ಅಬ್ಬಬ್ಬಾ 25 ಕೋಟಿ ರೂ. ಲಾಟರಿ; ಆ ಒಂದು ಕಾರಣದಿಂದ ಕನ್ನಡಿಗ ಸೇಫ್, ಏನದು!
Kerala Onam Bumper: ಲೈಫ್‌ನಲ್ಲಿ ಸ್ವಲ್ಪ ಸೆಲ್ಫಿಶ್ ಆಗಿರಬೇಕು ಕಣ್ರಿ ಅಂತಾರೆ. ಕೇರಳದ 25 ಕೋಟಿ ಲಾಟರಿಯಲ್ಲಿ ಮೊದಲ ಬಹುಮಾನ ಪಡೆದ ಮಂಡ್ಯದ ಅಲ್ತಾಫ್ ಅವರ ವಿಷಯದಲ್ಲಿ ನಿಜವಾಗಿದೆ. ಅಲ್ಲದೇ ಕೆಲವೊಮ್ಮೆ ತಮಾಷೆಗೆ ಹೆಂಡ್ತಿ ಮಾತು ಕೇಳ್ಬೇಕು ಅಂತಿರ್ತಾರೆ. ಈ ಎರಡೂ ಮಾತುಗಳು ಅಲ್ತಾಫ್ ಅವರ ಜೀವನದಲ್ಲಿ ನಿಜವಾಗಿದ್ದು, ಅವರ ಅದೃಷ್ಟ ಕೈಹಿಡಿದಿದೆ.
ಕೇರಳದ ಓಣಂ ಬಂಪರ್ ಡ್ರಾ ಲಾಟರಿಯಲ್ಲಿ ಕರ್ನಾಟಕದ ಮಂಡ್ಯದ ಮೆಕ್ಯಾನಿಕ್ ಅಲ್ತಾಫ್ ಅವರಿಗೆ ಮೊದಲ ಬಹುಮಾನ ಬರೋಬ್ಬರಿ 25 ಕೋಟಿ ರೂಪಾಯಿ ಸಿಕ್ಕಿದೆ. ಕೇರಳದಲ್ಲಿ ಪ್ರತಿ ದಿನವೂ ವಿವಿಧ ಲಾಟರಿಗಳು ಮಾರಾಟವಾಗುತ್ತವೆ. ಆದರೆ, ಕೇರಳದ ಸರ್ವಧರ್ಮೀಯರು ಅತ್ಯಂತ ಅನ್ಯೂನ್ಯತೆಯಿಂದ ಆಚರಿಸುವ ಏಕೈಕ ಹಬ್ಬ ಎಂದರೆ ಅದು ಓಣಂ. ಕೇರಳದಲ್ಲಿ ಓಣಂ ಹಬ್ಬಕ್ಕೆ ವಿಶೇಷವಾದ ಸ್ಥಾನವಿದೆ. ಈ ಹಬ್ಬಕ್ಕೆ ಮಲಯಾಳಿಗರು ದೇಶ - ವಿದೇಶದಲ್ಲಿ ಎಲ್ಲೆ ಇದ್ದರೂ, ಕೇರಳಕ್ಕೆ ಬರುತ್ತಾರೆ. ಕೇರಳದಲ್ಲಿ ಓಣಂ ಸಮಯದಲ್ಲಿ ವಿಶೇಷ ಬಂಪರ್ ಲಾಟರಿ ಬಿಡುಗಡೆಯಾಗುತ್ತದೆ. ಈ ಲಾಟರಿಯ ಮೊದಲ ಬಹುಮಾನವೇ ಬರೋಬ್ಬರಿ 25 ಕೋಟಿ ರೂಪಾಯಿ ಇದೆ.

