ ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆ ತೆರಳಿದ್ದ ಬೋಟ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಸಮುದ್ರ ಪಾಲಾಗುತ್ತಿದ್ದ 30 ಮೀನುಗಾರರನ್ನು ರಕ್ಷಿಸಲಾಗಿದೆ.
ಮೀನುಗಾರಿಕೆಗಾಗಿ ಸಮುದ್ರದಲ್ಲಿ ಸುಮಾರು 150 ಕಿ.ಮೀ ಕ್ರಮಿಸಿದ್ದ ಬೋಟ್ ಶನಿವಾರ ಸಂಜೆ ವಾಪಸ್ ಭಟ್ಕಳ ಬಂದರು ಸಮೀಪ ಬರುತ್ತಿದ್ದಂತೆ ದೋಣಿಯಲ್ಲಿ ದೋಷ ಕಾಣಿಸಿಕೊಂಡು ನೀರು ತುಂಬಿಕೊಳ್ಳುತ್ತ ಮುಳುಗಲು ಆರಂಭಿಸಿದೆ. ಆತಂಕಗೊಂಡ ಮೀನುಗಾರರು ಕೂಡಲೇ ಇತರೆ ಬೋಟ್ ಗಳಿಗೆ ಮತ್ತು ಬಂದರು ಸಿಬ್ಬಂದಿಯ ಸಹಾಯ ಕೋರಿದ್ದಾರೆ.

ತಕ್ಷಣ ಸ್ಥಳಕ್ಕೆ ಧಾವಿಸಿದ ಕೆಲವು ಬೋಟ್ ಗಳು ಅಲೆಗಳ ಮಧ್ಯ ಅಪಾಯದಲ್ಲಿದ್ದ 30 ಮೀನುಗಾರರನ್ನು ರಕ್ಷಿಸಿದ್ದಾರೆ. ಬಳಿಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕರಾವಳಿ ಪೊಲೀಸರು, ಈ ಸಂಬಂಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications