ಮುಟ್ಟಿನ ಸಮಯದಲ್ಲಿ ಕಾಡುವ ನೋವಿಗೆ ಮಾತ್ರೆಯೇ ಪರಿಹಾರವಲ್ಲ, ಈ 5 ಯೋಗಾಸನದಿಂದಲೂ ಶಮನವಾಗುವುದು ಬಾಧೆ

ಋತುಚಕ್ರದ ಸಮಯದಲ್ಲಿ ಕಾಡುವ ನೋವು ಬಹಳ ಸಾಮಾನ್ಯವಾದ ಸಮಸ್ಯೆಯಾಗಿದೆ. ಈ ನೋವು ಗರ್ಭಾಶಯದ ಹಿಗ್ಗುವುದು ಅಥವಾ ಕುಗ್ಗುವುದರಿಂದ ಉಂಟಾಗುತ್ತದೆ. ಋತುಚಕ್ರದ ಸಮಯದಲ್ಲಿ, ದೇಹವು ಪ್ರೊಸ್ಟಗ್ಲಾಂಡಿನ್ ಎಂಬ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ಇದು ಗರ್ಭಾಶಯದ ಸ್ನಾಯುಗಳನ್ನು ಸಂಕುಚಿತಗೊಳಿಸಿ ಒಳಪದರವನ್ನು ಹೊರಹಾಕುತ್ತದೆ. ಹೀಗಾಗುವಾಗ ಹೊಟ್ಟೆ, ಸೊಂಟ ಮತ್ತು ತೊಡೆಗಳಲ್ಲಿ ಅತಿಯಾದ ನೋವನ್ನು ಉಂಟುಮಾಡುತ್ತದೆ. ಕೆಲವು ಮಹಿಳೆಯರು ಸೌಮ್ಯವಾದ ನೋವನ್ನು ಅನುಭವಿಸಿದರೆ, ಇನ್ನು ಕೆಲವರನ್ನು ತೀವ್ರವಾದ ನೋವು ಕಾಡುತ್ತದೆ. ಹೀಗೆ ಅತಿಯಾಗಿ ಕಾಡುವ ನೋವಿನ ನಿವಾರಣೆಗೆ ಅನೇಕರು ನೋವು ನಿವಾರಕಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಈ ನೋವಿಗೆ ಮಾತ್ರೆಗಳೇ ಪರಿಹಾರವಲ್ಲ. ಯೋಗದ ಕೆಲವು ಆಸನಗಳನ್ನು ಮಾಡುವ ಮೂಲಕವೂ ಈ ಬಾಧೆಯಿಂದ ಪರಿಹಾರ ಕಂಡುಕೊಳ್ಳಬಹುದು.

ಋತುಚಕ್ರದ ನೋವನ್ನು ಕಡಿಮೆ ಮಾಡಲು ಈ ಯೋಗಾಸನಗಳನ್ನು ಪ್ರಯತ್ನಿಸಿ:

1.ಬಾಲಾಸನ:

ಮುಟ್ಟಿನ ಸಮಯದ ನೋವಿಗೆ ಪರಿಹಾರವಾಗಿ ಬಾಲಾಸನ ಮಾಡಬಹುದು. ಈ ಆಸನವು ಹೊಟ್ಟೆ ಮತ್ತು ಕೆಳ ಬೆನ್ನಿನ ನೋವನ್ನು ನಿವಾರಣೆ ಮಾಡುತ್ತದೆ. ಈ ಯೋಗಾಸನ ಮಾಡಲು ಮಂಡಿಯೂರಿ ಕುಳಿತುಕೊಳ್ಳಬೇಕು. ಈಗ ಕಾಲುಗಳನ್ನು ಹಿಂದಕ್ಕೆ ನೇರವಾಗಿ ಇರುವಂತೆ ನೋಡಿಕೊಳ್ಳಬೇಕು. ನಂತರ ನಿಧಾನವಾಗಿ ಮುಂದಕ್ಕೆ ಬಾಗಿ, ನಿಮ್ಮ ತೋಳುಗಳನ್ನು ಮುಂದಕ್ಕೆ ಚಾಚಬೇಕು. ಹೀಗೆ ಮಾಡುವಾಗ ನಿಮ್ಮ ಹಣೆಯನ್ನು ನೆಲಕ್ಕೆ ತಾಗುವಂತೆ ಇರಿಸಬೇಕು. ಕೆಲವು ಸೆಕೆಂಡುಗಳ ಕಾಲ ಹಾಗೆಯೇ ಇದ್ದು ಮತ್ತೆ ಸಾಮಾನ್ಯ ಸ್ಥಿತಿಗೆ ಹಿಂತಿರುಗಬೇಕು.

