Claire Mazumdar; ಕ್ಲೇರ್ ಮಜುಂದಾರ್ ಯಾರು? ಬಯೋಕಾನ್ ಭವಿಷ್ಯದ ನಾಯಕಿ ಪರಿಚಯ

Claire Mazumdar: ದೊಡ್ಡ ಕಂಪನಿಗಳಲ್ಲಿ ಒಂದಾಗಿರುವ 'ಜೈವಿಕ ತಂತ್ರಜ್ಞಾನ' (ಬಯೋಕಾನ್) ಕಂಪನಿಯ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಅವರು ಇತ್ತೀಚೆಗೆ ತಮ್ಮ ಕಂಪನಿಯನ್ನು ಮುನ್ನಡೆಸುವ ಉತ್ತರಾಧಿಕಾರಿ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಸಹೋದರನ ಪುತ್ರಿ (ಸೊಸೆ) ಕ್ಲೇರ್ ಮಜುಂದಾರ್ (Clair Mazumdar) ಅವರು ತಮ್ಮ ಕಂಪನಿಯನ್ನು ನಿರ್ವಹಿಸಲಿದ್ದಾರೆ ಎಂದು ಹೇಳಿದ್ದಾರೆ. ಈ ಕ್ಲೇರ್ ಮಜುಂದಾರ್ ಅವರು ಯಾರು? ಶೈಕ್ಷಣಿಕ ಹಿನ್ನೆಲೆ ಏನು, ಅವರ ಸಂಪೂರ್ಣ ವಿವರ ಇಲ್ಲಿದೆ.

ಸುಮಾರು 40 ವರ್ಷಗಳಿಂದ ಜೈವಿಕ ತಂತ್ರಜ್ಞಾನ ವಲಯದಲ್ಲಿ ಮುಂಚೂಣಿಯಲ್ಲಿರುವ ಬಯೋಕಾನ್ ಸಂಸ್ಥೆಯ ಚುಕ್ಕಾಣಿ ಈ ಕ್ಲೇರ್ ಮಜುಂದಾರ್ ಅವರು ಹಿಡಿಯಲಿದ್ದಾರೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರ ಬೀಳುತ್ತಿದ್ದಂತೆ ಅನೇಕರು ಯಾರೂ ಇವರು ಎಂದೆಲ್ಲ ಸಾಮಾಜಿಕ ಜಾಲತಾಣದಲ್ಲಿ ತಡಕಾಡಿದ್ದಾರೆ. ಅವರಿಗಾಗಿ ಕ್ಲೇರ್ ಮಜುಂದಾರ್ ಅವರ ಪ್ರೊಫೈಲ್ ಇಲ್ಲಿದೆ.

Who Is Claire Mazumdar

ಕ್ಲೇರ್ ಮಜುಂದಾರ್ ಯಾರು?

37 ವರ್ಷದ ಕ್ಲೇರ್ ಮಜುಂದಾರ್ ಅವರು, ಬಯೋಕಾನ್ ನಿಂದ ಪೋಷಿಸಲ್ಪಟ್ಟ ಬಯೋಟೆಕ್ ಸಂಸ್ಥೆಯಾದ NASDAQ ಪಟ್ಟಿ ಮಾಡಿದ ಬಿಕಾರಾ ಥೆರಪ್ಯೂಟಿಕ್ಸ್‌ನ ಸ್ಥಾಪಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿದ್ದಾರೆ. ಕಿರಣ್ ಮಜುಂದಾರ್-ಶಾ ಅವರ ಸಹೋದರ ರವಿ ಮಜುಂದಾರ್ ಮತ್ತು ಕ್ಯಾಥರೀನ್ ರೋಸೆನ್‌ಬರ್ಗ್ ದಂಪತಿಯ ಪುತ್ರಿ ಈ ಕ್ಲೇರ್.

