ತ್ರಿಬಲ್ ರೈಡಿಂಗ್ ತಂದ ಆಪತ್ತು: ಸವಾರರಿಬ್ಬರು ಸಾವು, ಓರ್ವನ ಸ್ಥಿತಿ ಗಂಭೀರ

Posted By:
Subscribe to Oneindia Kannada

ರಾಯಚೂರು, ಮಾರ್ಚ್. 06 : ಸಿಂಧನೂರು ತಾಲೂಕಿನ ಮೂರು ಮೈಲ್ ಕ್ಯಾಂಪ್ ಬಳಿ ಮಂಗಳವಾರ ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು ಇನ್ನೋರ್ವ ಸವಾರನಿಗೆ ಗಂಭೀರ ಗಾಯಗಳಾಗಿವೆ.

ಸಿಂಧನೂರು ನಗರದ ಮಹಿಬೂಬಾ ಕಾಲೋನಿಯ ಮಾರುತಿ(26) ಮತ್ತು ಆದೇಶ್(21) ಮೃತ ದುರ್ದೈವಿಗಳು. ಇನ್ನೋರ್ವ ಆಂಜನೇಯ ಎಂಬವರಿಗೆ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

2 dead, 1 injured after collision between Lorry and bike at Sindhanur Raichur

ಸಿಂಧನೂರಿನಿಂದ ಮೂರು ಮೈಲ್ ಕ್ಯಾಂಪ್ ಗೆ ಮೂವರು ಒಂದೇ ಬೈಕ್ ನಲ್ಲಿ ತೆರಳುತ್ತಿದ್ದಾಗ ಎದುರಿಗೆ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.

ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿ ಹಾಗೂ ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Two persons died on spot when a lorry collided with Bike at 3 Mail Camp,Sindhanu Raichur district on March 07. Sindhanur city police have registered a case.
Please Wait while comments are loading...