ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ದಿನಾಂಕ ಪ್ರಕಟ
ಬೆಂಗಳೂರು, ಮೇ 18: ದ್ವಿತೀಯ ಪಿಯುಸಿ ಬಾಕಿ ಉಳಿದಿದ್ದ ಇಂಗ್ಲಿಷ್ ಪರೀಕ್ಷೆ ದಿನಾಂಕ ಪ್ರಕಟಗೊಂಡಿದೆ ಜೂನ್ 18 ರಂದು ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ.

ಮೌಲ್ಯಮಾಪನಕ್ಕೆ ಒಂದು ತಿಂಗಳ ಕಾಲಾವಕಾಶ ಬೇಕಾಗಿದೆ. ಇಂಗ್ಲಿಷ್ ಪರೀಕ್ಷೆ ಮಾತ್ರ ಇರುವುದು ಬೇರೆ ವಿಷಯಗಳ ಅಂಕಗಳನ್ನು ನೋಡಿ ಅಂದಾಜಿನಲ್ಲಿ ಅಂಕಗಳನ್ನು ನೀಡಬಹುದಲ್ಲಾ ಎನ್ನುವ ಒತ್ತಡಗಳೂ ಕೇಳಿಬಂದಿತ್ತು ಆದರೆ ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈ ಪರೀಕ್ಷೆ ಮುಖ್ಯವಾಗಲಿದೆ ಎಂದು ಸುರೇಶ್ ಕುಮಾರ್ ಹೇಳಿದರು.
ಹಾಸ್ಟೆಲ್‌ನಲ್ಲಿದ್ದ ವಿದ್ಯಾರ್ಥಿಗಳು ಈಗಾಗಲೇ ತಮ್ಮ ಊರುಗಳಿಗೆ ತೆರಳಿರುವುದರಿಂದ ಊರಿನಲ್ಲೇ ಪರೀಕ್ಷೆ ಬರೆಯಲು ಪದವಿ ಪೂರ್ವ ಶಿಕ್ಷಣ ಇಲಾಖೆ ಅನುವು ಮಾಡಿಕೊಟ್ಟಿದೆ.
ನಿಮ್ಮ ರೋಲ್ ನಂಬರ್, ಊರು, ಕಾಲೇಜು, ಹೆಸರನ್ನು ಪದವಿಪೂರ್ವ ಇಲಾಖೆಗೆ ಇ-ಮೇಲ್ ಮಾಡಿ ಮಾಹಿತಿ ನೀಡಬೇಕು. ಎಲ್ಲಾ ಪರೀಕ್ಷೆಗಳು ಮುಗಿದು ಕೇವಲ ಇಂಗ್ಲಿಷ್ ಪರೀಕ್ಷೆ ಮಾತ್ರ ಬಾಕಿ ಇತ್ತು.
ಲಾಕ್ ಡೌನ್ ಘೋಷಣೆ ಮಾಡಲಾಗಿತ್ತು.ಇದೀಗ ಹೇಗಪ್ಪಾ ಅಷ್ಟು ದೂರ ಹೋಗಿ ಪರೀಕ್ಷೆ ಬರೆಯುವುದು ಎನ್ನುವವರಿಗೆ ಊರಿನಲ್ಲೇ ಪರೀಕ್ಷೆ ಬರೆಯಬಹುದಾಗಿದೆ. [email protected]ಗೆ ಇ-ಮೇಲ್ ಮಾಡಿ ನಿಮ್ಮ ಬಗ್ಗೆ ಮಾಹಿತಿ ಒದಗಿಸಬೇಕು. ಪರೀಕ್ಷೆಯು ಜೂನ್ 18 ರಂದು ನಡೆಯಲಿದೆ.












Click it and Unblock the Notifications