ಬಯೋಕಾನ್‌ಗೆ ಮುಂದಿನ ಬಾಸ್ ಫಿಕ್ಸ್: ತಮ್ಮ ಉತ್ತರಾಧಿಕಾರಿಯಾಗಿ ಸೊಸೆ 'ಕ್ಲೇರ್ ಮಜುಂದಾರ್' ಹೆಸರಿಸಿದ ಕಿರಣ್ ಮಜುಂದಾರ್ ಶಾ
ಬಯೋಕಾನ್‌ಗೆ ಮುಂದಿನ ಬಾಸ್ ಫಿಕ್ಸ್: ತಮ್ಮ ಉತ್ತರಾಧಿಕಾರಿಯಾಗಿ ಸೊಸೆ 'ಕ್ಲೇರ್ ಮಜುಂದಾರ್' ಹೆಸರಿಸಿದ ಕಿರಣ್ ಮಜುಂದಾರ್ ಶಾ

ಜೈವಿಕ ತಂತ್ರಜ್ಞಾನ ತಜ್ಞೆಯೂ ಆಗಿರುವ ಕ್ಲೇರ್ ಮಜುಂದಾರ್ 2018 ರಿಂದ ಬಿಕಾರಾ ಸಂಸ್ಥೆ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಅಲ್ಲಿಂದ 2024 ರಲ್ಲಿ ಕಂಪನಿಯನ್ನು NASDAQ ನ ಪಟ್ಟಿಯಲ್ಲಿ ಸೇರುವವರೆಗೂ ಸಮರ್ಥವಾಗಿ ನಿರ್ವಹಿಸಿಕೊಂಡು ಬಂದಿದ್ದಾರೆ. ಅಲ್ಲಿಂದ ಕಂಪನಿಗೆ 800 ಮಿಲಿಯನ್‌ಗಿಂತಲೂ ಹೆಚ್ಚಿನ ಮೌಲ್ಯ ಸಾಧಿಸುವವರಿಗೂ ನಿಭಾಯಿಸಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಅದರ ಬಂಡವಾಳ 1.6 ಶತಕೋಟಿಯಷ್ಟಿದೆ.

ತಲೆ ಮತ್ತು ಕುತ್ತಿಗೆ ಕ್ಯಾನ್ಸರ್‌ಗಳನ್ನು ಗುರಿಯಾಗಿಸಿ ಬೈಫಂಕ್ಷನಲ್ ಆಂಟಿಬಾಡಿ ಚಿಕಿತ್ಸೆ ನೀಡುವುದು ಬಿಕಾರಾ ಸಂಸ್ಥೆಯ ಅವರ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದು. ಅದು ಸದ್ಯ ಜಾಗತಿಕ ಕ್ಲಿನಿಕಲ್ ಪ್ರಯೋಗಗಳಿಗೆ ಒಳಗಾಗುತ್ತಿದೆ. ಇದು ಜಾಗತಿಕ ಬಯೋಟೆಕ್ ಕ್ಷೇತ್ರದಲ್ಲಿ ಕ್ಲೇರ್ ಅವರ ನಾಯಕತ್ವದ ಸಾಮರ್ಥ್ಯಕ್ಕೆ ಪುರಾವೆಯಾಗಿದೆ ಎಂದು ಇತ್ತೀಚೆಗೆ ಕಿರಣ್ ಮಜುಂದಾರ್ ಶಾ ಅವರು ಉಲ್ಲೇಖಿಸಿದ್ದರು.

ಎರಡು ಪದವಿ, ಜೀವಶಾಸ್ತ್ರದಲ್ಲಿ ಪಿಎಚ್‌ಡಿ

ಕ್ಲೇರ್ ಮಜುಂದಾರ್ ಅವರು ಶೈಕ್ಷಣಿಕವಾಗಿಯು ಮುಂದಿದ್ದಾರೆ. ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಜೈವಿಕ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ಸ್ಟ್ಯಾನ್‌ಫೋರ್ಡ್ ಗ್ರಾಜುಯೇಟ್ ಸ್ಕೂಲ್ ಆಫ್ ಬ್ಯುಸಿನೆಸ್‌ನಿಂದ ಎಂಬಿಎ ಪದವಿ ಪಡೆದಿರುವ ಅವರು, ಸ್ಟ್ಯಾನ್‌ಫೋರ್ಡ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನಿಂದ ಕ್ಯಾನ್ಸರ್ ಜೀವಶಾಸ್ತ್ರದಲ್ಲಿ ಪಿಎಚ್‌ಡಿ ಸಹ ಮಾಡಿದ್ದಾರೆ.

