ಯಾದಗಿರಿ: ಕಾಲು ಜಾರಿ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕಿಯರು ಸಾವು

Posted By:
Subscribe to Oneindia Kannada

ಯಾದಗಿರಿ, ಮೇ 12 : ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕಿಯರು ಸಾವನ್ನಪ್ಪಿದ ದಾರುಣ ಘಟನೆ ಶುಕ್ರವಾರ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಬಿರನಕಲ್ ಗ್ರಾಮದಲ್ಲಿ ನಡೆದಿದೆ.

ಶರಣಮ್ಮ (10) ಹಾಗೂ ನಾಗಮ್ಮ (11) ಮೃತ ಬಾಲಕಿಯರು. ಬಿರನಕಲ್ ಗ್ರಾಮದ ಹೊರ ಭಾಗದಲ್ಲಿ ಬಾಲಕಿಯರು ನೀರು ಕುಡಿಯಲು ಹೊಲದಲ್ಲಿನ ಕೃಷಿ ಹೊಂಡಕ್ಕಿಳಿದಾಗ ಕಾಲು ಜಾರಿ ಬಿದ್ದು ಈ ಅವಘಡ ಸಂಭವಿಸಿದೆ. ಈ ಬಗ್ಗೆ ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2 girls dies after falling into a pond in Beranakal Yadgir district

ಜೆಸಿಬಿ ಹರಿದು ಮಗು ಸಾವು: ಬಾಗಲಕೋಟೆಯ ಮುಧೋಳ ನಗರದ ಹೌಸಿಂಗ್ ಕಾಲೋನಿಯಲ್ಲಿ ಜೆಸಿಬಿ ಹರಿದು 1 ವರ್ಷ 4 ತಿಂಗಳ ಕೀರ್ತಿ ಎನ್ನುವ ಮಗು ಸಾವನ್ನಪ್ಪಿದೆ.

ಬಿಸಿಲಿನ ಝಳಕ್ಕೆ ಮರದ ಕೆಳಗೆ ಮಲಗಿಸಿದ್ದ ಸಂದರ್ಭದಲ್ಲಿ ಮಗುವಿನ ಮೇಲೆ ಜೆಸಿಬಿ ಹರಿದಿದೆ. ಈ ಬಗ್ಗೆ ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Two girls dead after falling into a agriculture pond in Beranakal Yadgir district, on May 12.
Please Wait while comments are loading...