17 ಜನ ಶಾಸಕರು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆ ಹೋಗಲ್ಲ: ಕೆ.ಸಿ.ನಾರಾಯಣ ಗೌಡ
ಮೈಸೂರು,ಡಿಸೆಂಬರ್ 12 : ಯಾವುದೇ ಕಾರಣಕ್ಕೂ 17 ಜನ ಶಾಸಕರು ಬಿಜೆಪಿ ತೊರೆದು ಮತ್ತೆ ಕಾಂಗ್ರೆಸ್ ಗೆ ಮರಳುವುದಿಲ್ಲ ಎಂದು ಸಚಿವ ಕೆ.ಸಿ.ನಾರಾಯಣ ಗೌಡ ಹೇಳಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಸೋಮವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, 17 ಜನರನ್ನ ಬಿಜೆಪಿ ಹೊತ್ಕೊಂಡ್ ಹೋಗಿಲ್ಲ, ನರೇಂದ್ರ ಮೋದಿ ಅವರ ಕೆಲಸ ನೋಡಿ, ನಮ್ಮಲ್ಲೂ ಬಿಜೆಪಿ ಸರ್ಕಾರ ಬಂದ್ರೆ ಉತ್ತಮ ಅನುದಾನ ಹಾಗೂ ಕೆಲಸಗಳು ಆಗುತ್ತವೆ. ಕೊರೋನಾದಲ್ಲಿಯೂ ಉತ್ತಮವಾಗಿ ಕೆಲಸಗಳು ಆಗಿವೆ.
ನಾವು ಬಿಜೆಪಿ ಪಕ್ಷ ಸೇರ್ಪಡೆಯಾದ ನಂತರ ನಮ್ಮನ್ನ ಚೆನ್ನಾಗಿ ನಡೆಸಿಕೊಂಡಿದ್ದಾರೆ. ನಮಗೆಲ್ಲ ಮಂತ್ರಿ ಸ್ಥಾನವನ್ನ ಕೊಟ್ಟು ಸ್ವಾತಂತ್ರವಾಗಿ ಕೆಲಸ ಮಾಡಲು ಅವಕಾಶ ದೊರಕಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಇಲ್ಲ ಎಂದರು.

2023 ರ ವಿಧಾನ ಸಭಾ ಚುನಾವಣೆಯಲ್ಲಿ ನಮ್ಮ ಬಿಜೆಪಿ ಪಕ್ಷ ಮತ್ತೆ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲಿದೆ. ಮಂಡ್ಯ ಜಿಲ್ಲೆಯಲ್ಲಿ ಜನಸಂಕಲ್ಪ ಯಾತ್ರೆ ನಡೆಯಲಿದ್ದು, ಈಗಾಗಲೇ ಶ್ರೀರಂಗಪಟ್ಟಣದ ಸಚ್ಚಿದಾನಂದ ಬಿಜೆಪಿ ಸೇರಿದ್ದಾರೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಮಂಡ್ ಜಿಲ್ಲೆಯ ನಾಯಕರು ಬಿಜೆಪಿಯನ್ನ ಸೇರಲಿದ್ದಾರೆ ಎಂದರು.
ಇನ್ನೂ ಗುಜರಾತ್ ರಾಜ್ಯದಂತೆ ನಮ್ಮ ರಾಜ್ಯದಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಹಿಮಾಚಲ ಪ್ರದೇಶದಲ್ಲಿ ಕೆಲವೊಂದು ಸ್ಥಳೀಯ ಕಾರಣಗಳಿಂದ ಬಿಜೆಪಿಗೆ ಸೋಲಾಗಿದೆ ಎಂದು ತಿಳಿಸಿದರು.
ರೌಡಿ ಶೀಟರ್ ಬಿಜೆಪಿ ಸೇರ್ಪಡೆ ವಿಚಾರವಾಗಿ ಮಾತನಾಡಿ, ಗೂಂಡಾಗಳನ್ನು ಹುಟ್ಟು ಹಾಕಿದ್ದೇ ಕಾಂಗ್ರೆಸ್ . ಕಾಂಗ್ರೆಸ್ ನಲ್ಲಿ ಎಷ್ಟು ಜನ ಗೂಂಡಾಗಳು ಇಲ್ವಾ. ಕಾಂಗ್ರೆಸ್ಸ ನವ್ರೇ ಟ್ರೈನಿಂಗ್ ಕೊಟ್ಟಿದ್ದು. ಕಾಂಗ್ರೆಸ್ ನವರು ಗೂಂಡಾಗಳು ಎಂದು ಕರೆಯುವವರು ಮೊದಲು ಕಾಂಗ್ರೆಸ್ ನಲ್ಲೆ ಇದ್ದರು. ಈಗ ಬಿಜೆಪಿ ಸೇರ್ಪಡೆ ಆಗಲು ಮುದಾಗಿದ್ದರಿಂದ ಅವರನ್ನ ಗೂಂಡಾಗಳೆಂದು ಕಾಂಗ್ರೆಸ್ ಕರೆಯುತ್ತಿದೆ ಎಂದು ಕಿಡಿಕಾರಿದ್ರು.