ಕ್ಲೇರ್ ವೃತ್ತಿ ಅನುಭವ

ಬಿಕಾರಾ ಸಂಸ್ಥೆ ಸ್ಥಾಪನೆಗೆ ಮುನ್ನ ಅವರು ಥರ್ಡ್ ರಾಕ್ ವೆಂಚರ್ಸ್ ಮತ್ತು ರಿಯೋಸ್ ಮೆಡಿಸಿನ್ಸ್‌ನಲ್ಲಿ ಕೆಲಸ ಮಾಡಿದ ಅನುಭವ ಇದೆ. ಅಲ್ಲಿಯೇ ಅವರು ಬಯೋಟೆಕ್ ಕಂಪನಿ ರಚನೆ ಮತ್ತು ಕಾರ್ಯತಂತ್ರದ ಪಾಲುದಾರಿಕೆಯ ಭಾಗವಾಗಿದ್ದಾರೆ. ಇದರೊಂದಿಗೆ ಕ್ಲೇರ್ ರಿಲೇ ಥೆರಪ್ಯೂಟಿಕ್ಸ್ ಮತ್ತು ನೂರಾ ಹೆಲ್ತ್‌ನ ಮಂಡಳಿಗಳಲ್ಲಿ ಸೇವೆ ನೀಡಿದ ಅನುಭವವು ಅವರಿಗಿದೆ.

ಥಾಮಸ್ ರಾಬರ್ಟ್ಸ್ ಜತೆ ವಿವಾಹ

ವಿದ್ಯಾಭ್ಯಾಸ, ವೃತ್ತಿ ರಂಗದಲ್ಲಿ ಪಾದಾರ್ಪಣೆ ಬೆನ್ನಲ್ಲೆ ಕ್ಲೇರ್ ಅವರು ಅಮೆರಿಕದ ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆಯಲ್ಲಿ ಆಂಕೊಲಾಜಿಸ್ಟ್ ಆಗಿರುವ ಥಾಮಸ್ ರಾಬರ್ಟ್ಸ್ ಅವರನ್ನು ವರಿಸಿದ್ದಾರೆ.

ಕೀರಣ್ ಮಜುಂದಾರ್ ಶಾ ಹೇಳಿದ್ದೇನು?

ಕಂಪನಿ ಉತ್ತರಾಧಿಕಾರಿಯಾಗಿ ಕ್ಲೇರ್ ಅವರನ್ನು ಗುರುತಿಸಿದ ಬಳಿಕ ಈ ಬಗ್ಗೆ ಮಾತನಾಡಿದ ಕಿರಣ್ ಮಜುಂದಾರ್ ಶಾ ಅವರು, ಕ್ರಮೇಣ ಅವರು ಕಂಪನಿಯ ನೇತೃತ್ವ ವಹಿಸಲಿದ್ದಾರೆ. ಸದ್ಯಕ್ಕೆ ನಾನು ಸಂಪೂರ್ಣವಾಗಿ ನಾಯಕತ್ವದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನನ್ನ ಸ್ಥಾನದಲ್ಲಿನ ನಿರ್ವಹಣೆಯನ್ನು ತಕ್ಷಣವೇ ನಿಲ್ಲಿಸುವುದಿಲ್ಲ. ಕ್ಲೇರ್ ಅವರು ಹಂತ ಹಂತವಾಗಿ ನಮ್ಮ ಜಾಗ ತುಂಬಬೇಕೆಂದು ನಾನು ಬಯಸುತ್ತೇನೆ. ಬಯೋಕಾನ್ ಸಂಸ್ಥೆಯ ಏಕೈಕ ಮಾಲೀಕಳಾಗಿರುವ ನಾನು ಅದರ ಜವಾಬ್ದಾರಿಯನ್ನು ಉತ್ತಮ ಕೈಗಳಿಗೆ ನೀಡುವ ಉದ್ದೇಶ ಹೊಂದಿದ್ದೇನೆ. ನನ್ನ ಸೊಸೆ ಕ್ಲೇರ್ ಅವರನ್ನು ನನ್ನ ಉತ್ತರಾಧಿಕಾರಿಯಾಗಿ ನೋಡಲು ಇಚ್ಛಿಸಿದ್ದೇನೆ. ಏಕೆಂದರೆ ಅವರಿಗೆ ಕಂಪನಿ ನಡೆಸಬಲ್ಲ ಎಲ್ಲ ಸಾಮರ್ಥ್ಯವು ಇದೆ ಎಂದು ನಾನು ಭಾವಿಸಿದ್ದೇನೆ ಎಂದು ಅವರು ರಾಯಿಟರ್ಸ್ ಮತ್ತು ಫಾರ್ಚೂನ್ ಇಂಡಿಯಾದೊಂದಿಗೆ ಮಾತನಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+