ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದ ಲಂಚ ಬಾಕರು

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬೆಳಗಾವಿ ಕೆಐಎಡಿಬಿಯ ಇಬ್ಬರು ಅಧಿಕಾರಿಗಳು ಹಾಗೂ ಕೊಪ್ಪಳದ ಗ್ರಾಮ ಲೆಕ್ಕಿಗರೋರ್ವರನ್ನು ಲಂಚ ಸ್ವೀಕರಿಸುತ್ತಿದ್ದಂತೆ ವೇಳೆ 'ರೆಡ್ ಹ್ಯಾಂಡ್' ಆಗಿ ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

By Sachhidananda Acharya
|
Google Oneindia Kannada News

ಬೆಳಗಾವಿ, ಮಾರ್ಚ್ 24: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬೆಳಗಾವಿ ಕೆಐಎಡಿಬಿಯ ಇಬ್ಬರು ಅಧಿಕಾರಿಗಳು ಹಾಗೂ ಕೊಪ್ಪಳದ ಗ್ರಾಮ ಲೆಕ್ಕಿಗರೋರ್ವರನ್ನು ಲಂಚ ಸ್ವೀಕರಿಸುತ್ತಿದ್ದಂತೆ ವೇಳೆ 'ರೆಡ್ ಹ್ಯಾಂಡ್' ಆಗಿ ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಬೆಳಗಾವಿ ನಗರದ ಕಣಬುರ್ಗಿ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯಲ್ಲಿ ಫ್ಲಾಟ್ ಗೆ ಲೀಸ್ ಅಗ್ರಿಮೆಂಟ್ ಮಾಡಿಕೊಡಲು ಕೆ.ಐ.ಎ.ಡಿ.ಬಿ ಕಛೇರಿಗೆ ಎಲ್.ಕೆ.ಪ್ರಕಾಶ ಕುಮಾರ್ ಅರ್ಜಿ ಸಲ್ಲಿಸಿದ್ದರು.[ಶಿವರಾಮ ಆಚಾರ್ಯ ಮನೆ ಮೇಲೆ ಎಸಿಬಿ ದಾಳಿ, ಕೋಟಿ-ಕೋಟಿ ಆಸ್ತಿ ಪತ್ತೆ]

3 Corrupt officials caught ‘Red Hand’ in a ACB raid

ಇದನ್ನು ಮಾಡಿಕೊಡಲು ಕೆಐಎಡಿಬಿ ಅಭಿವೃದ್ದಿ ಅಧಿಕಾರಿ ಮತ್ತು ಕಿರಿಯ ಸಹಾಯಕರಾದ ಬಸವರಾಜ ಅಡಿವೆಪ್ಪಾ ಪೂಜಾರಿ ನಿವೇಶನದ ಕ್ರಯಾ ಪತ್ರ ಮಾಡಿಕೊಡಲು ರೂ.15,000 ಲಂಚದ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಅರ್ಜಿದಾರ ಪ್ರಕಾಶ್ ಕುಮಾರ್ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರನ್ನು ಸಲ್ಲಿಸಿದ್ದರು.

ಈ ಸಂಬಂಧ ಎಸಿಬಿ ಅಧಿಕಾರಿಗಳು ಗುರುವಾರ ದಾಳಿ ನಡೆಸಿ ಪ್ರಕಾಶ ಕುಮಾರ್ ಕೈಯಿಂದ ಅಭಿವೃದ್ದಿ ಅಧಿಕಾರಿ ಮತ್ತು ಬಸವರಾಜ ಅಡಿವೆಪ್ಪಾ ಪೂಜಾರಿ ರೂ. 15,000 ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಸದ್ಯ ಇಬ್ಬರನ್ನೂ ಬಂಧಿಸಿ, ಭ್ರಷ್ಟಾಚಾರ ತಡೆ ಕಾಯ್ದೆ-1988 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎಸಿಬಿ ಬೆಳಗಾವಿ ಜಿಲ್ಲಾ ಪೊಲೀಸ್ ಠಾಣೆಯಲ್ಲಿ ತನಿಖೆ ನಡೆಯುತ್ತಿದೆ.[ಹೂವಿನಹಡಗಲಿ ಉಪನೋಂದಣಾಧಿಕಾರಿ ಮನೆ ಮೇಲೆ ಎಸಿಬಿ ದಾಳಿ]

ಇದೇ ರೀತಿ ಕೊಪ್ಪಳ ಜಿಲ್ಲೆಯ ಎಲಬುರ್ಗಾ ತಾಲ್ಲೂಕಿನ ಹೇರೂರು ಗ್ರಾಮದಲ್ಲಿ ಗ್ರಾಮ ಲೆಕ್ಕಿಗರನ್ನು ಪೊಲೀಸರು ಸಾಕ್ಷಿ ಸಹಿತ ಬಂಧಿಸಿದ್ದಾರೆ. ಕೃಷಿಕರೊಬ್ಬರಿಗೆ ಜಮೀನಿನ ಖಾತೆಯ ಹಕ್ಕು ಬದಲಾವಣೆ ಮಾಡಿಕೊಡಲು ಇಲ್ಲಿನ ತಿಪ್ಪನಾಳ ಗ್ರಾಮದ ಗ್ರಾಮ ಲೆಕ್ಕಿಗ ನಾಗಪ್ಪ ಚೂರಿ ರೂ.4,000 ಲಂಚದ ಹಣ ಪಡೆಯುತ್ತಿದ್ದ ವೇಳೆ ಬಂಧಿಸಲಾಗಿದೆ. ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ-1988 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದ್ದು, ಎಸಿಬಿ ಕೊಪ್ಪಳ ಜಿಲ್ಲಾ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರೆದಿದೆ.

English summary
Anti Corruption Bureau police caught 2 KIADB officials and one Village Accountant ‘red hand’ at Belagavi and Koppal respectively.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X