• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಪ ಚುನಾವಣೆ; ಮತದಾನಕ್ಕೆ ಈ ದಾಖಲೆ ಬಳಸಬಹುದು

|

ಬೆಂಗಳೂರು, ಡಿಸೆಂಬರ್ 04 : ಕರ್ನಾಟಕದ 15 ವಿಧಾನಸಭಾ ಕ್ಷೇತ್ರಗಳಿಗೆ ಗುರುವಾರ ಉಪ ಚುನಾವಣೆ ನಡೆಯಲಿದೆ. ಚುನಾವಣಾ ಆಯೋಗ ಮತದಾನಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಬೆಳಗ್ಗೆ 7 ರಿಂದ ಸಂಜೆ 6ರ ತನಕ ಮತದಾನ ಮಾಡಲು ಅವಕಾಶವಿದೆ.

ಡಿಸೆಂಬರ್ 5ರ ಗುರುವಾರ ಮತದಾನ ಮಾಡಲು ಅನುಕೂಲವಾಗುವಂತೆ 15 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರಜೆ ಘೋಷಣೆ ಮಾಡಲಾಗಿದೆ. ಖಾಸಗಿ ಕಂಪನಿಗಳು ರಜೆ ನೀಡುವಂತೆ ಆಯೋಗ ಸೂಚನೆ ನೀಡಿದೆ.

ಉಪ ಚುನಾವಣಾ ಪ್ರಚಾರ ಮುಕ್ತಾಯ; ನಡೆದಿದೆ ಕೊನೆ ಕ್ಷಣದ ಕಸರತ್ತು!ಉಪ ಚುನಾವಣಾ ಪ್ರಚಾರ ಮುಕ್ತಾಯ; ನಡೆದಿದೆ ಕೊನೆ ಕ್ಷಣದ ಕಸರತ್ತು!

ಚುನಾವಣಾ ಆಯೋಗ ಮತದಾನ ಮಾಡಲು ಬೇಕಾದ ಗುರುತಿನ ಚೀಟಿಗಳನ್ನು ಬಿಡುಗಡೆ ಮಾಡಿದೆ. ಆಯೋಗ ನೀಡುವ ಮತದಾರರ ಗುರುತಿನ ಚೀಟಿ ಇಲ್ಲವಾದಲ್ಲಿ ಈ ದಾಖಲೆಗಳನ್ನು ತೋರಿಸಿ ಮತದಾನ ಮಾಡಬಹುದಾಗಿದೆ.

15 ಕ್ಷೇತ್ರದ ಉಪ ಚುನಾವಣೆ; ಬಿಜೆಪಿ ಆಂತರಿಕ ಸಮೀಕ್ಷೆ ವರದಿ 15 ಕ್ಷೇತ್ರದ ಉಪ ಚುನಾವಣೆ; ಬಿಜೆಪಿ ಆಂತರಿಕ ಸಮೀಕ್ಷೆ ವರದಿ

ಬೆಂಗಳೂರು ನಗರದ 4 ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ರಾಜ್ಯದ 15 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಚುನಾವಣಾ ಸಿಬ್ಬಂದಿಗಳು ಬುಧವಾರ ಸಂಜೆ ವೇಳೆಗೆ ಮತದಾನ ಕೇಂದ್ರಕ್ಕೆ ತೆರಳಲಿದ್ದಾರೆ.

ಉಪ ಚುನಾವಣೆ ಪ್ರಚಾರಕ್ಕೆ ತೆರೆ, ಹಲವು ನಾಯಕರಿಂದ ನೀತಿ ಸಂಹಿತೆ ಉಲ್ಲಂಘನೆಉಪ ಚುನಾವಣೆ ಪ್ರಚಾರಕ್ಕೆ ತೆರೆ, ಹಲವು ನಾಯಕರಿಂದ ನೀತಿ ಸಂಹಿತೆ ಉಲ್ಲಂಘನೆ

ಯಾವ-ಯಾವ ಗುರುತಿನ ಚೀಟಿಗಳು

* ಪಾಸ್ ಪೋರ್ಟ್
* ಡ್ರೈವಿಂಗ್ ಲೈಸೆನ್ಸ್
* ಎಂನರೇಗಾ ಜಾಬ್ ಕಾರ್ಡ್
* ಪಾನ್ ಕಾರ್ಡ್
* ಭಾವಚಿತ್ರವಿರುವ ಪಿಂಚಣಿ ದಾಖಲಾತಿ
* ಬ್ಯಾಂಕ್/ಪೋಸ್ಟ್ ಆಫೀಸ್ ನೀಡುವ ಭಾವಚಿತ್ರ ಇರುವ ಪಾಸ್ ಬುಕ್
* ಕಾರ್ಮಿಕ ಸಚಿವಾಲಯದಿಂದ ನೀಡಿರುವ ಆರೋಗ್ಯ ಕಾರ್ಡ್
* ಆರ್‌ಜಿಐ ಅಡಿಯಲ್ಲಿ ಎನ್‌ಪಿಆರ್ ನೀಡಿರುವ ಸ್ಮಾರ್ಟ್ ಕಾರ್ಡ್
* ಎಂಪಿ/ಎಂಎಲ್‌ಎ/ಎಂಎಲ್‌ಸಿಗಳಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ
* ಆಧಾರ್ ಕಾರ್ಡ್
* ಕೇಂದ್ರ/ರಾಜ್ಯ ಸರ್ಕಾರ/ಸಾರ್ವಜನಿಕ ವಲಯದ ಉದ್ದಿಮೆ/ ಸಾರ್ವಜನಿಕ ಸೀಮಿತ ಕಂಪನಿಗಳ ನೌಕರರಿಗೆ ನೀಡಿರುವ ಫೋಟೋ ಇರುವ ಗುರುತಿನ ಚೀಟಿ

English summary
Election commission released the list of id cards for voting. 15 seat by elections voting will be held on December 5, 2019 at Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X