ಅಲ್ತಾಫ್ ಅವರು ಎರಡು ಲಾಟರಿ ಟಿಕೆಟ್‌ಗಳನ್ನು ಖರೀದಿ ಮಾಡಿದ್ದರು. ಅದರಲ್ಲಿ ಒಂದು ಲಾಟರಿಯನ್ನು ಅವರ ಗೆಳೆಯನಿಗೆ ನೀಡಲು ನಿರ್ಧರಿಸಿದ್ದರು. ಅದೇ ಲಾಟರಿ ಇದೀಗ ಅವರ ಅದೃಷ್ಟ ಕೈಹಿಡಿಯಲು ಕಾರಣವಾಗಿದೆ. ಎರಡು ಲಾಟರಿಯಲ್ಲಿ ಒಂದನ್ನು ಗೆಳೆಯನಿಗೆ ನೀಡಲು ಮುಂದಾಗಿದ್ದರು. ಆದರೆ, ಅಲ್ತಾಫ್ ಅವರ ಪತ್ನಿ ನಿರಾಕರಿಸಿದ್ದರಂತೆ. ಅದೇ ಲಾಟರಿಯಿಂದ ಅಲ್ತಾಫ್ ಅವರಿಗೆ ಬರೋಬ್ಬರಿ 25 ಕೋಟಿ ರೂಪಾಯಿ ಸಿಗಲು ಕಾರಣವಾಗಿದೆ.
ಅಲ್ತಾಫ್ ಅವರ ಪತ್ನಿ ಲಾಟರಿ ಸಂಖ್ಯೆ ಟಿಜಿ 434222 ಯನ್ನು ಯಾರಿಗೂ ಕೊಡಬೇಡಿ ಎಂದಿದ್ದರಂತೆ. ಈ ನಿರ್ಧಾರ ಅವರಿಗೆ ಅದೃಷ್ಟ ಲಕ್ಷ್ಮಿ ಕೈ ಹಿಡಿಯುವಂತೆ ಮಾಡಿದೆ. ಕೊನೆಗೆ ಗೆಳೆಯನಿಗೆ ನೀಡದೆ ಉಳಿಸಿಕೊಂಡಿದ್ದ ಲಾಟರಿಯಿಂದಲೇ ಅವರಿಗೆ ಲಕ್ ಸಿಕ್ಕಿದೆ. ಈ ಲಾಟರಿ ಹಣದಿಂದ ಅಲ್ತಾಫ್ ಅವರ ಕುಟುಂಬವು ಸಾಲವನ್ನು ತೀರಿಸಿ, ಸಣ್ಣದೊಂದು ಕನಸಿನ ಮನೆಯನ್ನು ನಿರ್ಮಾಣ ಮಾಡಲು ನಿರ್ಧರಿಸಿದೆ.
15 ವರ್ಷಗಳಿಂದ ಟಿಕೆಟ್ ಖರೀದಿ: ಕೇರಳದ ಲಾಟರಿಯಲ್ಲಿ ಈ ಬಾರಿ ಅಲ್ತಾಫ್ ಅವರಿಗೆ ಅದೃಷ್ಟ ಕೈಹಿಡಿದಿದೆ. ಆದರೆ, ಈ ಅದೃಷ್ಟಕ್ಕಾಗಿ ಅವರು ಕಳೆದ 15 ವರ್ಷಗಳಿಂದ ಶ್ರಮ ಹಾಕಿದ್ದಾರೆ. ಕೇರಳದಲ್ಲಿ ಕಳೆದ 15 ವರ್ಷಗಳಿಂದ ವಿವಿಧ ಲಾಟರಿಗಳನ್ನು ಖರೀದಿ ಮಾಡುತ್ತಿದ್ದವರ ಅದೃಷ್ಟ ಈ ಬಾರಿ ಓಣಂನಲ್ಲಿ ಕೈಹಿಡಿದಿದೆ. ಕರ್ನಾಟಕದ ಮಂಡ್ಯದ ಪಾಂಡವಪುರದಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿರುವ ಅಲ್ತಾಫ್ ಅವರು ಒಂದು ಸಾವಿರ ರೂಪಾಯಿಗೆ ಎರಡು ಟಿಕೆಟ್‌ಗಳನ್ನು ಖರೀದಿಸಿದ್ದರು.

ಕೇರಳದಲ್ಲಿ ಲಾಟರಿ ಪ್ರವಾಸ: ಕೇರಳ ಪ್ರವಾಸೋದ್ಯಮಕ್ಕೆ ಖ್ಯಾತಿ ಗಳಿಸಿದೆ ನಿಜ. ಇದೇ ಸಂದರ್ಭದಲ್ಲಿ ಕೇರಳದಲ್ಲಿ ಲಾಟರಿಗಾಗಿಯೂ ಪ್ರವಾಸ ಪ್ರಾಂಭವಾಗಿದೆಯಂತೆ. ಇತ್ತೀಚಿನ ವರ್ಷಗಳಲ್ಲಿ ಕೇರಳದಲ್ಲಿ ಲಾಟರಿಗಾಗಿಯೂ ಪ್ರವಾಸ ಬರುತ್ತಿದ್ದಾರಂತೆ. ಕರ್ನಾಟಕ ಹಾಗೂ ತಮಿಳುನಾಡು ಸೇರಿದಂತೆ ದೇಶದ ವಿವಿಧ ಭಾಗದಿಂದ ಕೇರಳಕ್ಕೆ ಬಂದು ಜನ ಲಾಟರಿ ಖರೀದಿ ಮಾಡುತ್ತಿದ್ದಾರಂತೆ.












Click it and Unblock the Notifications