ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಧನದಿಂದ ಕಾರ್ಯಕರ್ತರನ್ನು ಬಿಡಿಸಿಕೊಂಡು ಹೋದ ರಾಜ್ಯ ಕಾಂಗ್ರೆಸ್ ನಾಯಕರು!

|
Google Oneindia Kannada News

ಬೆಂಗಳೂರು, ಆ. 25: ತಾಲಿಬಾನ್ ಭಯೋತ್ಪಾದಕರು ಅಫಘಾನಿಸ್ತಾನದಲ್ಲಿ ಆತಂಕ ಹುಟ್ಟಿಹಾಕಿದ್ದು, ಭಾರತದಲ್ಲಿ ಮತ್ತೊಂದು ರೀತಿಯ ಕಾಟವನ್ನು ಕೊಡುತ್ತಿದ್ದಾರೆ. ತಾಲಿಬಾನಿ ಭಯೋತ್ಪಾದಕರನ್ನು ವಿರೋಧಿಸಿ ರಾಜ್ಯದ ಜನಪ್ರತಿನಿಧಿಗಳು ಕೊಡುತ್ತಿರುವ ಹೇಳಿಕೆಗಳು ಸಮಾಜದಲ್ಲಿ ಶಾಂತಿ ಕದಡುವಂತಿವೆ. ಅತಿರೇಕದ ವರ್ತನೆಯಿಂದ ಹಲವು ಬೆಳವಣಿಗೆಗಳಾಗುತ್ತಿವೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರನ್ನು ವಿಧಾನಸೌಧ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಅದಕ್ಕೆ ಪರೋಕ್ಷವಾಗಿ ಕಾರಣವಾಗಿರುವುದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅತಿರೇಕದ ಹೇಳಿಕೆ. ಆ ಅತಿರೇಕದ ಹೇಳಿಕೆಗೆ ಕಾಂಗ್ರೆಸ್ ಕಾರ್ಯಕರ್ತರು ಮತ್ತೂ ಅತಿರೇಕದ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಶಾಸಕ ಯತ್ನಾಳ್ ಕೊಠಡಿಗೆ ಭಿತ್ತಿಪತ್ರ ಅಂಟಿಸಿದ್ದ ಪ್ರಕರಣಕ್ಕೆ ತಿರುವು, ಇಬ್ಬರ ಬಂಧನ!ಶಾಸಕ ಯತ್ನಾಳ್ ಕೊಠಡಿಗೆ ಭಿತ್ತಿಪತ್ರ ಅಂಟಿಸಿದ್ದ ಪ್ರಕರಣಕ್ಕೆ ತಿರುವು, ಇಬ್ಬರ ಬಂಧನ!

ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ವಿಧಾನಸೌಧದ ಪೊಲೀಸರು ಇಬ್ಬರು ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಇದೇ ಸಂದರ್ಭದಲ್ಲಿ ವಿಧಾನಸೌಧ ಪೊಲೀಸ್ ಠಾಣೆಗೆ ಕಾಂಗ್ರೆಸ್ ನಾಯಕರು ಭೇಟಿ ಕೊಟ್ಟಿದ್ದಾರೆ.

ಯತ್ನಾಳ್ ಮೇಲೆ ಸಲೀಂ ಅಹ್ಮದ್ ಆಕ್ರೋಶ

ಯತ್ನಾಳ್ ಮೇಲೆ ಸಲೀಂ ಅಹ್ಮದ್ ಆಕ್ರೋಶ

"ಕಾಂಗ್ರೆಸ್ ನಾಯಕರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ವಿಧಾನಸೌಧದ ಪೊಲೀಸಾ ಠಾಣೆ ಬಳಿ ಆಗ್ರಹಿಸಿದ್ದಾರೆ.

ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪ್ರತಿಭಟನೆ ಮಾಡಿದ್ದ ಕಾರ್ಯಕರ್ತರು ಪೊಲೀಸರ ವಶದಲ್ಲಿದ್ದಾರೆ. ಆ ಕಾರಣಕ್ಕೆ ವಿಧಾನಸೌಧ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಧ್ಯಮಗಳಿಗೆ ಸಲೀಂ ಅಹ್ಮದ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. "ಯತ್ನಾಳ್ ಮಾತುಗಳು, ವ್ಯಕ್ತಿತ್ವ ಹಾಗೂ ಬಿಜೆಪಿಯ ಮನಸ್ಥಿತಿಯನ್ನು ತೋರಿಸುತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರ್ಯಕರ್ತರನ್ನು ಬಿಡಿಸಿಕೊಂಡು ಹೋದ ಕಾಂಗ್ರೆಸ್!

ಕಾರ್ಯಕರ್ತರನ್ನು ಬಿಡಿಸಿಕೊಂಡು ಹೋದ ಕಾಂಗ್ರೆಸ್!

'ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶಾಸಕರ ಭವನದಲ್ಲಿ ಅವರ ವಿರುದ್ಧ ಪ್ರತಿಭಟಿಸಿ ಪೋಸ್ಟರ್ ಅಂಟಿಸಲು ಮುಂದಾಗಿದ್ದರು. ಹೀಗಾಗಿ ವಿಧಾನಸೌಧ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರನ್ನು ದಸ್ತಗಿರಿ ಮಾಡಿದ್ದರು. ಹೀಗಾಗಿ ನಾವೆಲ್ಲರೂ ಹೋಗಿ ನಮ್ಮ ಕಾರ್ಯಕರ್ತರನ್ನು ಬಿಡಿಸಿಕೊಂಡು ಬಂದಿದ್ದೇವೆ" ಎಂದು ಸಲೀಂ ಅಹ್ಮದ್ ಹೇಳಿದ್ದಾರೆ.

ಬಿಜೆಪಿ ನಾಯಕರಿಗೆ ಸಲೀಂ ಅಹ್ಮದ್ ಎಚ್ಚರಿಕೆ!

ಬಿಜೆಪಿ ನಾಯಕರಿಗೆ ಸಲೀಂ ಅಹ್ಮದ್ ಎಚ್ಚರಿಕೆ!

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರವಾಗಿ ಮಂಗಳವಾರ ನಮ್ಮ ಕಾರ್ಯಕರ್ತರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರಿಗೂ ಮನವಿ ನೀಡಿದ್ದಾರೆ. ಪ್ರತಿಭಟನೆ ಮಾಡಿದವರ ವಿರುದ್ಧ ಈ ರೀತಿ ಕ್ರಮ ಕೈಗೊಂಡಿರುವ ಸರ್ಕಾರ, ಅವಹೇಳನಕಾರಿ ಹೇಳಿಕೆ ಕೊಟ್ಟವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಇಂತಹ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಮುಂದಿನ ದಿನಗಳಲ್ಲಿ ಇಂತಹ ಹೇಳಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸುತ್ತೇವೆ' ಎಂದು ಸಲೀಂ ಅಹ್ಮದ್ ಎಚ್ಚರಿಸಿದ್ದಾರೆ.

ಇದೆಲ್ಲದರ ಹಿಂದಿನ ಕಾರಣ ಏನು?

ಇದೆಲ್ಲದರ ಹಿಂದಿನ ಕಾರಣ ಏನು?

ಅಫ್ಘಾನಿಸ್ತಾನ ವಿಚಾರ ಕುರಿತು ಮಾತನಡಿದ್ದ ಬಿಜೆಪಿ ಶಾಸಕ ಯತ್ನಾಳ್, "ರಾಹುಲ್ ಗಾಂಧಿ, ಡಿ.ಕೆ. ಶಿವಕುಮಾರ್ ತಾಲಿಬಾನ್‌ಗೆ ಹುಟ್ಟಿದ್ದಾರೆ. ತಾಲಿಬಾನಿಗಳ ಬಗ್ಗೆ ರಾಹುಲ್ ಗಾಂಧಿ ಯಾಕೆ ಮಾತಾಡುತ್ತಿಲ್ಲ? ಡಿ. ಕೆ. ಶಿವಕುಮಾರ್‌, ಸಿದ್ಧರಾಮಯ್ಯ ಯಾಕೆ ಮಾತನಾಡುತ್ತಿಲ್ಲ? ದೇಶದ ಒಳಗಡೆ ಇರುವ ತಾಲಿಬಾನಿಗಳಿಗೆ ಗುಂಡು ಹಾಕಬೇಕಿದೆ. ತಾಲಿಬಾನಿಗಳು ಅಲ್ಲಿ ಗುಂಡು ಹಾಕುವ ಹಾಗೆ ಇಲ್ಲಿ, ಇವರಿಗೆ ಗುಂಡು ಹಾಕಬೇಕು. ಗುಂಡು ಹಾಕದಿದ್ದರೇ ಇವರು ದೇಶಕ್ಕೆ ಪಿಡುಗು ಆಗುತ್ತಾರೆ ಎಂದು ಶಾಸಕ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದರು.

ಅದಕ್ಕೆ ಪ್ರತಿಭಟನೆ ಮೂಲಕ ತಿರುಗೇಟು ಕೊಟ್ಟಿದ್ದ ಕಾಂಗ್ರೆಸ್ ಕಾರ್ಯಕರ್ತರು, "ನೀನು ಬಿನ್ ಲಾಡೆನ್‌ಗೆ ....ದೋನು.. ಗಾಂ...."ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳರ ಶಾಸಕರ ಭವನದ ಕೊಠಡಿಗೆ ಭಿತ್ತಿಪತ್ರ ಅಂಟಿಸಿದ್ದರು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

Recommended Video

ವಾರ್ನಿಂಗ್ ಕೊಟ್ಟು ವಿಶ್ವಮಟ್ಟದಲ್ಲಿ ಅಮೆರಿಕ ಪ್ರತಿಷ್ಠೆಯನ್ನು ಮಣ್ಣು ಮಾಡಿದ ತಾಲಿಬಾನ್ | Oneindia Kannada

English summary
2 arrested and released on bail in connection with sticking poster to MLA Basangouda Patil Yatnal room in legislature house. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X