ಕರ್ನಾಟಕ; 24 ಗಂಟೆಯಲ್ಲಿ 1,639 ಹೊಸ ಕೋವಿಡ್ ಪ್ರಕರಣ ದಾಖಲು
ಬೆಂಗಳೂರು, ಜುಲೈ 21; ಕರ್ನಾಟಕದಲ್ಲಿ 24 ಗಂಟೆಯಲ್ಲಿ 1,639 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. 36 ಜನರು ಮೃತಪಟ್ಟಿದ್ದಾರೆ. ರಾಜ್ಯದ ಪಾಸಿಟಿವಿಟಿ ದರ ಶೇ 1.07 ಆಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ 24 ಗಂಟೆಯಲ್ಲಿ 2,214 ಜನರು ಡಿಸ್ಚಾರ್ಜ್ ಆಗಿದ್ದಾರೆ.
ರಾಜ್ಯದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 25,645. ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 2888341. ಇದುವರೆಗೂ 2826411 ಜನರು ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು ಮೃತಪಟ್ಟವರು 36,262.

30,876 ಆಂಟಿಜೆನ್, 1,21,838 ಆರ್‌ಟಿಪಿಸಿಆರ್ ಸೇರಿದಂತೆ ಒಟ್ಟು 152714 ಮಾದರಿಗಳ ಕೋವಿಡ್ ಪರೀಕ್ಷೆಗಳನ್ನು ರಾಜ್ಯದಲ್ಲಿ ನಡೆಸಲಾಗಿದೆ. ರಾಜ್ಯದಲ್ಲಿ ಇದುವರೆಗೂ 37285851 ಮಾದರಿಗಳ ಪರೀಕ್ಷೆ ಮಾಡಲಾಗಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು?; ಬೆಂಗಳೂರು ನಗರದಲ್ಲಿ 24 ಗಂಟೆಯಲ್ಲಿ 419 ಹೊಸ ಕೋವಿಡ್ ಪ್ರಕರಣ ಪತ್ತೆಯಾಗಿದೆ. ನಗರದಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 1223226. ಸಕ್ರಿಯ ಪ್ರಕರಣಗಳು 9,495.
ದಕ್ಷಿಣ ಕನ್ನಡದಲ್ಲಿ 190. ಹಾಸನ 141. ಮೈಸೂರು 160. ಉಡುಪಿ 104 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ.
ಬೆಳಗಾವಿ 61. ಚಿಕ್ಕಮಗಳೂರು 92. ಕೊಡಗು 63. ಕೋಲಾರ 35. ಮಂಡ್ಯ 60. ತುಮಕೂರು 63. ಉತ್ತರ ಕನ್ನಡ 48 ಹೊಸ ಪ್ರಕರಣ ಪತ್ತೆಯಾಗಿದೆ.
ಬಾಗಲಕೋಟೆ 3. ಬಳ್ಳಾರಿ 14. ಬೆಂಗಳೂರು ಗ್ರಾಮಾಂತರ 25. ಚಾಮರಾಜನಗರ 22. ಚಿಕ್ಕಬಳ್ಳಾಪುರ 15. ಚಿತ್ರದುರ್ಗ 29. ದಾವಣಗೆರೆ 13. ಧಾರವಾಡ 19. ಶಿವಮೊಗ್ಗ 37. ವಿಜಯಪುರ 10 ಪ್ರಕರಣ ದಾಖಲಾಗಿದೆ.












Click it and Unblock the Notifications