ಕರ್ನಾಟಕದಲ್ಲಿ ಕೊವಿಡ್-19 ಸ್ಫೋಟ: 1925 ಮಂದಿಗೆ ಅಂಟಿದ ಮಹಾಮಾರಿ!
ಬೆಂಗಳೂರು, ಜುಲೈ.05: ಕೊರೊನಾವೈರಸ್ ಎಂಬ ಹೆಸರು ಕೇಳಿದರೆ ಸಾಕು ಕನ್ನಡಿಗರು ನಿದ್ದೆಯಲ್ಲೂ ಬೆಚ್ಚಿ ಬೀಳುವಂತಾ ವಾತಾವರಣ ಸೃಷ್ಟಿಯಾಗುತ್ತಿದೆ. ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೊವಿಡ್-19 ಸೋಂಕಿತರ ಸಂಖ್ಯೆಯು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.
ಕರ್ನಾಟಕದಲ್ಲಿ ಲಾಕ್ ಡೌನ್ ದಿನವಾಗಿದ್ದ ಭಾನುವಾರವೂ ಕೊರೊನಾವೈರಸ್ ಮಹಾಸ್ಫೋಟವೇ ಸಂಭವಿಸಿದೆ. ಕಳೆದ 24 ಗಂಟೆಗಳಲ್ಲೇ 1925 ಮಂದಿಗೆ ಕೊರೊನಾವೈರಸ್ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆಯು ಬರೋಬ್ಬರಿ 23474ಕ್ಕೆ ಏರಿಕೆಯಾಗಿದೆ.

ಕೊರೊನಾವೈರಸ್ ಮಹಾಮಾರಿಗೆ ಒಂದಿ ದಿನ 38 ಮಂದಿ ಪ್ರಾಣ ಬಿಟ್ಟಿದ್ದಾರೆ. ಕರ್ನಾಟಕದಲ್ಲಿ ಒಟ್ಟು 373 ಜನರು ಕೊವಿಡ್-19 ಸೋಂಕಿನಿಂದ ಉಸಿರು ಚೆಲ್ಲಿದ್ದಾರೆ. 603 ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಬೆಂಗಳೂರಿನಲ್ಲಿ ನಿಲ್ಲದ ಕೊರೊನಾವೈರಸ್ ಅಟ್ಟಹಾಸ:
ಬೆಂಗಳೂರಿನಲ್ಲಿ ಕೊರೊನಾವೈರಸ್ ಅಟ್ಟಹಾಸ ಮುಂದುವರಿದಿದೆ. ಒಂದೇ ದಿನ ಸಿಲಿಕಾನ್ ಸಿಟಿಯಲ್ಲಿ ಮಹಾಮಾರಿಗೆ 16 ಮಂದಿ ಪ್ರಾಣ ಬಿಟ್ಟಿದ್ದು, 1235 ಮಂದಿಗೆ ಕೊವಿಡ್-19 ಸೋಂಕು ಅಂಟಿಕೊಂಡಿದೆ. ಬೆಂಗಳೂರು ನಗರವೊಂದರಲ್ಲೇ ಒಟ್ಟು 145 ಜನರು ಕೊರೊನಾವೈರಸ್ ನಿಂದ ಉಸಿರು ಚೆಲ್ಲಿದ್ದಾರೆ. ದಕ್ಷಿಣ ಕನ್ನಡ 147, ಬಳ್ಳಾರಿ 90, ವಿಜಯಪುರ 51, ಕಲಬುರಗಿ 49, ಉಡುಪಿ 45, ಧಾರವಾಡ 45, ಬೀದರ್ 29, ಮೈಸೂರು 25, ಕೊಪ್ಪಳ 22, ಉತ್ತರ ಕನ್ನಡ 21, ಚಾಮರಾಜನಗರ 19, ಹಾವೇರಿ 15, ಹಾಸನ 14, ಚಿಕ್ಕಬಳ್ಳಾಪು 15, ತುಮಕೂರು 15, ಕೋಲಾಪ 13, ಬೆಳಗಾವಿ 11, ದಾವಣಗೆರೆ 11 ರಾಯಚೂರು ಹಾಗೂ ಮಂಡ್ಯದಲ್ಲಿ 10 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದೆ.












Click it and Unblock the Notifications