ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ರಿಕೆ ಸೋರಿಕೆ: ಶಿಕ್ಷಣ ಸಚಿವರಿಗೆ ವಿದ್ಯಾರ್ಥಿಯ ಬಹಿರಂಗ ಪತ್ರ

By ನೊಂದ ವಿದ್ಯಾರ್ಥಿ
|
Google Oneindia Kannada News

ಮಾನ್ಯ ಶಿಕ್ಷಣ ಸಚಿವರೇ...
ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ವಿಷಯಕ್ಕೆ ಸಂಬಂಧಿಸಿ ಈ ಪತ್ರ ಬರೆಯುತ್ತಿದ್ದೇನೆ....

ನಮ್ಮ ಅಣ್ಣಂದಿರು ಹೇಳುತ್ತಿದ್ದರು. ಈ ಪ್ರಶ್ನೆ ಪತ್ರಿಕೆ ಸೋರಿಕೆ ಸಮಸ್ಯೆ ಇಂದು-ನಿನ್ನೆಯದಲ್ಲ. ಆದರೆ ಈಗ ಹೆಚ್ಚಿಕೊಂಡಿದೆ ಅಷ್ಟೆ. ಅವರು ಪರೀಕ್ಷೆ ಬರೆಯುವ ದಿನ ಮತ್ತು ಹಿಂದಿನ ದಿನ ಪರೀಕ್ಷಾ ಕೇಂದ್ರದ ಸುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ಮುಚ್ಚುತ್ತಿದ್ದರಂತೆ.

ಆದರೆ ಇದೀಗ ಕಾಲ ಬದಲಾಗಿದೆ. ಫೋಟೋವೊಂದನ್ನು ತೆಗೆದು ವಾಟ್ಸಪ್ ಗೆ ಅಪ್ ಲೋಡ್ ಮಾಡಿದರೆ ಸಾಕು... ಕ್ಷಣ ಮಾತ್ರದಲ್ಲಿ ಅದು ನೂರಾರು ಜನರ ಅಂಗೈ ತಲುಪಿರುತ್ತದೆ. ಇಲ್ಲಿ ಯಾವ ಜೆರಾಕ್ಸ್ ಅಂಗಡಿಗಳ ಅಗತ್ಯ ಇರುವುದಿಲ್ಲ. ಈ ಬಾರಿ ಸೋರಿಕೆಯಾಗಿದ್ದು ಹೀಗೆಯೇ ಎಂದು ಮಾಧ್ಯಮಗಳಲ್ಲಿ ಕಂಡಿದ್ದೇನೆ. [ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದೆ ಟ್ಯೂಷನ್ ಮಾಫಿಯಾ?]

puc

ನಾನು ಗ್ರಾಮೀಣ ಭಾಗದ ಮೂಲೆಯೊಂದರಿಂದ ಪ್ರತಿದಿನ ಕಾಲೇಜಿಗೆ ಸರ್ಕಾರಿ ಬಸ್ ನಲ್ಲಿ ತೆರಳುತ್ತಿದ್ದೆ. ನನಗೆ ಈ ವಾಟ್ಸಪ್ ಬಗ್ಗೆ ಏನೂ ಗೊತ್ತಿಲ್ಲ. ಬಡ ತಂದೆ ತಾಯಿ ನನಗೆ ಮೊಬೈಲ್ ಕೊಡಿಸಿಲ್ಲ. ಒಮ್ಮೆ ರಸಾಯನ ಶಾಸ್ತ್ರ ಪರೀಕ್ಷೆ ಬರೆದು. ಪೇಪರ್ ಲೀಕ್ ಆಗಿದೆ ಎಂದು ಮಾರ್ಚ್ 31 ಕ್ಕೆ ಬಂದು ಬರೆಯಿರಿ ಎಂದು ಕಾಲೇಜಿನ ನೋಟಿಸ್ ಬೋರ್ಡ್ ನಲ್ಲಿ ಹಾಕಿದರು.

ಮಾರ್ಚ್ 31 ಕ್ಕೆ ಹೋದರೆ ಪರೀಕ್ಷೆ ರದ್ದಾಗಿದೆ,,, ಏಪ್ರಿಲ್ 12 ಕ್ಕೆ ಬಂದು ಬರೆಯಿರಿ ಅಂದಿದ್ದಾರೆ. ನನಗೇನು ಗೊತ್ತು? ಅವರು ಅಲ್ಲಿ ಯಾರೋ ವಾಮ ಮಾರ್ಗದ ಮೂಲಕ ಪತ್ರಿಕೆಯ ಪ್ರತಿಯನ್ನು ಪಡೆದುಕೊಂಡು ಹಣ ನೀಡಿದವರಿಗೆ ಅದನ್ನು ವ್ಯವಸ್ಥಿತವಾಗಿ ಮಾರಾಟ ಮಾಡಿದರೆ ನಾವು ಮತ್ತೆ ಯಾಕೆ ಪರೀಕ್ಷೆ ಬರೆಯಬೇಕು?[ದ್ವಿತೀಯ ಪಿಯು ಪರೀಕ್ಷೆಯಲ್ಲಿ ರಾಜ್ಯ ಸರ್ಕಾರವೇ ಫೇಲ್!]

ಪ್ರಶ್ನೆ ಪತ್ರಿಕೆ ಸೋರಿಕೆಯಾದ ನಂತರ ವಿದ್ಯಾರ್ಥಿಗಳ ಪ್ರತಿಭಟನೆ ಜೋರಾಗಿದೆ. ಆದರೆ ನನ್ನ ಗೆಳೆಯರು ಯಾರೂ ಸಹ ಮಾಧ್ಯಮಗಳ ಮುಂದೆ ಬಂದು ನೇರವಾಗಿ ಮಾತನಾಡಲು ಸಿದ್ಧರಿಲ್ಲ. ಅವರ ಪಾಲಕರು ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ.

ನೀವು ಅದು ಏನು ಮಾಡುತ್ತಿರೋ ಗೊತ್ತಿಲ್ಲ. ಇನ್ನು ಮುಂದೆ ನಡೆಸುವ ಪರೀಕ್ಷೆಯನ್ನಾದರೂ ಸರಿಯಾಗಿ ಮಾಡಿ. ಪತ್ರಿಕೆ ಸೋರಿಕೆಯಾಗದಂತೆ ನೋಡಿಕೊಳ್ಳಿ...ನಾನು ಸಹ ನನ್ನ ಹೆಸರನ್ನು ಹೇಳಲು ಬಯಸುವುದಿಲ್ಲ.

ನೊಂದ ವಿದ್ಯಾರ್ಥಿ

English summary
Several students and their parents have launched protests across Karnataka after 2nd PUC Chemistry paper were leaked. The Department Of Pre University Education has cancelled re-exam scheduled on March 31st, 2016. After This High Drama A Rural PUC Student wrote an Open Letter to Education Minister Kimmane Rathnakar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X