Period Pain Relief Yoga Asanas

2.ಸೇತುಬಂಧಾಸನ:

ಮುಟ್ಟಿನ ಸಮಯದಲ್ಲಿ ಕಾಡುವ ನೋವು ಕಡಿಮೆ ಮಾಡಲು, ಸೇತುಬಂಧಾಸನ ಕೂಡಾ ಸಹಕಾರಿ. ಇದು ಬೆನ್ನು ನೋವನ್ನು ಕಡಿಮೆ ಮಾಡುತ್ತದೆ. ಹೊಟ್ಟೆ ಮತ್ತು ಪೆಲ್ವಿಕ್‌ ಜಾಗದಲ್ಲಿ ರಕ್ತ ಪರಿಚಲನೆ ಹೆಚ್ಚಿಸುತ್ತದೆ. ಇದು ಸ್ನಾಯುಗಳನ್ನು ಬಲಪಡಿಸುವ ಮೂಲಕ ಸೆಳೆತವನ್ನು ಕಡಿಮೆ ಮಾಡುತ್ತದೆ. ಹೀಗಾಗುವಾಗ ನೋವಿನಿಂದಲೂ ಪರಿಹಾರ ಸಿಗುತ್ತದೆ. ಈ ಆಸನವನ್ನು ಮಾಡಲು, ಯೋಗ ಮ್ಯಾಟ್‌ನಲ್ಲಿ ನಿಮ್ಮ ಬೆನ್ನಿನ ಮೇಲೆ ಮಲಗಿ. ಮೊಣಕಾಲುಗಳನ್ನು ಬಗ್ಗಿಸಿ ನಿಮ್ಮ ಪಾದಗಳನ್ನು ನೆಲದ ಮೇಲೆ ಇರಿಸಬೇಕು. ನಿಮ್ಮ ತೋಳುಗಳನ್ನು ದೇಹದ ಪಕ್ಕದಲ್ಲಿ ನೇರವಾಗಿ ಇರಿಸಿ, ಅಂಗೈಗಳು ಕೆಳಮುಖವಾಗಿರುವಂತೆ ನೋಡಿಕೊಳ್ಳಿ. ನಿಧಾನವಾಗಿ ಉಸಿರಾಡುವಾಗ, ನಿಮ್ಮ ಸೊಂಟವನ್ನು ಮೇಲಕ್ಕೆತ್ತಿ. ನಿಮ್ಮ ದೇಹವನ್ನು ಭುಜಗಳಿಂದ ಮೊಣಕಾಲುಗಳವರೆಗೆ ನೇರ ರೇಖೆಯಲ್ಲಿ ಇರಿಸಲು ಪ್ರಯತ್ನಿಸಿ. ಈ ಭಂಗಿಯಲ್ಲಿ 15-30 ಸೆಕೆಂಡುಗಳ ಕಾಲ ಹಾಗೆಯೇ ಇರಿ. ಸಾಮಾನ್ಯವಾಗಿ ಉಸಿರಾಡಿ. ಈ ಆಸನವನ್ನು 3-5 ಬಾರಿ ಪುನರಾವರ್ತಿಸಿ.

ಬೇಸಿಗೆಯಲ್ಲಿ ಶುಗರ್‌ ಹೈ ಆಗದಂತೆ ಹಣ್ಣುಗಳನ್ನು ಸೇವಿಸುವ ಸುರಕ್ಷಿತ ವಿಧಾನ ಇಲ್ಲಿದೆ
ಬೇಸಿಗೆಯಲ್ಲಿ ಶುಗರ್‌ ಹೈ ಆಗದಂತೆ ಹಣ್ಣುಗಳನ್ನು ಸೇವಿಸುವ ಸುರಕ್ಷಿತ ವಿಧಾನ ಇಲ್ಲಿದೆ

3.ಭುಜಂಗಾಸನ:

ಮುಟ್ಟಿನ ನೋವನ್ನು ಕಡಿಮೆ ಮಾಡಲು, ಭುಜಂಗಾಸನ ಕೂಡಾ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು. ಈ ಆಸನವು ಪೆಲ್ವಿಕ್‌ ಪ್ರದೇಶವನ್ನು ಹಿಗ್ಗಿಸುವ ಮೂಲಕ ಗರ್ಭಾಶಯದ ಸುತ್ತ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಹೀಗಾದಾಗ ನೋವು ಕಡಿಮೆಯಾಗುತ್ತದೆ. ಈ ಆಸನವನ್ನು ಮಾಡಲು, ನಿಮ್ಮ ಹೊಟ್ಟೆಯ ಮೇಲೆ ಮಲಗಿ ಅಂಗೈಗಳನ್ನು ಭುಜಗಳ ಬಳಿ ನೇರವಾಗಿ ಇರಿಸಿ. ಉಸಿರಾಡುವಾಗ ನಿಧಾನವಾಗಿ ನಿಮ್ಮ ಎದೆ ಮತ್ತು ಸೊಂಟವನ್ನು ಮೇಲಕ್ಕೆತ್ತಿ. ಉಸಿರನ್ನು ಬಿಡಿ. ಈ ಆಸನವನ್ನು 5-6 ಬಾರಿ ಪುನರಾವರ್ತಿಸಿ.

