ಲೋಕಸಭಾ ಚುನಾವಣೆ 2019 : ಕರ್ನಾಟಕ ಬಿಜೆಪಿ ಅಭ್ಯರ್ಥಿಗಳ ಪಟ್ಟಿ
ಬೆಂಗಳೂರು, ಮಾರ್ಚ್ 21 : 2019ರ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕರ್ನಾಟಕದ 28 ಕ್ಷೇತ್ರಗಳ ಪೈಕಿ 21 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ಸಿಕ್ಕಿದೆ.
ಬಿಜೆಪಿ ನಾಯಕ ಜೆ.ಪಿ.ನಡ್ಡಾ ಅವರು ಗುರುವಾರ ಸಂಜೆ 182 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು. ಕರ್ನಾಟಕದ 21 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಹಾಲಿ ಸಂಸದರಿಗೆ ಬಿಜೆಪಿ ಈ ಬಾರಿಯೂ ಟಿಕೆಟ್ ನೀಡಿದೆ.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಶೋಭಾ ಕರಂದ್ಲಾಜೆ, ದಕ್ಷಿಣ ಕನ್ನಡದಿಂದ ನಳೀನ್ ಕುಮಾರ್ ಕಟೀಲ್ ಅಭ್ಯರ್ಥಿಯಾಗಿದ್ದಾರೆ. ಬೆಂಗಳೂರು ಉತ್ತರದಲ್ಲಿ ಡಿ.ವಿ.ಸದಾನಂದ ಗೌಡ, ಬೆಂಗಳೂರು ಕೇಂದ್ರದಲ್ಲಿ ಪಿ.ಸಿ.ಮೋಹನ್ ಅಭ್ಯರ್ಥಿಗಳು.
ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ಚಿಕ್ಕೋಡಿ, ಕೋಲಾರ, ರಾಯಚೂರು, ಕೊಪ್ಪಳ, ಮಂಡ್ಯ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಚಿಂಚೋಳಿ ಶಾಸಕ ಡಾ.ಉಮೇಶ್ ಜಾಧವ್, ಮಾಜಿ ಸಚಿವ ಎ.ಮಂಜು ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ.

ಬಿಜೆಪಿ ಪಟ್ಟಿ
* ಬೆಳಗಾವಿ - ಸುರೇಶ್ ಅಂಗಡಿ
* ಬಾಗಲಕೋಟೆ - ಪಿ.ಸಿ.ಗದ್ದಿಗೌಡರ್
* ವಿಜಯಪುರ - ರಮೇಶ್ ಜಿಗಜಿಣಗಿ
* ಕಲಬುರಗಿ - ಡಾ.ಉಮೇಶ್ ಜಾಧವ್

ಕರ್ನಾಟಕ ಬಿಜೆಪಿ ಪಟ್ಟಿ
* ಬೀದರ್ - ಭಗವಂತ ಖೂಬಾ
* ಬಳ್ಳಾರಿ - ದೇವೇಂದ್ರಪ್ಪ
* ಹಾವೇರಿ - ಶಿವಕುಮಾರ್ ಉದಾಸಿ
* ಧಾರವಾಡ - ಪ್ರಹ್ಲಾದ್ ಜೋಶಿ

ಬಿಜೆಪಿ ಅಭ್ಯರ್ಥಿಗಳು
* ಉತ್ತರ ಕನ್ನಡ - ಅನಂತ್ ಕುಮಾರ್ ಹೆಗಡೆ
* ದಾವಣಗೆರೆ - ಜಿ.ಎಂ.ಸಿದ್ದೇಶ್ವರ್
* ಶಿವಮೊಗ್ಗ - ಬಿ.ವೈ.ರಾಘವೇಂದ್ರ
* ಉಡುಪಿ-ಚಿಕ್ಕಮಗಳೂರು - ಶೋಭಾ ಕರಂದ್ಲಾಜೆ

ಯಾರು ಅಭ್ಯರ್ಥಿಗಳು
* ಹಾಸನ - ಎಂ.ಮಂಜು
* ದಕ್ಷಿಣ ಕನ್ನಡ - ನಳೀನ್ ಕುಮಾರ್ ಕಟೀಲ್
* ಚಿತ್ರದುರ್ಗ - ಎ.ನಾರಾಯಣಸ್ವಾಮಿ
* ತುಮಕೂರು - ಜಿ.ಎಸ್.ಬಸವರಾಜ್

ಬೆಂಗಳೂರು, ಮೈಸೂರು
* ಮೈಸೂರು-ಕೊಡಗು : ಪ್ರತಾಪ್ ಸಿಂಹ
* ಬೆಂಗಳೂರು ಉತ್ತರ : ಡಿ.ವಿ.ಸದಾನಂದ ಗೌಡ
* ಬೆಂಗಳೂರು ಕೇಂದ್ರ : ಪಿ.ಸಿ.ಮೋಹನ್
* ಚಿಕ್ಕಬಳ್ಳಾಪುರ - ಬಿ.ಎನ್.ಬಚ್ಚೇಗೌಡ
* ಚಾಮರಾಜನಗರ - ವಿ.ಶ್ರೀನಿವಾಸ ಪ್ರಸಾದ್












Click it and Unblock the Notifications