ತಲೆನೋವು, ಚರ್ಮದ ಸಮಸ್ಯೆಗಳ ಹಿಂದೆ ಯಾವ ಗ್ರಹದ ಪ್ರಭಾವವಿರುತ್ತದೆ? ಜ್ಯೋತಿಷ್ಯದಲ್ಲಿದೆ ಉತ್ತರ ಮತ್ತು ಪರಿಹಾರ

ಕೆಲವರಿಗೆ ನಿರಂತರ ತಲೆನೋವು ಕಾಡುತ್ತಿರುತ್ತದೆ. ವೈದ್ಯಕೀಯವಾಗಿ ಏನೂ ಸಮಸ್ಯೆ ಇಲ್ಲದಿದ್ದರೂ ತಲೆ ನೋವು ಮಾತ್ರ ಬಾಧಿಸುತ್ತಲೇ ಇರುತ್ತದೆ. ಇನ್ನು ಕೆಲವರಿಗೆ ನಿಂತರೆ ಕೂತರೆ ಗಾಯಗಳಾಗುತ್ತಿರುತ್ತದೆ. ಅನೇಕರು ಇದನ್ನು ನಿರ್ಲಕ್ಷಿಸಿ ಬಿಡುತ್ತಾರೆ. ಆದರೆ ಜ್ಯೋತಿಷ್ಯದ ಪ್ರಕಾರ, ಕೆಲವು ಗ್ರಹಗಳ ಪ್ರಭಾವದ ಕಾರಣದಿಂದಲೇ ಈ ರೀತಿಯ ಸಮಸ್ಯೆಗಳು ಕಾಡುತ್ತಿರುತ್ತದೆ. ವಿಶೇಷವಾಗಿ ಮಂಗಳ ಗ್ರಹವು ದುರ್ಬಲವಾಗಿದ್ದಾಗ ಅಥವಾ ಜಾತಕದಲ್ಲಿ ಮಂಗಳ ನಕಾರಾತ್ಮಕ ಸ್ಥಾನದಲ್ಲಿದ್ದಾಗ ಈ ಸಮಸ್ಯೆ ಕಾಡುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಂಗಳ ಗ್ರಹವು ಶಕ್ತಿ, ಧೈರ್ಯ ಮತ್ತು ರಕ್ತ ಸಂಬಂಧಿತ ಅಂಶಗಳನ್ನು ಸಂಕೇತಿಸುತ್ತದೆ. ಹಾಗಾಗಿಯೇ ಅದು ದೇಹ ಮತ್ತು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ.

ಸಣ್ಣ ಪುಟ್ಟ ವಿಷಯಗಳಿಗೂ ಕಿರಿಕಿರಿ:

ಮಂಗಳ ದೋಷ ಇರುವವರಲ್ಲಿ ಕೆಲವು ಲಕ್ಷಣಗಳನ್ನು ಸುಲಭವಾಗಿ ಗಮನಿಸಬಹುದು. ಅವರು ಯಾವುದೇ ಕಾರಣವಿಲ್ಲದೆ ಅಥವಾ ಸಣ್ಣ ಪುಟ್ಟ ವಿಷಯಗಳಿಗೂ ಕಿರಿಕಿರಿಗೊಳ್ಳುತ್ತಿರುತ್ತಾರೆ. ಸುಖಾ ಸುಮ್ಮನೆ ಎಲ್ಲದ್ದಕ್ಕೂ ಕೋಪ ಮಾಡಿಕೊಳ್ಳುವುದು, ನಾಗಬಹುದು ಎಂದು ಯೋಚಿಸದೆ ನಿರ್ಧಾರಗಳನ್ನು ತೆಗೆದುಕೊಂಡು ಬಿಡುತ್ತಾರೆ. ಇವರ ವರ್ತನೆಯೇ ವಿಚಿತ್ರ ಎಂದೆನಿಸುವ ಮಟ್ಟಕ್ಕೆ ಕೆಲವೊಮ್ಮೆ ನಡೆದುಕೊಳ್ಳುತ್ತಾರೆ. ಪದೇ ಪದೇ ಬೀಳುವುದು, ಗಾಯ ಮಾಡಿಕೊಳ್ಳುವುದು ಅಥವಾ ಸಣ್ಣ ಸಣ್ಣ ಅಪಘಾತಗಳಿಗೆ ಒಳಗಾಗುತ್ತಲೇ ಇರುವುದು ಮಂಗಳ ಗ್ರಹ ದೋಷದ ಪರಿಣಾಮ ಎಂದು ಹೇಳಲಾಗುತ್ತದೆ.

Astrology and Health

ದೈಹಿಕವಾಗಿಯೂ ಕೆಲವು ಬದಲಾವಣೆ:

ಮಂಗಳ ಗ್ರಹ ದೋಷವಿದ್ದರೆ ದೈಹಿಕವಾಗಿಯೂ ಕೆಲವು ಬದಲಾವಣೆಗಳನ್ನು ಕಾಣಬಹುದು. ನಿರಂತರ ಕಾಡುವ ತಲೆನೋವು, ಗಂಟಲು ಸಮಸ್ಯೆಗಳು, ಮೊಡವೆಗಳು ಅಥವಾ ಚರ್ಮದ ಮೇಲೆ ಹುಣ್ಣುಗಳು ಇವರಲ್ಲಿ ಸಾಮಾನ್ಯ. ಕೆಲವರನ್ನು ರಕ್ತ ಸಂಬಂಧಿತ ಸಮಸ್ಯೆಗಳೂ ಕಾಡಬಹುದು. ಮಹಿಳೆಯರಲ್ಲಿ ಈ ಪರಿಣಾಮವು ಹೆಚ್ಚು ಸೂಕ್ಷ್ಮವಾಗಿರಬಹುದು. ಕೆಲವು ಸಂದರ್ಭಗಳಲ್ಲಿ ಅತಿಯಾದ ಆಯಾಸ, ಶಕ್ತಿಯಿಲ್ಲದಿರುವುದು, ಅಥವಾ ಗರ್ಭಧಾರಣೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು.

