ಬೆಂಗಳೂರಿನಲ್ಲಿ ಕೊರೊನಾ ಏರಿಕೆ; ರಾಜ್ಯದಲ್ಲಿ 2010 ಪ್ರಕರಣ ಪತ್ತೆ
ಬೆಂಗಳೂರು, ಮಾರ್ಚ್ 23: ಕರ್ನಾಟಕದಲ್ಲಿ ಮಂಗಳವಾರ 2010 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರಿನಲ್ಲಿಯೇ ಅತಿ ಹೆಚ್ಚಿನ ಸೋಂಕಿತರು ಪತ್ತೆಯಾಗಿದ್ದಾರೆ. ರಾಜ್ಯದಲ್ಲಿ ಕಂಡುಬಂದ 2010 ಪ್ರಕರಣಗಳ ಪೈಕಿ ಬೆಂಗಳೂರು ಒಂದರಲ್ಲಿಯೇ 1280 ಸೋಂಕಿತರು ದಾಖಲಾಗಿದ್ದಾರೆ.
ಚಾಮರಾಜನಗರದಲ್ಲಿ ಶೂನ್ಯ ಪ್ರಕರಣ ದಾಖಲಾಗಿದ್ದರೆ, ಮೈಸೂರಿನಲ್ಲಿ ಮತ್ತೆ ನೂರು ಪ್ರಕರಣಗಳು ಪತ್ತೆಯಾಗಿವೆ. ಕಲಬುರಗಿಯಲ್ಲಿಯೂ ಸೋಂಕು ಹೆಚ್ಚಳವಾಗುವ ಸೂಚನೆ ದೊರೆತಿದ್ದು, 129 ಪ್ರಕರಣಗಳು ದಾಖಲಾಗಿವೆ.
ಕಳೆದ 24 ಗಂಟೆಗಳಲ್ಲಿ ರಾಜ್ಯದಾದ್ಯಂತ ಐದು ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. 677 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿನ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 973657ಕ್ಕೆ ತಲುಪಿದೆ.

ಇದುವರೆಗೆ ಸೋಂಕಿನಿಂದ 12449 ಮಂದಿ ಸಾವನ್ನಪ್ಪಿದ್ದು, ಪ್ರಸ್ತುತ 15595 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಲಸಿಕೆ ವಿತರಣೆಯನ್ನು ಚುರುಕುಗೊಳಿಸಲು ನಿರ್ಧರಿಸಲಾಗಿದೆ.
ಜಿಲ್ಲಾವಾರು ಕೊರೊನಾ ವರದಿ: ಕಳೆದ 24 ಗಂಟೆಗಳಲ್ಲಿ ಬಾಗಲಕೋಟೆ 6, ಬಳ್ಳಾರಿ 39, ಬೆಳಗಾವಿ 16, ಬೆಂಗಳೂರು ಗ್ರಾಮಾಂತರ 36, ಬೆಂಗಳೂರು ನಗರ 1280, ಬೀದರ್ 76, ಚಾಮರಾಜನಗರ 0, ಚಿಕ್ಕಬಳ್ಳಾಪುರ 8, ಚಿಕ್ಕಮಗಳೂರು 10, ಚಿತ್ರದುರ್ಗ 7, ದಕ್ಷಿಣ ಕನ್ನಡ 74, ದಾವಣಗೆರೆ 6, ಧಾರವಾಡ 17, ಗದಗ 5, ಹಾಸನ 24, ಹಾವೇರಿ 4, ಕಲಬುರಗಿ 129, ಕೊಡಗು 19, ಕೋಲಾರ 7, ಕೊಪ್ಪಳ 8, ಮಂಡ್ಯ 11, ಮೈಸೂರು 100, ರಾಯಚೂರು 14, ರಾಮನಗರ 3, ಶಿವಮೊಗ್ಗ 23, ತುಮಕೂರು 40, ಉಡುಪಿ 28, ವಿಜಯಪುರ 12, ಯಾದಗಿರಿಯಲ್ಲಿ 2 ಪ್ರಕರಣಗಳು ಪತ್ತೆಯಾಗಿವೆ.











Click it and Unblock the Notifications