Period Pain Relief Yoga Asanas

4.ಪವನಮುಕ್ತಾಸನ:

ಮುಟ್ಟಿನ ನೋವನ್ನು ನಿವಾರಿಸಲು ಪವನಮುಕ್ತಾಸನವನ್ನು ಕೂಡಾ ಪ್ರಯತ್ನಿಸಬಹುದು. ಈ ಆಸನವು ಗ್ಯಾಸ್‌ ಮತ್ತು ಹೊಟ್ಟೆ ಉಬ್ಬರವನ್ನು ಕಡಿಮೆ ಮಾಡುತ್ತದೆ. ಈ ಆಸನವನ್ನು ಮಾಡಲು, ಮೊದಲು ನಿಮ್ಮ ಬೆನ್ನಿನ ಮೇಲೆ ಮಲಗಿ. ಎರಡೂ ಕಾಲುಗಳನ್ನು ಬಗ್ಗಿಸಿ ಮತ್ತು ನಿಮ್ಮ ಮೊಣಕಾಲುಗಳನ್ನು ಎದೆಯ ಬಳಿಗೆ ತನ್ನಿ. ನಿಮ್ಮ ಕೈಗಳಿಂದ ಕಾಲುಗಳನ್ನು ಇಂಟರ್ಲಾಕ್ ಮಾಡಿಕೊಳ್ಳಿ. ಉಸಿರಾಡುವಾಗ, ನಿಮ್ಮ ಸೊಂಟವನ್ನು ಸ್ವಲ್ಪ ಮೇಲಕ್ಕೆತ್ತಿ ನಂತರ ದೇಹವನ್ನು ಸಾಮಾನ್ಯ ಸ್ಥಿತಿಗೆ ಹಿಂತಿರುಗಿಸಿ. ಈ ಆಸನವನ್ನು ಕೂಡಾ 3-5 ಬಾರಿ ಪುನರಾವರ್ತಿಸಿ.

ಬೇಸಿಗೆಯ ಶಾಖದಿಂದ ಉಂಟಾಗುವ ಹೊಟ್ಟೆನೋವಿಗೆ ಪರಿಣಾಮಕಾರಿ ಮನೆ ಮದ್ದುಗಳು
ಬೇಸಿಗೆಯ ಶಾಖದಿಂದ ಉಂಟಾಗುವ ಹೊಟ್ಟೆನೋವಿಗೆ ಪರಿಣಾಮಕಾರಿ ಮನೆ ಮದ್ದುಗಳು

5.ತಿತಿಲಿ ಆಸನ:

ಋತುಚಕ್ರದ ಸಮಯದಲ್ಲಿ ತೀವ್ರ ನೋವನ್ನು ನೀವು ಅನುಭವಿಸುತ್ತಿದ್ದರೆ, ತಿತಿಲಿ ಆಸನ ಅಥವಾ ಚಿಟ್ಟೆ ಭಂಗಿಯನ್ನು ಪ್ರಯತ್ನಿಸಬಹುದು. ಈ ಭಂಗಿಯು ಪೆಲ್ವಿಕ್ ಪ್ರದೇಶದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸಿ, ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಹೀಗಾಗುವಾಗ ಸೆಳೆತ ಮತ್ತು ನೋವು ಕೂಡಾ ಕಡಿಮೆಯಾಗುತ್ತದೆ. ಈ ಭಂಗಿಯನ್ನು ಮಾಡಲು, ನೆಲದ ಮೇಲೆ ನೇರವಾಗಿ ಕುಳಿತು ಎರಡೂ ಕಾಲುಗಳನ್ನು ನಿಮ್ಮ ಮುಂದೆ ಚಾಚಿ. ಎರಡೂ ಕಾಲುಗಳನ್ನು ಬಗ್ಗಿಸಿ ಮತ್ತು ಪಾದಗಳ ಅಡಿಭಾಗವನ್ನು ಒಟ್ಟಿಗೆ ತನ್ನಿ. ಹಿಮ್ಮಡಿಗಳನ್ನು ನಿಮ್ಮ ದೇಹಕ್ಕೆ ಸಾಧ್ಯವಾದಷ್ಟು ಹತ್ತಿರ ತನ್ನಿ. ಪಾದಗಳನ್ನು ಎರಡೂ ಕೈಗಳಿಂದ ಹಿಡಿದು ಬೆನ್ನುಮೂಳೆಯನ್ನು ನೇರವಾಗಿ ಇರಿಸಿ. ಈಗ, ನಿಧಾನವಾಗಿ ನಿಮ್ಮ ಮೊಣಕಾಲುಗಳನ್ನು ಮೇಲಕ್ಕೆ ಮತ್ತು ಕೆಳಕ್ಕೆ ಸರಿಸಿ. ಚಿಟ್ಟೆ ರೆಕ್ಕೆಗಳನ್ನು ಬಡಿಯುವಂತೆ ಎರಡೂ ಕಾಲುಗಳನ್ನು ಅಲುಗಾಡಿಸಿ. ಸಾಮಾನ್ಯ ಉಸಿರಾಟವನ್ನು ಕಾಪಾಡಿಕೊಳ್ಳುತ್ತಾ 1-2 ನಿಮಿಷಗಳ ಕಾಲ ಇದನ್ನು ಮುಂದುವರೆಸಿ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+