ಆರ್ದ್ರ ನಕ್ಷತ್ರದಲ್ಲಿ ಬುಧ ಸಂಕ್ರಮಣ:ಈ ರಾಶಿಯವರಿಗೆ ಹರಿದು ಬರುವುದು ಧನ ಸಂಪತ್ತು
ಆರ್ದ್ರ ನಕ್ಷತ್ರದಲ್ಲಿ ಬುಧ ಸಂಕ್ರಮಣ:ಈ ರಾಶಿಯವರಿಗೆ ಹರಿದು ಬರುವುದು ಧನ ಸಂಪತ್ತು

ಮನಸ್ಸಿನ ಮೇಲೂ ಪರಿಣಾಮ:

ಮಂಗಳನ ಪ್ರಭಾವವು ಮನಸ್ಸಿನ ಮೇಲೂ ಪರಿಣಾಮ ಬೀರುತ್ತದೆ. ಇವರು ಪ್ರತಿಯೊಂದು ವಿಷಯಗಳಿಗೂ ಬಹಳ ಬೇಗನೇ ಬೇಗನೆ ಪ್ರತಿಕ್ರಿಯಿಸುತ್ತಾರೆ. ಮುಂದೆ ಹಿಂದೆ ಯೋಚನೆ ಮಾಡದೆ ಮಾತನಾಡುತ್ತಾರೆ. ನಂತರ ತಾವಾಡಿರುವ ಮಾತಿನ ಬಗ್ಗೆ ವಿಷಾದಿಸುತ್ತಾರೆ. ಮನೆಯಲ್ಲಿ ಅಥವಾ ಕಚೇರಿಯಲ್ಲಿ ಸಣ್ಣ ವಿಷಯಗಳಿಗೆ ವಾದಕ್ಕಿಳಿಯುತ್ತಾರೆ.

ಈ ಲಕ್ಷಣಗಳು ಕಾಣಿಸಿಕೊಂಡರೆ, ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಮತ್ತು ಅವುಗಳನ್ನು ನಿರ್ಲಕ್ಷಿಸದಿರುವುದು ಉತ್ತಮ. ಮಂತ್ರಗಳನ್ನು ಪಠಿಸುವುದು, ಉಪವಾಸ ವೃತ ಕೈಗೊಳ್ಳುವುದು, ದಾನ ಧರ್ಮ ಮಾಡುವುದು ಮುಂತಾದ ಕೆಲವು ಜ್ಯೋತಿಷ್ಯ ಪರಿಹಾರಗಳನ್ನು ಕೈಗೊಳ್ಳಬಹುದು. ಉದಾಹರಣೆಗೆ, "ಓಂ ಹ್ರೀಂ ಶ್ರೀಂ ಮಂಗಳಾಯ ನಮಃ" ಎಂಬ ಮಂತ್ರವನ್ನು ಪಠಿಸುವುದು, ಮಂಗಳವಾರ ಉಪವಾಸ ವೃತ ಮಾಡುವುದು ಮತ್ತು ಹನುಮಾನ್ ಪೂಜೆ ಮಾಡುವುದು ಒಳ್ಳೆಯದು. ಅಲ್ಲದೆ, ಕೆಂಪು ಬಟ್ಟೆ, ದ್ವಿದಳ ಧಾನ್ಯಗಳು ಅಥವಾ ಬೆಲ್ಲವನ್ನು ದಾನ ಮಾಡುವುದರಿಂದ ಮಂಗಳ ದೋಷ ನಿವಾರಿಸಬಹುದು.

ದುರಹಂಕಾರಿಗಳಂತೆ ಈ ರಾಶಿಯವರು!ತಾವು ಹೇಳಿದ್ದೇ ನಡೆಯಬೇಕು ಎನ್ನುವ ಹಠಮಾರಿಗಳು ಇವರು!
ದುರಹಂಕಾರಿಗಳಂತೆ ಈ ರಾಶಿಯವರು!ತಾವು ಹೇಳಿದ್ದೇ ನಡೆಯಬೇಕು ಎನ್ನುವ ಹಠಮಾರಿಗಳು ಇವರು!

ನಾವು ಈ ವಿಷಯಗಳನ್ನು ನಂಬಿಕೆಯ ದೃಷ್ಟಿಕೋನದಿಂದ ನೋಡಿದರೂ ಜೀವನಶೈಲಿಯ ಬದಲಾವಣೆಗಳನ್ನು ಮಾಡುವ ಮೂಲಕ ನಮ್ಮ ಆರೋಗ್ಯ ಮತ್ತು ಮನಸ್ಸಿನ ಶಾಂತಿಯನ್ನು ಸುಧಾರಿಸಬಹುದು.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+