ಬಿಜೆಪಿಯಲ್ಲಿ ತ್ಯಾಗಿಗಳು, ಆರ್ ಎಸ್ ಎಸ್ ಹಿನ್ನೆಲೆ ಉಳ್ಳವರು ಇದ್ದಾರೆ ಹೊರೆತು ಕೈಯಲ್ಲಿ ಮಚ್ಚು ಹಿಡಿಯುವವರು ಬಿಜೆಪಿಯಲ್ಲಿ ಇಲ್ಲ. ಅವರು ಯಾವ ಪಕ್ಷದಲ್ಲಿ ಇದ್ದಾರೆ ಎಂಬುದು ಎಲ್ಲಾರಿಗೂ ಗೊತ್ತು ಎಂದು ಕಾಂಗ್ರೆಸ್ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ದೇಶದಲ್ಲಿ ಮೂಲೆಗುಂಪಾಗಿರುವ ಪಕ್ಷ : ಆರ್.ಅಶೋಕ್
ಕಾಂಗ್ರೆಸ್ ದೇಶದಲ್ಲಿ ಮೂಲೆಗುಂಪಾಗಿರುವ ಪಕ್ಷ ಎಂದು ಕಾಂಗ್ರೆಸ್ ವಿರುದ್ದ ಕಂದಾಅಯ ಸಚಿವ ಆರ್. ಅಶೋಕ್ ಕಿಡಿಕಾರಿದರು.
ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ಪಕ್ಷ 77 ಸ್ಥಾನಕ್ಕೆ ಕುಸಿಯಿತು. ಕಾಂಗ್ರೆಸ್ಸಿನ 15 ಜನ ಪಕ್ಷವನ್ನೆ ಬಿಟ್ಟು ಹೋದ್ರು, ಅವರ ಪಕ್ಷದಲ್ಲಿನ ಶಾಸಕರನ್ನೆ ಅವರಿಗೆ ಉಳಿಸಿಕೊಳ್ಳೋಕೆ ಯೋಗ್ಯತೆ ಇಲ್ಲ, ಇನ್ನೂ ಅಧಿಕಾರಕ್ಕೆ ಬರ್ತಾರಾ ? ಎಂದು ಪ್ರಶ್ನಿಸಿದರು.
ದೆಹಲಿಯಲ್ಲಿ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಸಭೆ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ಸಿನ ಬೀದಿ ಜಗಳ ಬೆಂಗಳೂರಿನಲ್ಲಿ ಒಂದಾಗಲ್ಲ ಅಂತ ದೆಹಲಿಗೆ ಲಿಫ್ಟ್ ಆಗಿದ್ದಾರೆ.
ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಬೀದಿ ಜಗಳ ಆಡ್ತಿದ್ರು, ಇಬ್ಬರ ಜಗಳ ಕಾಂಪ್ರಮೈಸ್ ಮಾಡೋಕೆ ಮಲ್ಲಿಕಾರ್ಜುನ್ ಖರ್ಗೆ ದೆಹಲಿಗೆ ಕರೆದಿದ್ದಾರೆ. ಮೋದಿ,ಅಮಿತ್ ಶಾ ರಾಜ್ಯಕ್ಕೆ ಬರ್ತಾರೆ ಹುಷಾರಾಗಿರಿ ಅಂತ ಮಲ್ಲಿಕಾರ್ಜುನ್ ಖರ್ಗೆ ಕಾಂಗ್ರೆಸ್ಸಿಗರಿಗೆ ಹೇಳಿದ್ದಾರೆ. ಕಾಂಗ್ರೆಸ್ಸಿಗರಿಗೆ ಈಗಾಗಲೇ ಭೀತಿ ಶುರುವಾಗಿದೆ. ಅಲ್ಲದೇ ಬಿಜೆಪಿ ಪ್ರಚಂಡ ಬಹುಮತ ಗೆಲ್ಲುತ್ತೇವೆ ಎಂದರು.












Click it and Unblock the Notifications