3 ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್ ಪಟ್ಟಿ ಅಂತಿಮ

Posted By:
Subscribe to Oneindia Kannada

ಬೆಂಗಳೂರು, ಜನವರಿ 27 : ಕರ್ನಾಟಕ ಕಾಂಗ್ರೆಸ್ ಮೂರು ಕ್ಷೇತ್ರಗಳ ಉಪ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಹಿರಿಯ ಕಾಂಗ್ರೆಸ್‌ ಮುಖಂಡ ಜಾಫರ್‌ ಷರೀಫ್‌ ಅವರ ಮೊಮ್ಮಗ ರೆಹಮಾನ್‌ ಷರೀಫ್‌ ಅವರಿಗೆ ಟಿಕೆಟ್‌ ನೀಡಲಾಗಿದೆ.

ಫೆ.13ರಂದು ಹೆಬ್ಬಾಳ, ದೇವದುರ್ಗ ಮತ್ತು ಬೀದರ್ ಕ್ಷೇತ್ರಗಳ ಉಪ ಚುನಾವಣೆ ನಡೆಯಲಿದ್ದು, ನಾಮಪತ್ರಗಳನ್ನು ಸಲ್ಲಿಸಲು ಜನವರಿ 27 ಕೊನೆಯ ದಿನವಾಗಿದೆ. ಅಳೆದು ತೂಗಿ, ಹಲವಾರು ಲೆಕ್ಕಾಚಾರಗಳನ್ನು ಹಾಕಿ ಕಾಂಗ್ರೆಸ್ ಮಂಗಳವಾರ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದೆ. [ಮೂವರು ಅಭ್ಯರ್ಥಿಗಳ ಆಯ್ಕೆಗೆ ಸಿಂಗ್ ಬರಬೇಕಿತ್ತೇ?]

kpcc

ಹೆಬ್ಬಾಳ ಕ್ಷೇತ್ರದಲ್ಲಿ ರೆಹಮಾನ್‌ ಷರೀಫ್‌, ದೇವದುರ್ಗ ಕ್ಷೇತ್ರದಲ್ಲಿ ರಾಜಶೇಖರ ನಾಯ್ಕ ಹಾಗೂ ಬೀದರ್‌ ಕ್ಷೇತ್ರದಲ್ಲಿ ರಹೀಂ ಖಾನ್ ಅವರಿಗೆ ಟಿಕೆಟ್ ನೀಡಲಾಗಿದೆ. ಹೆಬ್ಬಾಳದಲ್ಲಿ ಭೈರತಿ ಸುರೇಶ್, ಎಚ್‌.ಎಂ. ರೇವಣ್ಣ ಹಾಗೂ ರೆಹಮಾನ್‌ ಷರೀಫ್‌ ನಡುವೆ ಟಿಕೆಟ್‌ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ರೆಹಮಾನ್ ಫರೀಷ್‌ಗೆ ಟಿಕೆಟ್ ಪಡೆದಿದ್ದಾರೆ. [ಉಪ ಚುನಾವಣೆ : ಕಾಂಗ್ರೆಸ್ ವೀಕ್ಷಕರ ನೇಮಕ]

ಸಿದ್ದರಾಮಯ್ಯಗೆ ಹಿನ್ನಡೆ : ಹೆಬ್ಬಾಳ ಕ್ಷೇತ್ರಕ್ಕೆ ವಿಧಾನ ಪರಿಷತ್‌ ಸದಸ್ಯ ಭೈರತಿ ಸುರೇಶ್‌ ಹೆಸರನ್ನು ಕೆಪಿಸಿಸಿ ಶಿಫಾರಸು ಮಾಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ನಿಷ್ಠರಾದ ಸುರೇಶ್‌ ಹೆಸರು ಪ್ರಕಟಣೆ ಮಾತ್ರ ಬಾಕಿ ಇದೆ ಎನ್ನುವ ಹಂತದಲ್ಲಿ ಹೈಕಮಾಂಡ್‌ ರೆಹಮಾನ್ ಷರೀಫ್ ಅವರಿಗೆ ಟಿಕೆಟ್ ನೀಡಿದ್ದು, ಸಿದ್ದರಾಮಯ್ಯ ಅವರಿಗೆ ಹಿನ್ನಡೆ ಉಂಟಾಗಿದೆ.

ನನಗೆ ಎಲ್ಲರೂ ಆಪ್ತರು : 'ಹೆಬ್ಬಾಳ ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್‌ ತೀರ್ಮಾನವೇ ಅಂತಿಮ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 'ಭೈರತಿ ಸುರೇಶ್‌ ಮಾತ್ರವಲ್ಲ, ಕಾಂಗ್ರೆಸ್‌ನಲ್ಲಿ ಎಲ್ಲರೂ ನನಗೆ ಆಪ್ತರೇ' ಎಂದು ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಉಪ ಚುನಾವಣೆ ಯಾಕೆ? : ಹೆಬ್ಬಾಳ ಶಾಸಕ ಜಗದೀಶ್ ಕುಮಾರ್ (ಬಿಜೆಪಿ), ಬೀದರ್ ಶಾಸಕ ಗುರುಪಾದಪ್ಪ ನಾಗಮಾರಪಲ್ಲಿ (ಕೆಜೆಪಿ) ಮತ್ತು ದೇವದುರ್ಗ ಶಾಸಕ ವೆಂಕಟೇಶ ನಾಯಕ್ (ಕಾಂಗ್ರೆಸ್) ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಫೆ.13ರಂದು ಚುನಾವಣೆ ನಡೆಯಲಿದ್ದು, ಫೆ.16ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Congress has finalized candidates for Bidar, Devadurga and Hebbal constituency by election scheduled on February 13. 2016.
Please Wait while comments are loading...